Neer Dose Karnataka
Take a fresh look at your lifestyle.

ನಿರ್ಮಲ ರವರು ರಾತ್ರೋ ರಾತ್ರಿ ಸೀರೆ ಉಟ್ಟು ರೆಡಿ ಆಗವುದರ ಹಿಂದಿದೆ ಒಂದು ನೋವಿನ ಕಥೆ ಏನು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಮನೆಯಲ್ಲಿ ನಿರ್ಮಲ ಚನ್ನಪ್ಪ ರವರು ‌ ಯಾರಿಗೂ ಅರ್ಥವಾಗದಂತಹ ರೀತಿ ಆಟವಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು, ಇವರು ಹೇಗೆ ಹಾಡುತ್ತಿದ್ದಾರೆ ಎಂಬುದನ್ನು ವಿವರಣೆ ಮಾಡಲು ನಮಗೂ ಕೂಡ ಕೊಂಚ ಕಷ್ಟವೇ ಆಗುತ್ತಿದೆ, ಅದರಲ್ಲಿಯೂ ರಾತ್ರೋ ರಾತ್ರಿ ಸೀರೆ ಹುಟ್ಟುಕೊಂಡು ತಯಾರಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಆದರೆ ನಿರ್ಮಲ ಚನ್ನಪ್ಪ ರವರು ಹೀಗೆ ರಾತ್ರೋ ರಾತ್ರಿ ಸೀರೆ ತೊಡುವ ಹಿಂದೆ ಒಂದು ನೋವಿನ ಕಥೆ ಇದೆ ಎಂಬುದು ನಿರ್ಮಲ ರವರ ಪತಿ ಸತ್ಯ ರವರು ತಿಳಿಸಿದ್ದಾರೆ, ಖ್ಯಾತ ನಟರಾಗಿರುವ ಸತ್ಯ ರವರು ಈ ಕುರಿತು ಮಾತನಾಡಿ ಬಿಗ್ ಬಾಸ್ ಮನೆಗೆ ತೆರಳುವ 10 ದಿನದ ಮುನ್ನ ನಿರ್ಮಲ ರವರ ಪ್ರೀತಿಯ ಅಜ್ಜಿ ಇಹಲೋಕ ತ್ಯಜಿಸಿದ್ದರು, ಅಜ್ಜಿಯ ಸೀರೆ ಹಾಗೂ ಮೂಗುತಿ ನಿರ್ಮಲ ರವರ ಕೈಗೆ ಸಿಕ್ಕಿದ್ದು ಬಿಗ್ ಬಾಸ್ ಮನೆಗೆ ಹೋಗುವ ದಿನ. ಆದರೆ ಅಲ್ಲಿಯೂ ಕೂಡ ಬಿಗ್ ಬಾಸ್ ಮನೆಗೆ ತೆರಳಿದ ಬಳಿಕ ನೇರ ನಾಮಿನೇಟ್ ಆದ ಕಾರಣ ಅವರ ಸೂಟ್ಕೇಸ್ ಅವರ ಕೈಯಲ್ಲಿ ಇರಲಿಲ್ಲ.

ಆದರೆ ಕೊನೆಗೆ ಅಜ್ಜಿಯ ಸೀರೆ ಹಾಗೂ ಮೂಗುತಿ ಇದ್ದ ಸೂಟ್ಕೇಸ್ ನಿರ್ಮಲ ರವರ ಕೈಗೆ ಸಿಕ್ಕಿತ್ತು, ಅಂತಹ ಸಂದರ್ಭದಲ್ಲಿ ಪ್ರೀತಿಯ ಅಜ್ಜಿಯನ್ನು ಕಳೆದು ಕೊಂಡ ದುಃಖದಲ್ಲಿದ್ದ ನಿರ್ಮಲ ರವರು ಅಜ್ಜಿಯ ಸೀರೆಯನ್ನು ಉಟ್ಟುಕೊಂಡು ಅಜ್ಜಿಯ ಮುಗುತಿ ತೊಟ್ಟು ಅಜ್ಜಿಯನ್ನು ಸ್ಮರಣೆ ಮಾಡಿದರು ಎಂದು ಇದರ ಹಿಂದಿನ ಸತ್ಯವನ್ನು ಹೊರ ಹಾಕಿದ್ದಾರೆ. ಇನ್ನು ಇವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Leave A Reply

Your email address will not be published.