Neer Dose Karnataka
Take a fresh look at your lifestyle.

ರಶ್ಮಿಕಾಗೆ ಠಕ್ಕರ್ ನೀಡುತ್ತಿರುವ ಕನ್ನಡತಿ ಕೃತಿ ಶೆಟ್ಟಿ, ಒಮ್ಮೆಲೆ ಸಂಭಾವನೆ ಏರಿಸಿಕೊಂಡು ಕೇಳಿದ್ದು ಎಷ್ಟು ಗೊತ್ತಾ?? ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಂತರ ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದು ತೆಲುಗುನಲ್ಲಿ ಸಾಕಷ್ಟು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಬಹು ಬೇಡಿಕೆಯ ನಟಿಯರಲ್ಲಿ ಕಾಣಿಸಿ ಕೊಳ್ಳುತ್ತಿರುವ ರಶ್ಮಿಕಾ ರವರಿಗೆ ತೆಲುಗಿನಲ್ಲಿ ಹೆಚ್ಚಿನ ಜನಪ್ರಿಯತೆ ಸಿಗುತ್ತಿರುವ ಸಂದರ್ಭದಲ್ಲಿ ಕನ್ನಡದ ಹುಡುಗಿ ಕೃತಿ ಶೆಟ್ಟಿ ರವರು ಪಾದರ್ಪಣೆ ಮಾಡಿದ ಬಳಿಕ ಚಿತ್ರಣ ಕೊಂಚ ಬದಲಾಗಿದೆ

ಮೊದಲ ಚಿತ್ರದಲ್ಲಿ ಯಶಸ್ಸು ಕಂಡ ಕೃತಿ ಶೆಟ್ಟಿ ರವರು ರಶ್ಮಿಕ ರವರಿಗೆ ಹೋಗ ಬೇಕಾಗಿದ್ದ ಮೂರು ಚಿತ್ರಗಳನ್ನು ಈಗಾಗಲೇ ತಾವು ಪಡೆದು ಕೊಂಡಿದ್ದಾರೆ, ಅದರಲ್ಲಿಯೂ ರಾಮ್ ಪೊತಿನೇನಿ ಹಾಗೂ ತೆಲುಗಿನ ಖ್ಯಾತ ನಟ ರಾಗಿರುವ ನಾನಿ ರವರು ನಟಿಸುತ್ತಿರುವ ಮುಂದಿನ ಚಿತ್ರಗಳಲ್ಲಿ ರಶ್ಮಿಕಾ ರವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲು ತಯಾರಿ ನಡೆಸಲಾಗಿತ್ತು, ಆದರೆ ಕೃತಿ ಶೆಟ್ಟಿ ರವರು ಈ ಎರಡು ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಹೀಗೆ ರಶ್ಮಿಕ ರವರಿಗೆ ಕಾಂಪಿಟೇಷನ್ ಆಗಿ ಕಾಣಿಸಿ ಕೊಳ್ಳುತ್ತಿರುವ ಕನ್ನಡದ ಹುಡುಗಿ ಕೃತಿ ಶೆಟ್ಟಿ ರವರು ಮೊದಲ ಸಿನಿಮಾದಲ್ಲಿ ನಟನೆ ಮಾಡಲು ಕೇವಲ 8 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನೇ ಪಡೆದು ಕೊಂಡಿದ್ದರು, ಆದರೆ ಮೊದಲ ಚಿತ್ರ ಯಶಸ್ಸು ಕಂಡ ತಕ್ಷಣ ತಮ್ಮ ಸಂಭಾವನೆಯನ್ನು ಗಣನೀಯವಾಗಿ ಏರಿಸಿ ಕೊಂಡಿರುವ ಕೃತಿ ಶೆಟ್ಟಿ ರವರು ಇದೀಗ 70 ಲಕ್ಷ ರೂಪಾಯಿಗಳಿಗೆ ಬೇಡಿಕೆ ಯಿಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ನಿರ್ಮಾಪಕರು ಕೃತಿ ಶೆಟ್ಟಿ ಅವರು ಕೇಳಿದಷ್ಟು ಹಣವನ್ನು ನೀಡಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

Comments are closed.