Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ರಾಜ ನಂದಿನಿ ಪಾತ್ರಕ್ಕೆ ಎರಿಕಾ ಫರ್ನಾಂಡಿಸ್ ಅಲ್ಲ, ಮತ್ಯಾರು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲ್ಲಿ ದಾರವಾಹಿ ಆರಂಭವಾದ ಕೆಲವೇ ಕೆಲವು ದಿನಗಳ ಬಳಿಕ ಧಾರವಾಹಿಯಲ್ಲಿ ರಾಜನಂದಿನಿ ಯಾರು ಎಂಬ ಪ್ರಶ್ನೆ ಮೂಡಿತ್ತು. ಇಂದಿಗೂ ಕೂಡ ಆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ರಾಜ ನಂದಿನಿ ಅವರು ಆರ್ಯವರ್ಧರವರ ಹೆಂಡತಿ ಹಾಗೂ ಶಾರದಾ ದೇವಿಯವರ ಮಗಳು ಎಂಬುದು ತಿಳಿದಿದ್ದರೂ ಕೂಡ ಈ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ಈಗಲೂ ಕೂಡ ಪ್ರಶ್ನೆಯಾಗಿಯೇ ಉಳಿದಿದೆ

ಕಳೆದ ಕೆಲವು ತಿಂಗಳುಗಳ ಹಿಂದೆ ಪುನೀತ್ ರಾಜಕುಮಾರ್ ಅವರ ಜೊತೆ ಸಿನಿಮಾ ನಟಿಯಾಗಿ ನಟಿಸಿ ವಿವಿಧ ಭಾಷೆಯ ಧಾರವಾಹಿಗಳಲ್ಲಿ ನಟಿಸಿರುವ ಎರಿಕಾ ಫರ್ನಾಂಡಿಸ್ ಅವರು ಬಹು ನಿರೀಕ್ಷಿತ ರಾಜನಂದಿನಿ ಪಾತ್ರದಲ್ಲಿ ನಟನೆ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿತ್ತು, ಆದರೆ ಅಭಿಮಾನಿಗಳು ಒಂದುವೇಳೆ ಅದೇ ನಿಜ ಆದಲ್ಲಿ ನಿಜಕ್ಕೂ ನಮಗೆ ಅಸಮಾಧಾನವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದರು.

ಯಾಕೆಂದರೆ ಮೊದಲಿನಿಂದಲೂ ರಾಜನಂದಿನಿ ಪಾತ್ರದಲ್ಲಿ ನಟಿಸುವುದು ಅನುಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಥೇಟ್ ಅವರಂತೆಯೇ ರಾಜನಂದಿನಿ ಇರುತ್ತಾರೆ ಎಂದರೆ ಕಥೆಯಲ್ಲಿ ವಿವಿಧ ‌ ರೀತಿಯಲ್ಲಿ ಬದಲಾವಣೆ ಮಾಡ ಬೇಕಾಗುತ್ತದೆ ಎಂಬುದನ್ನು ಅರಿತ ಧಾರವಾಹಿ ತಂಡ ಇತರ ಕಲಾವಿದರನ್ನು ಕರೆತರಲು ನಿರ್ಧಾರ ಮಾಡಿತ್ತು. ಅದೇ ಕಾರಣಕ್ಕಾಗಿ ಇದೀಗ ಕನ್ನಡದ ವಿವಿಧ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದು ಕೊಂಡಿರುವ ಕವಿತಾ ಗೌಡ ಹಾಗೂ ಕಾವ್ಯ ಗೌಡರವರನ್ನು ರಾಜನಂದಿನಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಧಾರವಾಹಿ ತಂಡ ಆಲೋಚನೆ ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ.

Leave A Reply

Your email address will not be published.