Neer Dose Karnataka
Take a fresh look at your lifestyle.

ಜನರ ಅಚ್ಚುಮೆಚ್ಚಿನ ರೌಡಿ ಬೇಬಿ ಅಮೂಲ್ಯ ರವರ ಒಂದು ಎಪಿಸೋಡಿನ ಸಂಭಾವನೆ ಎಷ್ಟು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕಿರುತೆರೆಯಲ್ಲಿ ಗಟ್ಟಿಮೇಳ ಧಾರವಾಹಿಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾಲ ಕಾಲಕ್ಕೆ ಅಗತ್ಯವಿರುವ ತಿರುವುಗಳನ್ನು ನೀಡುತ್ತಾ ಮಧ್ಯಮ ವರ್ಗದ ಹಾಗೂ ಶ್ರೀಮಂತ ವರ್ಗದ ಕುಟುಂಬಗಳ ನಡುವಿನ ಕತೆಯನ್ನು ಬಹಳ ಅದ್ಭುತವಾಗಿ ತೆರೆ ಮೇಲೆ ತಂದಿರುವ ಗಟ್ಟಿಮೇಳ ಧಾರವಾಹಿಯ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರವಾಹಿಗಳಲ್ಲಿ ಒಂದಾಗಿದೆ

ಈ ದಾರವಾಹಿಯಲ್ಲಿ ಪ್ರತಿಯೊಂದು ಪಾತ್ರಗಳಿಗೂ ಕೂಡ ಸಾಕಷ್ಟು ಮಹತ್ವವನ್ನು ನೀಡಲಾಗಿದ್ದು ನಾಯಕಿ ನಟಿ ಪಾತ್ರದಲ್ಲಿ ನಟನೆ ಮಾಡುತ್ತಿರುವ ರೌಡಿ ಬೇಬಿ ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ ಅವರು ತಮ್ಮ ಅದ್ಭುತ ನಟನೆ ಹಾಗೂ ತಮ್ಮದೇ ಆದ ಹಾವಭಾವದ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯ ಧಾರವಾಹಿಗಳಲ್ಲಿ ಬಣ್ಣ ಹಚ್ಚುತ್ತಿದ್ದರೂ ಕೂಡ ಸಾಕಷ್ಟು ಅನುಭವ ಹೊಂದಿರುವಂತಹ ನಟನೆ ಮಾಡುತ್ತಿರುವ ಅಮೂಲ್ಯ ರವರು, ದಿನೇ ದಿನೇ ಯಶಸ್ಸು ಗಳಿಸಿದಂತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡು ಬಂದಿದ್ದಾರೆ. ಹೌದು ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ಕೇವಲ 8 ಸಾವಿರ ರೂಪಾಯಿಗಳಿಂದ ತಮ್ಮ ಕಿರುತೆರೆಯ ನಟನೆಯನ್ನು ಆರಂಭಿಸಿದ ಅಮೂಲ್ಯ ರವರು ಇದೀಗ ಒಂದು ಎಪಿಸೋಡಿಗೆ ಬರೋಬ್ಬರಿ 35 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಇವರಲ್ಲಿ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.