Schemes For Women: ಸಿದ್ದು ಸರ್ಕಾರ ಕೊಡುವ ಗೃಹಲಕ್ಷ್ಮಿ ಅಷ್ಟೇ ಅಲ್ಲಾ, ಕೇಂದ್ರ ಮಹಿಳೆಯರಿಗೆ ಹಣ ಕೊಡುವ ಯೋಜನೆಗಳು. ಎಷ್ಟೆಲ್ಲ ಲಾಭ ಗೊತ್ತೇ?
Schemes For Women: ನಮಸ್ಕಾರ ಸ್ನೇಹಿತರೇ ನರೇಂದ್ರ ಮೋದಿ(Narendra Modi) ರವರ ನೇತೃತ್ವ ಕೇಂದ್ರ ಸರ್ಕಾರ ಪ್ರತಿ ವರ್ಷವೂ ಕೂಡ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ಕೂಡ ತರಲಾಗುತ್ತದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಮಹಿಳಾ ಯೋಜನೆಗಳನ್ನು ಕೂಡ ಜಾರಿ ತರಲಾಗಿದೆ. ಹಾಗಿದ್ದರೆ ಬನ್ನಿ ಆ ಪ್ರಮುಖ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Best Money Schemes For Women: Explained clearly in Kannada
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ(Mahila Samman Saving Certificate Scheme) ಮಹಿಳೆಯರನ್ನು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠರಾಗಿ ಮಾಡಿಸಬೇಕು ಎನ್ನುವ ಕಾರಣಕ್ಕಾಗಿ ನಮ್ಮ ದೇಶದ ಆರ್ಥಿಕ ಸಚಿವರಾಗಿರುವಂತಹ ನಿರ್ಮಲ ಸೀತಾರಾಮನ್ ರವರು 2023ರ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಈ ಯೋಜನೆಯ ಪ್ರಸ್ತಾಪನೆಯನ್ನು ಆರಂಭಿಸುತ್ತಾರೆ. ಈ ಯೋಜನೆಯಲ್ಲಿ ಒಮ್ಮೆಲೆ ಹಣವನ್ನು ಹೂಡಿಕೆ ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ ಹಾಗೂ ಗರಿಷ್ಠ 2 ಲಕ್ಷ ರೂಪಾಯಿಗಳ ವರೆಗೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದ್ದು ಇದೊಂದು ಚಿಕ್ಕ ಉಳಿತಾಯ ಯೋಜನೆಯಾಗಿದೆ ಎಂದು ಹೇಳಬಹುದು. ಈ ಯೋಜನೆಯ ಮೇಲೆ ಸರ್ಕಾರ ಮಹಿಳೆಯರಿಗೆ 7.5% ಬಡಿದರವನ್ನು ವರ್ಷಕ್ಕೆ ಅವರು ಹಾಕಿರುವಂತಹ ಹಣಕ್ಕೆ ನೀಡಲಿದೆ.
ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು. Business Ideas
ಸುಕನ್ಯಾ ಸಮೃದ್ಧಿ ಯೋಜನೆ(Sukanya Samruddhi Scheme) ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಅತ್ಯಂತ ಪ್ರಮುಖವಾಗಿದ್ದು ಅದೇ ನೆಲೆಯಲ್ಲಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸುತ್ತದೆ ಹಾಗೂ 10 ವರ್ಷ ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಕೂಡ ಈ ಯೋಜನೆಯನ್ನು ಪ್ರಾರಂಭಿಸಬಹುದು ಎಂಬುದಾಗಿ ಜನರಿಗೆ ಕರೆ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಟ್ಯಾಕ್ಸ್ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು 250 ರೂಪಾಯಿ ಗಳಿಂದ ಪ್ರಾರಂಭಿಸಿ 1.5 ಲಕ್ಷ ರೂಪಾಯಿಗಳ ವರೆಗೂ ಕೂಡ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಬಹುದಾಗಿದೆ. ಸರ್ಕಾರ ಮೆಚುರಿಟಿ ಮುಗಿದ ನಂತರ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿರುವಂತಹ ಪೋಷಕರಿಗೆ ಒಳ್ಳೆಯ ಬಡ್ಡಿ ದರವನ್ನು ಕೂಡ ಸೇರಿಸಿ ನೀಡುತ್ತದೆ.
ಸಖಿ ನಿವಾಸ್ ಯೋಜನೆ(Sakhi Nivas Scheme) ನಮ್ಮ ದೇಶದಲ್ಲಿ ವಸತಿ ಸೌಕರ್ಯದ ಕೊರತೆ ಸಾಕಷ್ಟು ಇದ್ದು ಇದನ್ನು ಪರಿಗಣಿಸಿರುವಂತಹ ಕೇಂದ್ರ ಸರ್ಕಾರ ಅದ್ರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸಖಿ ನಿವಾಸ್ ಯೋಜನೆ ಮೂಲಕ ಮಹಿಳೆಯರಿಗೆ ಕಡಿಮೆ ಬಾಡಿಗೆಯಲ್ಲಿ ಜಾತಿ ಹಾಗೂ ಧರ್ಮದ ಯಾವುದೇ ವ್ಯತ್ಯಾಸ ನೋಡದೆ ಹಾಸ್ಟೆಲ್ ಗಳನ್ನು ಎಲ್ಲ ವರ್ಗದ ಮಹಿಳೆಯರಿಗೆ ಉಪಯೋಗವಾಗುವಂತೆ ನೀಡುವಂತಹ ಕೆಲಸಗಳು ಕೂಡ ಪ್ರಾರಂಭವಾಗಿವೆ. ಅದರಲ್ಲೂ ವಿಶೇಷವಾಗಿ ಕೆಲಸ ಮಾಡುವಂತಹ ಮಹಿಳೆಯರಿಗೆ ಇಂತಹ ನಿವಾಸಗಳು ಹೆಚ್ಚಾಗಿ ಬೇಕಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಈ ಉದ್ದೇಶದ ದೃಷ್ಟಿಯಿಂದಲೇ ಸಖಿ ನಿವಾಸ್ ಯೋಜನೆ ಪ್ರಾರಂಭವಾಗಿ ಈಗಾಗಲೇ ದೇಶಾದ್ಯಂತ ಇದು ಮಹಿಳೆಯರಿಗೆ ಸಹಾಯಕಾರಿಯಾಗುವ ರೀತಿಯಲ್ಲಿ ರೂಪಗೊಳ್ಳುತ್ತಿದೆ.
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮಹಿಳಾ ಶಕ್ತಿ ಕೇಂದ್ರ ಯೋಜನೆ(Mahila Shakti Kendra Scheme) ಡಿಜಿಟಲ್, ಶಿಕ್ಷಣ ಹಾಗೂ ಆರೋಗ್ಯದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಅಭಿವೃದ್ಧಿ ಸಾಧಿಸಬೇಕು ಎನ್ನುವ ಕಾರಣಕ್ಕಾಗಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಯಶಸ್ಸನ್ನು ಸಾಧಿಸಬೇಕು ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಯೋಜನೆಗಳು ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಈ ಯೋಜನೆಯನ್ನು ಸಾಕಾರಗೊಳಿಸುವಂತಹ ಪ್ರಯತ್ನ ಮಾಡುತ್ತಿವೆ. ಇದರ ಜೊತೆಗೆ ಮಹಿಳಾ ಸಹಾಯವಾಣಿ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದ್ದು 181 ಫ್ರೀ ನಂಬರ್ ಗೆ ಕರೆ ಮಾಡುವ ಮೂಲಕ ದೌ’ ರ್ಜನ್ಯಕ್ಕೆ ಒಳಗಾಗಿರುವಂತಹ ಮಹಿಳೆಯರು 24 ಗಂಟೆಗಳ ಒಳಗಾಗಿ ತುರ್ತು ಸಹಾಯವನ್ನು ನೀಡುವಂತಹ ನೀಡುವಂತಹ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದ್ದು ಈ ಪ್ರತಿಯೊಂದು ಯೋಜನೆಗಳು ಕೂಡ ದೇಶದ ಮಹಿಳೆಯರ ಹಿತಾಸಕ್ತಿಯ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
Comments are closed.