Neer Dose Karnataka
Take a fresh look at your lifestyle.

ಕರ್ನಾಟಕದ ನಿಜವಾದ ಕ್ರಶ್ ಅದಿತಿ ಪ್ರಭುದೇವ ರವರು ಒಂದು ಚಿತ್ರಕ್ಕೆ ಸಂಭಾವನೆ ಪಡೆಯುವುದು ಎಷ್ಟು ಕಡಿಮೆ ಗೊತ್ತಾ??

1

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಅದಿತಿ ಪ್ರಭುದೇವ ರವರು ಕಳೆದ ನಾಲ್ಕು ವರ್ಷಗಳ ಹಿಂದೆ 2017 ರಲ್ಲಿ ಧೈರ್ಯ ಎಂಬ ಚಿತ್ರದ ಮೂಲಕ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದರು, ಆದರೆ ಪಾದರ್ಪಣೆ ಮಾಡಿದ ಎರಡು ವರ್ಷಗಳಲ್ಲಿ ಮೂರು ಸಿನಿಮಾಗಳಲ್ಲಿ ನಟನೆ ಮಾಡಿದರೂ ಕೂಡ ಇವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿರಲಿಲ್ಲ. ಆದರೆ 2019 ರಲ್ಲಿ ಸಿಂಗಾ ಸಿನಿಮಾದ ಮೂಲಕ ಅದಿತಿ ಪ್ರಭುದೇವ ರವರು ಭಾರಿ ಸದ್ದು ಮಾಡುವಲ್ಲಿ ಯಶಸ್ವಿಯಾದರು.

ಈ ಚಿತ್ರದಲ್ಲಿ ಶಾನೆ ಟಾಪಗೌಳೆ ಎಂಬ ಹಾಡಂತೂ ಈಗಲೂ ಕೂಡ ಜನಪ್ರಿಯತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ, ಈ ಹಾಡಿನ ಮೂಲಕ ಅದಿತಿ ಪ್ರಭುದೇವ ರವರು ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಮುಖ ಪರಿಚಯ ಮಾಡಿಕೊಂಡರು. ಇದಾದ ನಂತರ ರಂಗನಾಯಕಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡು ಅಲ್ಲಿಯೂ ಕೂಡ ಯಶಸ್ಸು ಗಳಿಸಿದರು, ತದ ನಂತರ ಅದೇ ವರ್ಷ 2019ರಲ್ಲಿ ಬ್ರಹ್ಮಚಾರಿ ಸಿನಿಮಾದಲ್ಲಿ ಕೂಡ ನಟನೆ ಮಾಡಿದರು. ಅಲ್ಲಿಗೆ ಇವರ ಯಶಸ್ಸಿನ ಮೆಟ್ಟಿಲುಗಳು ಆರಂಭವಾದವು.

2020 ರಲ್ಲಿ ಕೋರೋನ ಕಾರಣದಿಂದ ಯಾವುದೇ ಸಿನಿಮಾ ಮಾಡದೇ ಇದ್ದರೂ ಇದೀಗ 2021 ರಲ್ಲಿ ಬರೋಬ್ಬರಿ 12 ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡು ಚಿತ್ರೀಕರಣದಲ್ಲಿ ನಿರತವಾಗಿರುವ ಅದಿತಿ ಪ್ರಭುದೇವ ರವರು ಅಸಲಿಗೆ ಕರ್ನಾಟಕದ ಕ್ರಶ್ ಎಂದರೆ ತಪ್ಪಾಗಲಾರದು. ಇಷ್ಟೆಲ್ಲ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಅದಿತಿ ಪ್ರಭುದೇವ ರವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಕಂಡರೆ ನಿಜಕ್ಕೂ ಅಚ್ಚರಿಯಾಗುತ್ತದೆ, ಹೌದು ಸ್ನೇಹಿತರೇ ಅದಿತಿ ಪ್ರಭುದೇವ ರವರು ಒಂದು ಸಿನಿಮಾಗೆ ಕೇವಲ 18 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.

Leave A Reply

Your email address will not be published.