Neer Dose Karnataka
Take a fresh look at your lifestyle.

ಕ್ರೇಜಿ ಕ್ವೀನ್ ರಕ್ಷಿತಾ ರವರ ಹುಟ್ಟುಹಬ್ಬಕ್ಕೆ ವಿಶೇಷ ಭರ್ಜರಿ ಗಿಫ್ಟ್ ನೀಡಿದ ದರ್ಶನ್ ! ಏನು ಗೊತ್ತಾ??

11

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ವುಡ್ನಲ್ಲಿ ಬಹಳ ವಿಶೇಷವಾದ ಜೋಡಿಗಳಲ್ಲಿ ಒಂದಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಕ್ಷಿತಾ ರವರ ಜೋಡಿಯನ್ನು ಸಿನಿ ಪ್ರಿಯರು ಮರೆಯುವ ಸಾಧ್ಯತೆಯೇ ಇಲ್ಲ, ಬಹಳ ವಿಶೇಷ ಜೋಡಿಗಳಲ್ಲಿ ಒಂದಾಗಿರುವ ಈ ಜೋಡಿ ಕನ್ನಡ ಸಿನಿಮಾ ರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿದೆ. ಇಬ್ಬರೂ ಸ್ಕ್ರೀನ್ ನ ಮೇಲೆ ಕಾಣಿಸುತ್ತಿದ್ದರೇ ಅಭಿಮಾನಿಗಳಿಗೆ ನಿಜಕ್ಕೂ ಒಂದು ರೀತಿಯ ಹಬ್ಬದಂತೆ ಇತ್ತು ಅದರಲ್ಲಿಯೂ ಸುಂಟರಗಾಳಿ ಹಾಡಿನಲ್ಲಿ ಇಬ್ಬರ ನೃತ್ಯವಂತೂ ಅದ್ಭುತ.

ಹೀಗೆ ಇಷ್ಟೆಲ್ಲ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಈ ಜೋಡಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ ರಾಗಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ದರ್ಶನ್ ರವರ ಹುಟ್ಟುಹಬ್ಬದ ಅಂಗವಾಗಿ ರಕ್ಷಿತ ರವರು ಶುಭಾಶಯಗಳನ್ನು ತಿಳಿಸಿದ್ದರು.

ಇದೀಗ ದರ್ಶನ್ ರವರು ರಕ್ಷಿತ ರವರ ಜನ್ಮ ದಿನದ ಪ್ರಯುಕ್ತ ಬಹಳ ವಿಶೇಷವಾದ ಶುಭಾಶಯದ ಮೂಲಕ ನಿಜಕ್ಕೂ ಒಂದು ರೀತಿಯ ಗಿಫ್ಟ್ ನೀಡಿದ್ದಾರೆ ಎಂದರೆ ತಪ್ಪಾಗಲಾರದು, ಯಾಕೆಂದರೆ ಡಿ ಬಾಸ್ ರವರು ಈ ರೀತಿ ಹೇಳುವುದು ಸಾಮಾನ್ಯ ವಿಷಯವಲ್ಲ. ಹೌದು ಸ್ನೇಹಿತರೇ ರಕ್ಷಿತ ರವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿರುವ ದರ್ಶನ್ ರವರು, ಹುಟ್ಟುಹಬ್ಬದ ಶುಭಾಶಯಗಳು ಪ್ರತಿ ವರ್ಷ ಜನ್ಮದಿನಗಳು ಬರುತ್ತವೆ. ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್ ರಕ್ಷಿತ ಎಂದಿದ್ದಾರೆ.

Leave A Reply

Your email address will not be published.