Neer Dose Karnataka
Take a fresh look at your lifestyle.

Gruha lakshmi Scheme: 2000 ರೂಪಾಯಿ ಬಂದಿಲ್ಲ ಅಂದ್ರೆ ಈ ಚಿಕ್ಕ ಕೆಲಸ ಮಾಡಿ- ಟಕ್ ಅಂತ ಅಕೌಂಟ್ ಗೆ ಹಣ ಬರುತ್ತೆ. ಅತಿ ಸುಲಭ ವಿಧಾನ.

Gruha lakshmi Scheme: ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಲಾಂಚ್ ಮಾಡಿರುವಂತಹ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಮನೆಯ ಒಡತಿಗೆ ಪ್ರತಿ ತಿಂಗಳಿಗೆ 2000 ನೀಡಲು ಪ್ರಾರಂಭಿಸಿದೆ. ಹೇಗಿದ್ರು ಕೂಡ ಸಾಕಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಅಡಿಯಲ್ಲಿ ಇನ್ನೂ ಕೂಡ ಹಣ ಖಾತೆಗೆ ಬಂದಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಅದರ ಬಗ್ಗೆ ನಿಮಗೆ ಕೆಲವೊಂದು ಪರಿಹಾರಾತ್ಮಕ ಮಾಹಿತಿಗಳನ್ನು ನೀಡಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

Gruha lakshmi Scheme- ರೇಷನ್ ಕಾರ್ಡ್ ನಲ್ಲಿ ಮಾಡಿರಬೇಕು ಈ ಬದಲಾವಣೆ.

ನಿಮಗೆಲ್ಲರಿಗೂ ಮೊದಲಿಗೆ ಈ ವಿಚಾರ ತಿಳಿದಿರಲಿ ಅದೇನೆಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಮಾಲೀಕರ ಅಥವಾ ಕುಟುಂಬದ ಒಡೆಯರ ಹೆಸರಿನ ಜಾಗದಲ್ಲಿ ಮನೆಯ ಹಿರಿಯ ಮಹಿಳೆಯ ಹೆಸರು ಇರಬೇಕು(Ration Card Owner’s Name should Be In Women’s Name) ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲಿ ಪುರುಷರು ಇದ್ದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮಗೆ ಹಣ ಸಿಗುವುದಿಲ್ಲ ಎಂಬುದು ಕೂಡ ನೀವು ತಿಳಿದುಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಈ ರೀತಿ ಗಂಡಸರ ಹೆಸರು ಇದ್ದರೆ ಕೇವಲ ಗೃಹಲಕ್ಷ್ಮಿ ಯೋಜನೆ ಹಣ ಮಾತ್ರ ಅಲ್ಲ ಅನ್ನಭಾಗ್ಯ ಯೋಜನೆಯ ಹಣ ಕೂಡ ಸಿಗೋದಿಲ್ಲ.

ಇನ್ನು ನಿಮ್ಮ ಕುಟುಂಬಕ್ಕೆ ಕೇವಲ 399 ರೂಪಾಯಿ ಯಲ್ಲಿ 10 ಲಕ್ಷದ ಇನ್ಶೂರೆನ್ಸ್ ಬೇಕೇ? ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ. –> Postal Insurance Plans in Kannada
 ಒಂದು ಲಕ್ಷದಲ್ಲಿ ಮನೆಗೆ ತನ್ನಿ ಹೊಸ ಕಾರು –> Maruti Brezza

ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ನೀಡಿದೆ ಅವಕಾಶ.

ಈಗಾಗಲೇ ಸರ್ಕಾರ ಮನೆಯಲ್ಲಿ ಯಾರಾದರೂ ಮಹಿಳಾ ಒಡತಿ ಇದ್ದಲ್ಲಿ ಅವರ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಕೂಡ ಅಪ್ಡೇಟ್ ಮಾಡಲು ಸೆಪ್ಟೆಂಬರ್ 1ರಿಂದ 10ನೇ ತಾರೀಖಿನವರೆಗೂ ಕೂಡ ಅವಕಾಶವನ್ನು ನೀಡಿರುವುದನ್ನು ಕೂಡ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬಹುದಾಗಿದ್ದು ಆದಷ್ಟು ಬೇಗ ಹೋಗಿ ಈ ಕೆಲಸವನ್ನು ಮಾಡಿಕೊಂಡಲ್ಲಿ ಮಾತ್ರ ನಿಮಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಭಾಗ್ಯ ಎರಡು ಯೋಜನೆಗಳ ಹಣ(Gruha Lakshmi Scheme Money) ನಿಮ್ಮ ಕುಟುಂಬದ ಖಾತೆಗೆ ಸೇರಲಿದೆ ಎನ್ನುವುದನ್ನು ಈ ಮೂಲಕ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಜಿಲ್ಲಾ ಆಹಾರ ಇಲಾಖೆಯ ಕಚೇರಿಯ ಸಹಾಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ರೇಷನ್ ಕಾರ್ಡ್ ನಲ್ಲಿ ಯಾವೆಲ್ಲ ತಿದ್ದುಪಡಿಗಳನ್ನು ಮಾಡಿಸುವಂತಹ ಅವಕಾಶವಿದೆ

ಈಗಾಗಲೇ ಮರಣ ಹೊಂದಿರುವಂತಹ ಸದಸ್ಯರನ್ನು ರೇಷನ್ ಕಾರ್ಡ್ ನಿಂದ ಹೊರ ಹಾಕುವಂತಹ ಅವಕಾಶವಿದೆ ಅಥವಾ ಅವರನ್ನು ಬದಲಾಯಿಸಿ ಕುಟುಂಬದ ಒಡೆಯರ ಜಾಗಕ್ಕೆ ಈಗಾಗಲೇ ಜೀವಂತ ಇರುವಂತಹ ಕುಟುಂಬದ ಹಿರಿಯ ಮಹಿಳೆಯ ಹೆಸರನ್ನು ಸೇರಿಸಬಹುದು. ಸದ್ಯದ ಮಟ್ಟಿಗೆ ಹೊಸ ಪಡಿತರ ಚೀಟಿಗೆ ಅವಕಾಶವನ್ನು ಮಾಡಿಕೊಟ್ಟಿಲ್ಲ ಎಂಬುದು ಕೂಡ ತಿಳಿದು ಬಂದಿದೆ. eKYC ಹಾಗೂ ಬ್ಯಾಂಕ್ ಖಾತೆ ಸರಿಯಾಗಿ ಲಿಂಕ್ ಆಗಿಲ್ಲದಿದ್ದಲ್ಲಿ ಈ ಸಂದರ್ಭದಲ್ಲಿ ಸರಿ ಮಾಡಿಸಿಕೊಳ್ಳಬಹುದಾಗಿದೆ.

ನಿಮಗೆ ವಾಹನದ ಅಗತ್ಯವಿದೆಯೇ? ಆದರೆ ದುಡ್ಡು ಇಲ್ಲವೇ? ಸರ್ಕಾರ ನೀಡುತ್ತೆ 3 ಲಕ್ಷ- ಅದು ಉಚಿತ. ಹೇಗೆ ಎಂದು ತಿಳಿಯಲು ಈ ಲೇಖನ ಓದಿ –> Vehicle Subsidy Scheme

ಖಂಡಿತವಾಗಿ ಇವಿಷ್ಟು ಸಮಸ್ಯೆಗಳ ಕಾರಣದಿಂದಲೇ ನಿಮ್ಮ ಖಾತೆಗೆ ಹಣ ಬಂದಿರುವುದಿಲ್ಲ ಇವುಗಳನ್ನು ಸರಿ ಮಾಡಿಸಿದ ನಂತರ ನಿಮ್ಮ ಖಾತೆಗೆ ಬೇರೆಯವರ ಹಾಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ವರ್ಗಾವಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Follow Us on Google News
Follow Us on Google News
Click Here to Join Whatsapp Group
Click Here to Join Whatsapp Group
Click Here to Join Telegram Group
Click Here to Join Telegram Group

Comments are closed.