Prakash Raj: ಇಷ್ಟೆಲ್ಲ ಆದರೂ ಸುಮ್ಮನಿರದ ಪ್ರಕಾಶ್ ರಾಜ್- ಚಂದ್ರಯಾನ ಯಶಸ್ಸಿನ ಕುರಿತು ಮತ್ತೆ ಹೇಳಿದ್ದೇನು ಗೊತ್ತೇ?
Prakash Raj: ನೀವು ಸೋಶಿಯಲ್ ಮೀಡಿಯಾ ಅನ್ನು ಹೆಚ್ಚಾಗಿ ಬಳಸುತ್ತಿದ್ದರೆ ಗಮನಿಸಿರಬಹುದು ಪ್ರಕಾಶ್ ರಾಜ್ ಅವರು ಚಂದ್ರಯಾನ 3(Chandrayaan 3) ಅನ್ನು ಚಂದ್ರನ ಮೇಲೆ ಲ್ಯಾಂಡ್ ಆಗುವುದಕ್ಕಿಂತ ಒಂದು ದಿನ ಮುಂಚೆ ಪರಕ್ಷವಾಗಿಯೇ ಟೀಕಿಸುವ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಮ್ಮ ಭಾರತ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಟೀಕಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದಾಗಿ ಕೂಡ ಪ್ರಕಾಶ್ ರಾಜ್ ಅವರ ವಿರುದ್ಧ ವ್ಯಾಪಕವಾಗಿ ಅಸಮಾಧಾನಗಳು ಹೊರ ಬಂದಿದ್ದವು. ಇಷ್ಟೇ ಯಾಕೆ ಪ್ರಕಾಶ್ ರಾಜ್ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸುವಂತಹ ವಿಚಾರಗಳ ಬಗ್ಗೆ ಕೂಡ ಕೇಳಿ ಬಂದಿದ್ದವು.
ಆದರೆ ಮಾರನೇ ದಿನ ಪ್ರಕಾಶ್ ರಾಜ್(Prakash Raj) ಅವರು ಚಂದ್ರಯಾನ್ 3 ವಿಚಾರದಲ್ಲಿ ಯಶಸ್ಸನ್ನು ಸಾಧಿಸಿದ ಕೂಡಲೇ ಇಸ್ರೋ(ISRO) ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸುವಂತಹ ಪೋಸ್ಟ್ಗಳನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಇದರ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಎಗ್ಗಾಮುಗ್ಗ ಟೀಕೆಯನ್ನು ಮಾಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ನ್ಯಾಷನಲ್ ನ್ಯೂಸ್ ಆಗಿತ್ತು ಎಂದು ಕೂಡ ತಪ್ಪಾಗಲ್ಲ. ಇದೇ ಸಂದರ್ಭದಲ್ಲಿ ಅವರು ತಾವು ಹೇಳೋಕೆ ಹೊರಟಿದ್ದೆ ಬೇರೆ ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದು ಬೇರೆ ರೂಪವನ್ನು ಪಡೆದುಕೊಂಡಿದೆ ಎಂಬುದಾಗಿ ಸಮಜಾಯಿಷಿ ಕೊಡಲು ಹೋಗುತ್ತಾರೆ.
ಹೌದು ಲ್ಯಾಂಡ್ ಗೂ ಮುನ್ನವೇ ನಾನು ಶೇರ್ ಮಾಡಿದ ಫೋಟೋ ಸಾಕಷ್ಟು ವರ್ಷಗಳ ಹಿಂದಿನ ಜೋಕ್ ಆಗಿತ್ತು ಆದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿ ಬೇರೆ ಅರ್ಥ ಬರುವಂತೆ ಮಾಡಲಾಗಿದೆ ಎಂಬುದಾಗಿ ಪ್ರಕಾಶ್ ರಾಜ್ (Prakash Raj) ಮತ್ತೊಂದು ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೋದಿ(Modi) ಬೆಂಬಲಿಗರಿಗೆ ಪ್ರಕಾಶ್ ರಾಜ್ ಈ ಸಂದರ್ಭದಲ್ಲಿ ಈ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.
ನಾನು ಆ ಫೋಟೋದಲ್ಲಿ ಹೇಳಿದ್ದು 1969ರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟಿದ್ದು ನೀಲ್ ಆರ್ಮ್ ಸ್ಟ್ರಾಂಗ್(Neil Armstrong) ಅಲ್ಲ ಬದಲಾಗಿ ಮಲಯಾಳಿ ಚಾಯ್ ವಾಲಾ ಅನ್ನೋದಾಗಿ ಆ ಸಂದರ್ಭದಲ್ಲಿ ಒಂದು ಜೋಕ್ ಪ್ರಾರಂಭವಾಗಿತ್ತು ಅದನ್ನೇ ನಾನು ಇಲ್ಲಿ ಹೇಳಲು ಹೊರಟಿದ್ದೆ ಆದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಲಾಗಿದೆ ಈ ಜೋಕ್ 1960ರ ಸಂದರ್ಭದಲ್ಲಿ ಕೇರಳದ ಮಲಯಾಳಿಗಳ ನಡುವೆ ಪ್ರಸಿದ್ಧವಾಗಿದೆ ಎಂಬುದನ್ನು ಕೂಡ ಈ ಪೋಸ್ಟ್ ನಲ್ಲಿ ಅವರು ಉಲ್ಲೇಖಿಸುತ್ತಾರೆ.
ಈ ಸಂದರ್ಭದಲ್ಲಿ ಅವರು ಮೋದಿ ಬೆಂಬಲಿಗರನ್ನು ಕುಟುಕುತ್ತಾ ನಿಮಗೆ ಗೊತ್ತಿರೋದು ಒಬ್ಬನೇ ಚಾಯ್ ವಾಲಾ ಅದಕ್ಕಾಗಿ ನೀವು ಹೀಗೆ ಹೇಳುತ್ತಿದ್ದೀರಾ, ಆದರೆ ನಾನು ನನಗೆ ಗೊತ್ತಿರುವ 1960ರ ದಶಕದಿಂದಲೂ ಪ್ರಸಿದ್ಧತೆಯನ್ನು ಹೊಂದಿರುವ ಮಲಯಾಳಿ ಚಾಯ್ ವಾಲಾ(Malyali Chaiwala) ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂಬುದಾಗಿ ಪ್ರಕಾಶ್ ರಾಜ್ (Prakash Raj) ಅವರು ತಮ್ಮ ಮೇಲೆ ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದ ಆರೋಪವನ್ನು ಮರೆಮಾಚುವ ನಿಟ್ಟಿನಲ್ಲಿ ಈ ಹೇಳಿಕೆಯನ್ನು ನೀಡಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇವುಗಳನ್ನು ಓದಿ- ಹೆಲ್ಮೆಟ್ ಧರಿಸಿದರೂ ಕೂಡ ಕೂದಲು ಉದುರದೆ ಇರಲು ಏನು ಮಾಡಬೇಕು ಗೊತ್ತೇ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ.
Monsoon Car Care Tips: ಮಳೆಗಾಲದಲ್ಲಿ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ರಕ್ಷಿಸಲು ಈ ಟ್ರಿಕ್ ಬಳಸಿ- ಮೆಕ್ಯಾನಿಕ್ ಬಳಿ ಹೋಗುವ ಅಗತ್ಯ ಇರಲ್ಲ.
Comments are closed.