Srinivasa Sethu: ಹೊಸದಾಗಿ ಓಪನ್ ಆಗುತ್ತಿದೆ ಶ್ರೀನಿವಾಸ್ ಸೇತು ಎಕ್ಸ್ಪ್ರೆಸ್ ವೇ- ಇನ್ನು ಮುಂದೆ ತಿರುಪತಿ ಭಕ್ತರಿಗೆ ಸಿಹಿ ಸುದ್ದಿ.
Srinivasa Sethu – ನಮಸ್ಕಾರ ಸ್ನೇಹಿತರೆ ಹಿಂದೂ ಧರ್ಮವನ್ನು ಪರಿಪಾಲಿಸುವವರಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿರುವಂತಹ ತಿರುಪತಿ ತಿಮ್ಮಪ್ಪನ(Tirupathi Thimmappa) ಭಕ್ತರಿಗೆ ಸೆಪ್ಟೆಂಬರ್ 18ಕ್ಕೆ ಗುಡ್ ನ್ಯೂಸ್ ಸಿಗಲಿದೆ. ಶ್ರೀನಿವಾಸ ಸೇತು ಎಕ್ಸ್ಪ್ರೆಸ್ ವೇ(Srinivas Setu Express Way) ಅನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿರುವಂತಹ ಜಗನ್ಮೋಹನ್ ರೆಡ್ಡಿ ಸೆಪ್ಟೆಂಬರ್ 18ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವಿಚಾರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ವಿವರಿಸಲು ಹೊರಟಿದ್ದೇವೆ. ಕರುನಾಡಿನ ಬಾಂಧವರೇ- ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೇ ಅವರಿಗೆ ಉಚಿತ ಲ್ಯಾಪ್ಟಾಪ್ ನೀಡುವ ಯೋಜನೆ ರೂಪಿಸಲಾಗುತ್ತಿದೆ- ಇದರ ಮಾಹಿತಿ ಪಡೆಯಲು ಈ ಲೇಖನದ ಕೊನೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ವಿಶೇಷ ದಿನದಂದು ಸಾಕಷ್ಟು ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂಬುದಾಗಿ ತಿಳಿದು ಬಂದಿದೆ. ಹೌದು ವಾರ್ಷಿಕ ಬ್ರಹ್ಮೋತ್ಸವದ ಮೊದಲ ದಿನ ಆಗಿದ್ದು ಸೆಪ್ಟೆಂಬರ್ 18ರಂದು ಗೆಸ್ಟ್ ಹೌಸ್‌ಗಳನ್ನು ಕೂಡ ಉದ್ಘಾಟನೆ ಮಾಡಲಿದ್ದಾರೆ. ನಿಮಗೆಲ್ಲರಿಗೂ ತಿಳಿದಿರಬಹುದು ತಿರುಪತಿಗೆ ಪ್ರತಿದಿನ ಒಂದುವರೆ ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ. ತಿರುಚನೂರು ಹಾಗೂ ಕಪಿಲ ತೀರ್ಥಂ ನಡುವೆ ತಿರುಪತಿಗೆ ಹೋಗುವ ದಾರಿಯಲ್ಲಿ 7 ಕಿ.ಮೀ ವರೆಗೂ ಕೂಡ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ ಇದೇ ಕಾರಣಕ್ಕಾಗಿ ಈ ಸಮಸ್ಯೆಯಿಂದ ಪರಿಹಾರ ಪಡೆಯಲು, ತಿರುಪತಿ ತಿಮ್ಮಪ್ಪನ ಭಕ್ತರಿಗೆ ಆಂಧ್ರಪ್ರದೇಶದ ಸರ್ಕಾರ(Andhra Pradesh Government) ಈಗ ಹೊಸ ಸಂತೋಷದ ಸುದ್ದಿ ನೀಡಿದೆ ಎಂದು ಹೇಳಬಹುದಾಗಿದೆ.
ಇದೇ ಕಾರಣಕ್ಕಾಗಿ ಇಲ್ಲಿ ಫ್ಲೈ ಓವರ್ ಅನ್ನು ಮಾಡುವಂತಹ ಯೋಜನೆಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಕೂಡ ಪೂರಕವಾಗಿ ಕಾಣಿಸಿಕೊಂಡಿತ್ತು. ಮಾರ್ಚ್ ತಿಂಗಳಲ್ಲಿ 90 ಪ್ರತಿಶತ ಪೂರ್ಣವಾಗಿದ್ದ ಈ ಸೇತುವೆ ಕಾರ್ಯ ಬರೋಬ್ಬರಿ 680 ಕೋಟಿ ರೂಪಾಯಿ ಖರ್ಚಾಗಿತ್ತು ಎಂಬುದಾಗಿ ಕೂಡ ತಿಳಿದು ಬಂದಿದೆ. ಮೇ 15ರೊಳಗೆ ಈ ಕೆಲಸ ಪೂರೈಕೆ ಆಗಬೇಕು ಎನ್ನುವುದಾಗಿ TTD ಆಡಳಿತ ಮಂಡಳಿಯಿಂದ ಆದೇಶ ಹೊರಬಂದಿತ್ತು. ಬೇರೆ ಬೇರೆ ಕಾರಣಗಳಿಗೆ ಸಂಪೂರ್ಣಗೊಳ್ಳುವುದು ತಡವಾಗಿದ್ರೂ ಕೂಡ ಈಗ ಲೇಟ್ ಆಗಿ ಆದ್ರೂ ಲೇಟೆಸ್ಟ್ ಆಗಿ ಸಿದ್ಧವಾಗಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ಭಕ್ತ ಅಭಿಮಾನಿಗಳಿಗೂ ಕೂಡ ಸಂತೋಷವನ್ನು ತಂದಿದೆ ಎಂದು ಹೇಳಬಹುದಾಗಿದೆ. ಕೊನೆಗೂ ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್ಪ್ರೆಸ್ ವೇ(Srinivas Setu Elevated Express Way) ಸಪ್ಟೆಂಬರ್ 18ಕ್ಕೆ ಲೋಕಾರ್ಪಣೆ ಆಗೋದಕ್ಕೆ ಸಿದ್ಧವಾಗಿ ನಿಂತಿದೆ ಎಂದು ಹೇಳಬಹುದಾಗಿದೆ.
ಮೊದಲು ಇದೇ ದಾರಿಯನ್ನು 40 ನಿಮಿಷಗಳಿಗೂ ಅಧಿಕಕಾಲ ಕ್ರಮಿಸಿ ಪ್ರಯಾಣ ಮಾಡಬೇಕಾಗಿತ್ತು ಆದರೆ ಈಗ ಕೇವಲ ಹತ್ತು ನಿಮಿಷಗಳಲ್ಲಿ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಹೋಗುವಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎನ್ನುವುದಾಗಿ ಹೇಳಬಹುದಾಗಿದೆ. ಈ ಮೂಲಕ ಸಂಚಾರಿ ಸಮಸ್ಯೆಗಳು ಕೂಡ ತಪ್ಪಲಿದೆ ಎಂದು ಹೇಳಬಹುದಾಗಿದೆ. ಘಾಟ್ ಸೆಕ್ಷನ್ನಲ್ಲಿ ದ್ವಿಚಕ್ರ ಹಾಗೂ ಪಾದ ಚಾರಿಗಳಿಗೆ ಕೆಲವೊಂದು ನಿರ್ದಿಷ್ಟ ಸಮಯಕ್ಕೆ ಪ್ರಯಾಣವನ್ನು ಕೂಡ ನಿಷೇಧಿಸಿರುವುದು ಚಿರತೆ ದಾ’ ಳಿಯ ನಂತರ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.
ಶ್ರೀನಿವಾಸ ಸೇತು ಲೋಕಾರ್ಪಣೆ(Srinivas Setu Inauguration) ಆಗುತ್ತಿರುವುದು ಖಂಡಿತವಾಗಿ ನಿಜಕ್ಕೂ ಕೂಡ ಪ್ರವಾಸಿಗರಿಗೆ ಸಾಕಷ್ಟು ಲಾಭವನ್ನು ನೀಡುವಂತಹ ಹಾಗೂ ಅವರ ಸಮಯವನ್ನು ಉಳಿಸುವಂತಹ ಕೆಲಸವನ್ನು ಮಾಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೆಲ್ಲಾ ಯಶಸ್ವಿಯಾಗಿ ಕೆಲಸ ಮುಗಿದು ಈಗ ಲೋಕಾರ್ಪಣೆಗೆ ಸಜ್ಜಾಗಿದ್ದರು ಕೂಡ ಕೆಲವು ಸ್ಥಳೀಯರು ಮೇ ತಿಂಗಳಿನಲ್ಲಿಯೇ ಲೋಕಾರ್ಪಣೆ ಆಗಬೇಕಾಗಿದ್ದ ಕಾಮಗಾರಿ ಇಷ್ಟೊಂದು ತಡವಾಗಿ ಲೋಕಾರ್ಪಣೆಯಾಗುತ್ತಿರುವುದು ಕೊಂಚಮಟ್ಟಿಗೆ ಬೇಸರ ಇದೆ ಎನ್ನುವುದಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ – Karnataka Ganga Kalyana Scheme 2023
Comments are closed.