
Quick Personal Loan: ದೇಶದ ಬೃಹತ್ ಬ್ಯಾಂಕ್ SBI ನಲ್ಲಿ ಸುಲಭವಾಗಿ ಸಿಗುತ್ತೆ 12 ಲಕ್ಷ ಲೋನ್- ಯಾವುದೇ ಗ್ಯಾರಂಟಿ ಬೇಡ.
Personal Loan: ನಮಸ್ಕಾರ ಸ್ನೇಹಿತರೆ ಅತ್ಯಂತ ಅರ್ಜೆಂಟ್ ಸಮಯದಲ್ಲಿ ಬೇಕಾಗುವಂತಹ ಲೋನ್ ಅಂದ್ರೆ ಅದು ಪರ್ಸನಲ್ ಲೋನ್ ಆಗಿರುತ್ತದೆ. ಇನ್ನು ಈ ಬಾರಿ ನೀವು ಲೋನ್ ಪಡೆದುಕೊಳ್ಳುವುದಕ್ಕೆ ಊರು ತುಂಬಾ ಇರುವಂತಹ ಬ್ಯಾಂಕುಗಳಲ್ಲಿ ಸುತ್ತಬೇಕಾದ ಅಗತ್ಯವಿಲ್ಲ. ಭಾರತ ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸುಲಭ ರೂಪದಲ್ಲಿ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. SBI ನಲ್ಲಿ ನೀವು 20 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಇನ್ನು ಇಲ್ಲಿ ಪರ್ಸನಲ್ ಲೋನ್ ಮೇಲಿನ ಬಡ್ಡಿದರ 10.55 ಪ್ರತಿಶತ ಪ್ರತಿವರ್ಷದ ಬಡ್ಡಿ ದರದಲ್ಲಿ ಪ್ರಾರಂಭವಾಗುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನಿಯಲ್ಲಿ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಹಾಗೂ ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Table of Contents

SBI ಪರ್ಸನಲ್ ಲೋನ್- SBI Bank Personal Loan details
ಯಾವುದೇ ರೀತಿಯ ಅತ್ಯಂತ ವೈಯಕ್ತಿಕ ಖರ್ಚುಗಳಿಗಾಗಿ ನಾವು ಹಣವನ್ನು ಪಡೆದುಕೊಳ್ಳುತ್ತೇವೆ ಎಂದರೆ ಅದು ಬ್ಯಾಂಕಿಂಗ್ ಲೋಕದಲ್ಲಿ ಪರ್ಸನಲ್ ಲೋನ್ ಎಂಬುದಾಗಿ ಕರೆಯಲ್ಪಡುತ್ತದೆ. ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡುತ್ತಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆಯುವ ಪರ್ಸನಲ್ ಲೋನ್ ಬಗ್ಗೆ. ಪರ್ಸನಲ್ ಲೋನ್ ಗಳು ಸಾಮಾನ್ಯವಾಗಿ ಅಸುರಕ್ಷಿತ ಲೋನ್ ಗಳಾಗಿರುತ್ತವೆ. ಯಾವುದೇ ರೀತಿಯ ಆಸ್ತಿಯನ್ನು ಗಿರವಿ ಇಡಬೇಕಾದ ಅಗತ್ಯ ಇರುವುದಿಲ್ಲ. ಆದರೆ ಪರ್ಸನಲ್ ಲೋನ್ ಪಡೆದುಕೊಳ್ಳಲು ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
SBI ಪರ್ಸನಲ್ ಲೋನ್ ಲಾಭಗಳು- Benefits of Getting Personal Loan From SBI bank.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾವುದೇ ನಿಮ್ಮ ವೈಯಕ್ತಿಕ ಅಗತ್ಯತೆಗಳಿಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- SBI ಪರ್ಸನಲ್ ಲೋನ್ ಮೂಲಕ ನೀವು 20 ಲಕ್ಷ ರೂಪಾಯಿಗಳ ವರೆಗೂ ಪಡೆದುಕೊಳ್ಳಬಹುದಾಗಿದೆ.
- ಪ್ರತಿ ತಿಂಗಳ ಆದಾಯ ಕನಿಷ್ಠಪಕ್ಷ ಹದಿನೈದು ಸಾವಿರ ರೂಪಾಯಿಗಳ ವರೆಗೂ ಇರಬೇಕು.
- SBI ಪರ್ಸನಲ್ ಲೋನ್ ಅನು ನೀವು ಆನ್ಲೈನ್ ಹಾಗೂ ಆನ್ಲೈನ್ ಎರಡರ ಮೂಲಕವೂ ಕೂಡ ಅಪ್ಲೈ ಮಾಡಬಹುದಾಗಿದೆ.
- ಪರ್ಸನಲ್ ಪಡೆದುಕೊಳ್ಳುವುದಕ್ಕೆ ನಿಮ್ಮ ವಯಸ್ಸು 21ರಿಂದ 60 ವರ್ಷದ ನಡುವೆ ಇರಬೇಕು. ಪಡೆದುಕೊಂಡ ಲೋನ್ ಹಣವನ್ನು ಕಟ್ಟೋದಕ್ಕೆ ನಿಮಗೆ ಆರರಿಂದ 72 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
- ಒಂದು ವೇಳೆ ನೀವು ಬ್ಯಾಂಕಿನ ಶರತ್ತುಗಳಿಗೆ ಒಪ್ಪಿಕೊಂಡರೆ ಹಣ ಅಪ್ರೂವ್ ತಕ್ಷಣವೇ ಕೂಡಲೇ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
SBI ಪರ್ಸನಲ್ ಲೋನ್ ವಿಧಗಳು- Types of Loans from SBI
- SBI ಎಕ್ಸ್ಪ್ರೆಸ್ ಕ್ರೆಡಿಟ್.
- ಸೆಕ್ಯೂರಿಟಿ ಮೇಲಿನ ಲೋನ್ ಗಳು.
- ಪೂರ್ವ ಅನುಮೋದಿತ ಪರ್ಸನಲ್ ಲೋನ್ ಗಳು.
- SBI ಕ್ವಿಕ್ ಪರ್ಸನಲ್ ಲೋನ್.
- SBI ಪೆನ್ಶನ್ ಲೋನ್.
- SBI ಕವಚ್ ಲೋನ್.
ಇದನ್ನು ಕೂಡ ಓದಿ: Personal Loan: ಕೂತಲ್ಲೇ ಲೋನ್ ಬೇಕು ಎಂದರೆ ಇಲ್ಲಿ ಪಡೆಯಿರಿ- 5 ನಿಮಿಷದಲ್ಲಿ 15 ಲಕ್ಷ ಕೊಡುತ್ತಾರೆ. ದೂರವಾಣಿ ನಂಬರ್ ಕೂಡ ಇದೆ.
SBI ಪರ್ಸನಲ್ ಲೋನ್ ಅರ್ಹತೆಗಳು- Eligibility To get Personal Loan from SBI
SBI ನಲ್ಲಿ ಈಗಾಗಲೇ ನೀವೆಲ್ಲರೂ ಮೇಲೆ ತಿಳಿದುಕೊಂಡಿರುವಂತೆ ಬೇರೆ ಬೇರೆ ರೀತಿಯ ಪರ್ಸನಲ್ ಲೋನ್ ವಿಧಾನಗಳನ್ನು ಪರಿಚಯಿಸಲಾಗಿದ್ದು ಬನ್ನಿ ಅವುಗಳ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
SBI ಎಕ್ಸ್ಪ್ರೆಸ್ ಕ್ರೆಡಿಟ್ ಅರ್ಹತೆಗಳು- Express Credit Eligibility
- ಮೊದಲಿಗೆ ವಯಸ್ಸು 18 ವರ್ಷ ಆಗಿರಬೇಕು ಹಾಗೂ ಕನಿಷ್ಠ ಪಕ್ಷ ಹದಿನೈದು ಸಾವಿರ ರೂಪಾಯಿಗಳ ಪ್ರತಿ ತಿಂಗಳ ಸಂಬಳ ಇರಬೇಕು.
- EMI/NMI ಅನುಪಾತ ಕನಿಷ್ಠಪಕ್ಷ 50 ಪ್ರತಿಶತಕ್ಕಿಂತ ಕಡಿಮೆ ಇರಬೇಕು.
- ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವವರಿಗೆ ಮಾತ್ರ ಲೋನ್.
SBI ಕವಚ ಲೋನ್ ಅರ್ಹತೆಗಳು
ಯಾವುದೇ ರೀತಿಯ ಸಂಬಳವನ್ನು ಅಥವಾ ಆದಾಯವನ್ನು ಹೊಂದಿರುವಂತಹ ವ್ಯಕ್ತಿ ಇಲ್ಲವೇ ಪಿಂಚಣಿಯನ್ನು ಪಡೆಯುವ ವ್ಯಕ್ತಿ ಕೂಡ ಸಾಲ ಸೌಲಭ್ಯವನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ.
SBI ಪೆನ್ಶನ್ ಲೋನ್ ಪಡೆಯುವ ಅರ್ಹತೆಗಳು.
- ವಯಸ್ಸು ಹೆಚ್ಚೆಂದರೆ 76 ವರ್ಷ ಆಗಿರಬೇಕು.
- ಪೆನ್ಷನ್ ಪೇಮೆಂಟ್ ಆರ್ಡರ್ ಬ್ಯಾಂಕಿನ ಬಳಿ ಇರಬೇಕು ಹಾಗೂ ಭಾರತೀಯ ನಾಗರಿಕರಾಗಿರಬೇಕು.
- ಪೆನ್ಷನ್ ಪಡೆದುಕೊಳ್ಳುವ ವ್ಯಕ್ತಿಯ ಮರಣದ ನಂತರ ಅದರ ಹಕ್ಕನ್ನು ಕುಟುಂಬಸ್ಥರು ಹೊಂದಿರುತ್ತಾರೆ.
SBI ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ದಾಖಲೆಗಳು- Documents required to Get Personal Loan from SBI.
- ನಿಮ್ಮ ಗುರುತು ಪತ್ರದ ರೂಪದಲ್ಲಿ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ ಕೂಡ ನಡೆಯುತ್ತದೆ.
- ನಿಮ್ಮ ಅಡ್ರೆಸ್ ಪ್ರೂಫ್ ರೂಪದಲ್ಲಿ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾಸ್ಪೋರ್ಟ್, ಕರೆಂಟ್ ಬಿಲ್, ರೇಷನ್ ಕಾರ್ಡ್ ಇಲ್ಲವೇ ಬ್ಯಾಂಕ್ ಖಾತೆ ಪಾಸ್ ಬುಕ್ ಕೂಡ ನಡೆಯುತ್ತದೆ.
- ಆದಾಯ ಪ್ರಮಾಣ ಪತ್ರ ರೂಪದಲ್ಲಿ ಐಟಿ ರಿಟರ್ನ್ ಅಥವಾ ನಿಮ್ಮ ಬ್ಯಾಂಕಿನ ಸ್ಟೇಟ್ಮೆಂಟ್ ಅನ್ನು ನೀವು ನೀಡಬಹುದಾಗಿದೆ.
SBI ಪರ್ಸನಲ್ ಲೋನ್ ಅನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವ ವಿಧಾನ- How to Apply for Personal loan
- ಮೊದಲಿಗೆ ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ಪರ್ಸನಲ್ ಲೋನ್ ಅನ್ನು ಕ್ಲಿಕ್ ಮಾಡಬೇಕು. (SBI Bank Personal Loan Application)
- ನಿಮ್ಮ ಮುಂದೆ ಲಿಸ್ಟ್ ತೆರೆದುಕೊಳ್ಳುತ್ತದೆ ಹಾಗೂ ನಿಮಗೆ ಯಾವ ರೀತಿಯ ಪರ್ಸನಲ್ ಬೇಕು ಎನ್ನುವುದನ್ನು ನೀವು ಆಯ್ಕೆ ಮಾಡಬಹುದಾಗಿದೆ.
- ನೀವು ಆಯ್ಕೆ ಮಾಡುವಂತಹ ಪರ್ಸನಲ್ ಲೋನ್ ವಿಭಾಗದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಕಂಡುಬರುತ್ತದೆ ಹಾಗೂ ಲೋನ್ ಗೆ ಅರ್ಜಿ ಸಲ್ಲಿಸುವಂತಹ ಫಾರ್ಮ್ ಕೂಡ ಕಂಡು ಬರುತ್ತದೆ.
- ಅಲ್ಲಿ ಕೇಳಿದಾಗ ಇರುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ತುಂಬಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
- ನಿಮ್ಮ ದಾಖಲೆ ಡಾಕ್ಯುಮೆಂಟ್ಗಳನ್ನು ಮತ್ತು ನೀವು ತುಂಬಿರುವಂತಹ ವಿವರಗಳನ್ನು ನೋಡಿದ ನಂತರ ಬ್ಯಾಂಕಿನ ಸಿಬ್ಬಂದಿ ಮತ್ತು ನಿಮಗೆ ಕರೆ ಮಾಡುತ್ತಾರೆ.
SBI ಪರ್ಸನಲ್ ಲೋನ್ ಅನ್ನು ಆಫ್ಲೈನ್ ನಲ್ಲಿ ಪಡೆದುಕೊಳ್ಳುವುದು ಹೇಗೆ?- How to apply for loan offline
- ಆಫ್ಲೈನ್ ಮೂಲಕ ನೀವು ಲೋನ್ ಗೆ ಅಪ್ಲೈ ಮಾಡುವುದಕ್ಕೆ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿಗೆ ಬೇಕಾಗುವಂತಹ ಪ್ರತಿಯೊಂದು ಡಾಕ್ಯುಮೆಂಟುಗಳನ್ನು ಹಿಡಿದುಕೊಂಡು ಹೋಗಬೇಕು.
- ಬ್ಯಾಂಕಿನ ಸಿಬ್ಬಂದಿಗಳ ಬಳಿ ಕೂಡ ಹೋಗಿ ನೀವು ಲೋನಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
- ನಿಮ್ಮ ಡಾಕ್ಯುಮೆಂಟರಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ ಹಾಗೂ ನಿಮಗೆ ಫಾರ್ಮ್ ಅನ್ನು ಕೂಡ ನೀಡಲಾಗುತ್ತದೆ ಅಲ್ಲಿ ಸರಿಯಾದ ವಿವರಗಳನ್ನು ತುಂಬಿ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಬೇಕು.
- ಒಂದು ವೇಳೆ ನಿಮ್ಮ ಅರ್ಜಿ ಸ್ವೀಕೃತಿ ಆದರೆ ನಿಮ್ಮ ಖಾತೆಗೆ ಸಾಲದ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಇನ್ನು ಈ ಸಂದರ್ಭದಲ್ಲಿ ಶುಲ್ಕಗಳು ಕೂಡ ನೀವು ಪಡೆದುಕೊಳ್ಳುವಂತಹ ಪರ್ಸನಲ್ ಲೋನ್ ವಿಧದ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಇದನ್ನು ಕೂಡ ಬ್ಯಾಂಕಿನವರು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.
SBI ಪರ್ಸನಲ್ ಲೋನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?- How to check status of SBI personal Loan
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಗೆ ಹೋಗಿ Application Tracker ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
- ಅಲ್ಲಿ ಒಂದು ಸ್ಕ್ರೀನ್ ಓಪನ್ ಆಗುತ್ತದೆ ಹಾಗೂ ನೀವು ಅದನ್ನು ರೆಫರೆನ್ಸ್ ನಂಬರ್ ಹಾಗೂ ನಿಮ್ಮ ಫೋನ್ ನಂಬರ್ ಅನ್ನು ಹಾಕುವ ಮೂಲಕ ನಿಮ್ಮ ಲೋನ್ ನ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
1800-425-3800 ಹಾಗೂ 1800-11-2211 ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಸ್ಟಮರ್ ಕೇರ್ ನಂಬರ್ ಆಗಿದ್ದು ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಕೂಡ ನೀವು ಇಲ್ಲಿ ಕರೆ ಮಾಡಿ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ನಿಮ್ಮ ಸಮಸ್ಯೆಯಿಂದ ಹೊರ ಬರಬಹುದಾಗಿದೆ.
Comments are closed.