Personal Loan: ಖರ್ಚಿಗೆ ಕಾಸ್ ಇಲ್ಲ- ದಿಡೀರ್ ಅಂತ 20 ಸಾವಿರ ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ. ಟಕ ಟಕ ಅಂತ ಲೋನ್ ಕೊಡ್ತಾರೆ.
Personal Loan: ನಮಸ್ಕಾರ ಸ್ನೇಹಿತರೇ ಈ ವೇಗವಾಗಿ ಓಡುತ್ತಿರುವ ದುನಿಯಾದಲ್ಲಿ ಹಣ ಎಷ್ಟು ಇಂಪಾರ್ಟೆಂಟ್ ಅನ್ನೋದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಈ ವೇಗದ ದುನಿಯಾದಲ್ಲಿ ಬೆಲೆ ಏರಿಕೆ ಕೂಡ ಅಷ್ಟೇ ವೇಗದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಹಣ ಎಷ್ಟೇ ಇದ್ದರೂ ಕೂಡ ಕಡಿಮೆ ಅಂತಾನೆ ಅನ್ಸುತ್ತೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡೋಕೆ ಹೊರಟಿರೋದು ಒಂದು ವೇಳೆ ನಿಮಗೆ ಅರ್ಜೆಂಟಾಗಿ 20 ಸಾವಿರ ರೂಪಾಯಿಗಳ ಸಾಲ ಬೇಕು ಅಂತಾದ್ರೆ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎಂಬುದನ್ನು ನಿಮಗೆ ಇವತ್ತಿನ ಲೇಖನಿಯಲ್ಲಿ ಸರಿಯಾದ ರೀತಿಯಲ್ಲಿ ವಿವರಿಸೋಕೆ ಹೊರಟಿದ್ದೇವೆ.
ಲೋನ್ ಪಡೆದುಕೊಳ್ಳುವ ವಿಧಾನಗಳು- Different ways to get Personal Loan
- ನೀವು ಖಾತೆಯನ್ನು ಹೊಂದಿರುವಂತಹ ಬ್ಯಾಂಕಿಗೆ ಹೋಗಿ ಅಥವಾ ಅವರಿಗೆ ಸಂಪರ್ಕಿಸಿ ಪರ್ಸನಲ್ ಲೋನ್ ರೂಪದಲ್ಲಿ ನೀವು ಈ ಹಣವನ್ನು ಪಡೆದುಕೊಳ್ಳಬಹುದಾ ಎಂಬುದನ್ನು ಕೂಡ ಪರೀಕ್ಷಿಸಬಹುದಾಗಿದೆ.
- ಇತ್ತೀಚಿನ ದಿನಗಳಲ್ಲಿ ನೀವು ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಲೋನ್ ನೀಡುವಂತಹ NBFC ಕಂಪನಿಗಳ ಲೋನ್ ಅಪ್ಲಿಕೇಶನ್ ಗಳನ್ನು ಕೂಡ ಕಾಣಬಹುದಾಗಿದೆ. ಇವುಗಳ ಮೂಲಕ ಕೂಡ ನೀವು ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
- ಎಲ್ಲೂ ಸಾಲ ಸಿಗದೇ ಹೋದಲ್ಲಿ ಕೆಲವೊಮ್ಮೆ ಕುಟುಂಬಸ್ಥರ ಬಳಿ ಅಥವಾ ಸ್ನೇಹಿತರ ಬಳಿ ಕೂಡ ಸಾಲವನ್ನು ನೀವು ಅರ್ಜೆಂಟ್ ಆಗಿ ಪಡೆದುಕೊಳ್ಳಬಹುದು. ಆದರೆ ಸಂಬಂಧಿಕರಿಂದ ಹಾಗೂ ಸ್ನೇಹಿತರಿಂದ ಸಾಲವನ್ನು ಪಡೆದುಕೊಂಡು ಸರಿಯಾದ ಸಮಯದಲ್ಲಿ ಹಣವನ್ನು ಮರುಪಾವತಿ ಮಾಡದೆ ಹೋದಲ್ಲಿ ಸಂಬಂಧ ಹಾಳಾಗುತ್ತದೆ ಅನ್ನುವುದನ್ನು ಕೂಡ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
- ಎಲ್ಲೂ ಹಣ ಸಿಗದೆ ಹೋದಲ್ಲಿ ಕೊನೆಯ ಅವಕಾಶ ಎನ್ನುವ ರೀತಿಯಲ್ಲಿ ನೀವು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ ಅದನ್ನು ಎಟಿಎಂ ಮಷೀನ್ ನಲ್ಲಿ ಸ್ವೈಪ್ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ ಆದರೆ ಇದರ ಮೇಲೆ ಬಡ್ಡಿ ದರ ಹೆಚ್ಚಾಗಿರುತ್ತದೆ ಅನ್ನೋದನ್ನ ಕೂಡ ನೀವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಕೇವಲ ಎಮರ್ಜೆನ್ಸಿ ಸಂದರ್ಭದಲ್ಲಿ ಮಾತ್ರ ಈ ಪ್ರಕ್ರಿಯೆಯನ್ನು ಮಾಡಿ.
- ಒಂದು ವೇಳೆ ನಿಮ್ಮ ಬಳಿ ನಿಮ್ಮ ಸ್ವಂತ ಚಿನ್ನ ಇದ್ದರೆ ಅವುಗಳನ್ನು ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಅಡ ಇಡುವ ಮೂಲಕ ಅವುಗಳ ಪ್ರತಿಯಾಗಿ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇವುಗಳ ಮೇಲೆ ಬಡ್ಡಿ ಕೂಡ ಬೇರೆ ಸಾಲಗಳಿಗೆ ಹೋಲಿಸಿದರೆ ಕಡಿಮೆ ಆಗಿರುತ್ತದೆ ಹಾಗೂ ಅತ್ಯಂತ ಸುರಕ್ಷಿತ ಲೋನ್ ಆಗಿರುತ್ತದೆ.
- ಒಂದು ವೇಳೆ ನೀವು ಯಾವುದೇ ರೀತಿಯ ಇನ್ವೆಸ್ಟ್ಮೆಂಟ್ ಅಥವಾ ಮ್ಯೂಚುವಲ್ ಫಂಡ್ ರೀತಿಯ ಹೂಡಿಕೆಗಳನ್ನು ಬ್ಯಾಂಕಿನಲ್ಲಿ ಹೊಂದಿದ್ದರೆ ಅವುಗಳ ಬದಲಾಗಿ ನೀವು ಅದೇ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಹೋದಲ್ಲಿ ನೀವು ಸೆಕ್ಯೂರಿಟಿ ರೂಪದಲ್ಲಿ ಇಟ್ಟಿರುವಂತಹ ಮ್ಯೂಚುಯಲ್ ಫಂಡ್ ಅಥವಾ ಯಾವುದೇ ರೀತಿಯ ಹೂಡಿಕೆಗಳ ಹಣವನ್ನು ಸಾಲಕ್ಕೆ ಸಮ ಗೊಳಿಸಲಾಗುತ್ತದೆ.
ಇದನ್ನು ಕೂಡ ಓದಿ: Personal Loan: ಐದೇ ನಿಮಿಷದಲ್ಲಿ 20 ಲಕ್ಷದ ಲೋನ್ ಕೊಡ್ತಾರೆ-ಮೊಬೈಲ್ ಇಂದ ಅರ್ಜಿ, ಗ್ಯಾರಂಟಿ ಬೇಡ, ಗಿರವಿ ಬೇಡ.
ಈ ರೀತಿಯ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan
- ಪ್ರಮುಖವಾಗಿ ವಯೋ ಮಾನ್ಯತೆಯನ್ನು ಗಮನಿಸುವುದಾದರೆ ಕನಿಷ್ಠಪಕ್ಷ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
- ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿ ಒಂದು ನಿರ್ದಿಷ್ಟ ಆದಾಯವನ್ನು ಹೊಂದಿರಬೇಕು ಯಾಕೆಂದರೆ ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯ ಅವರಲ್ಲಿದೆ ಅನ್ನೋದನ್ನ ಸಾಬೀತುಪಡಿಸುವುದಕ್ಕೆ.
- ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅವರಿಗೆ ಬೇಕು ಎನಿಸುವಂತಹ ಮೊತ್ತವನ್ನು ಕಡಿಮೆ ಅಥವಾ ಉತ್ತಮವಾದ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು.
- KYC ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು ಹಾಗೂ ಉದ್ಯೋಗಿ ಅಥವಾ ಸೆಲ್ಫ್ ಎಂಪ್ಲಾಯ್ಡ್ ಆಗಿರುವಂತಹ ವ್ಯಕ್ತಿಯಾಗಿ ಇರಬೇಕು.
ಸಾಲ ನೀಡುವಂತಹ ಪ್ರತಿಯೊಂದು ಸಂಸ್ಥೆಗಳ ನಿಯಮಗಳು ಬೇರೆ ಬೇರೆ ಆಗಿರುತ್ತವೆ ಹೀಗಾಗಿ ಸಾಲ ಪಡೆದುಕೊಳ್ಳುವುದಕ್ಕಿಂತ ಮುಂಚೆ ಅವುಗಳನ್ನು ಪ್ರಮುಖವಾಗಿ ಗಮನಿಸಿ ನಂತರವೇ ಸಾಲ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು.
ಸಾಲ ಪಡೆದುಕೊಳ್ಳುವ ಮುನ್ನ ಗಮನಿಸಬೇಕಾಗಿರುವ ಅಂಶಗಳು- Important things to keep in mind
- ಪ್ರತಿಯೊಂದು ಸಂದರ್ಭದಲ್ಲಿ ನೀವು ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿ ಕೂಡ ಪ್ರಮುಖವಾಗಿರುತ್ತದೆ ಹೀಗಾಗಿ ಪ್ರತಿಯೊಂದು ಕಂಪನಿಗಳನ್ನು ಸರಿಯಾಗಿ ಹೋಲಿಕೆ ಮಾಡಿ ನಿಮಗೆ ಉತ್ತಮವಾಗಿರುವಂತಹ ಕಂಪನಿಯನ್ನು ಆಯ್ಕೆ ಮಾಡಿ.
- ಸಾಲವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ದೊಡ್ಡ ಸಮಯಾವಧಿಯನ್ನು ನೀಡಿದರೆ ಕಡಿಮೆ ಕಡಿಮೆ ಹಣದಲ್ಲಿ ದೀರ್ಘಕಾಲದವರಿಗೆ ಹಣವನ್ನು ಕಟ್ಟುತ್ತಾ ಹೋಗಬಹುದು. ಕಡಿಮೆ ಸಮಯದಲ್ಲಿ ಮರುಪಾವತಿ ಮಾಡುವಂತಹ ನಿಯಮ ಇದ್ರೆ, ನೀವು ಹೆಚ್ಚಿನ ಹಣವನ್ನು ಕಂತಿನ ರೂಪದಲ್ಲಿ ನೀಡಬೇಕಾಗಿರುತ್ತದೆ.
- ಈ ಸಂದರ್ಭದಲ್ಲಿ ನಿಮಗೆ ಎಷ್ಟು ಹಣವನ್ನು ನೀಡುತ್ತಾರೆ ಅದರ ಜೊತೆಗೆ ವಿಧಿಸಲಾಗುವಂತಹ ಚಾರ್ಜಸ್ ಗಳು ಯಾವುವು ಹಾಗೂ ಎಷ್ಟು ಎನ್ನುವುದನ್ನು ಕೂಡ ಪ್ರಮುಖವಾಗಿ ಗಮನಿಸಬೇಕಾಗುತ್ತದೆ. ಲೋನ್ ನೀಡುವಂತಹ ಸಂಸ್ಥೆ ಯಾವೆಲ್ಲಾ ಅರ್ಹತೆಗಳನ್ನು ನಿಯಮಗಳ ರೂಪದಲ್ಲಿ ಸೆಟ್ ಮಾಡಿದೆ ಎಂಬುದನ್ನು ಕೂಡ ತಿಳಿದುಕೊಳ್ಳಬೇಕಾಗುತ್ತದೆ .
Comments are closed.