Neer Dose Karnataka
Take a fresh look at your lifestyle.

ಯಪ್ಪಾ ಷಾಕಿಂಗ್ ಹೇಳಿಕೆ ನೀಡಿದ ಪ್ರಿಯಾಂಕಾ ಚೋಪ್ರಾ, ಎಷ್ಟು ಮಕ್ಕಳು ಬೇಕಂತೆ ಗೊತ್ತಾ??

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನ ಮಣ್ಣದ ದುನಿಯಾ ದಲ್ಲಿ ಅದ್ಬುತ ನಟನೆಯ ಮೂಲಕ ಇಡೀ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಅಭಿಮಾನಿಗಳನ್ನು ಹೊಂದಿರುವಾಕೆ. ಪ್ರಿಯಾಂಕಾ ಚೋಪ್ರಾ 2000 ರಲ್ಲಿ ವಿಶ್ವಸುಂದರಿ ಪಟ್ಟವನ್ನು ಗೆದ್ದವರು. ಸುಂದರಿ ಮಾತ್ರವಲ್ಲದೇ ಪ್ರತಿಭಾವಂತ ನಟಿ ಕೂಡ ಹೌದು. ಬಾಲಿವುಡ್ ಎಂಬ ಮಹಾ ಜಗತ್ತಿನಲ್ಲಿ, ಪ್ರಪಂಚದಲ್ಲಿ ಅತೀ ದೊಡ್ಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಯಾರ ಆಶೀರ್ವಾದ ಶಿಫಾರಸ್ಸಿಲ್ಲದೆ ಬೆಳೆದು ಬಂದಾಕೆ. ತಮ್ಮ ಪರಿಶ್ರಮದ ಮೂಲಕ ಅಗ್ರಸ್ಥಾನಕ್ಕೇರಿದ ನಟಿ. ಈಗಿನ ಕಾಲದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಈಕೆ ಸ್ಪೂರ್ತಿ ಎಂದರೂ ತಪ್ಪಿಲ್ಲ.

ಪ್ರಿಯಾಂಕಾ ಚೋಪ್ರಾ ದಿಟ್ಟ ಹಾಗೂ ನೇರ ನಡೆಯ ನಟಿ. ಬಾಲಿವುಡ್ ನಲ್ಲಿ ನಟನೆ ಹೊರತಾಗಿ ಅವರು ಹೀಗೆ ಕೂಡ ಖ್ಯಾತರಾಗಿದ್ದಾರೆ. ನಟನೆ ಹೊರತು ಪಡಿಸಿ ಅವರು ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮ ಪಾಲನ್ನು ನೀಡಿದವರು. ಬಡ ಮಕ್ಕಳ ಕಲ್ಯಾಣಕ್ಕಾಗಿ ಅದರಲ್ಲೂ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಹಲವಾರು ಸಂಸ್ಥೆ ಗಳೊಡನೆ ಸೇರಿ ದುಡಿದವರು. ಪ್ರಿಯಾಂಕಾ ಚೋಪ್ರಾ ರವರ ಪ್ರತಿಭೆಯನ್ನು ಗುರುತಿಸಿ ಹಾಲಿವುಡ್ ಕೂಡ ಅವರನ್ನು ಕೈಬೀಸಿ ಕರೆಯಿತು. ಕ್ವಾಂಟಿಕೋ ಡಿ ಸೀರೀಸ್, ಬೇ ವಾಚ್ ಎಂಬ ಸಿನಿಮಾ ಗಳಲ್ಲಿ ಕೂಡ ಪ್ರಿಯಾಂಕಾ ಚೋಪ್ರಾ ನಟಿಸಿದರು.

ಹಾಲಿವುಡ್ ನ ಟಾಪ್ ಹೀರೋ ದ ರಾಕ್ ಖ್ಯಾತಿಯ ಡ್ವೇಯ್ನ್ ಜಾನ್ಸನ್ ರವರೊಂದಿಗೆ ಕೂಡ ಪರದೆಯನ್ನು ಹಂಚಿಕೊಂಡರು. ಇಂದಿಗೂ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಇದು ಕೂಡ ಸಾಮಾನ್ಯ ವಿಷಯವೇನಲ್ಲ. ಪ್ರಿಯಾಂಕಾ ಚೋಪ್ರಾ ರವರ ಮದುವೆ ಅಮೇರಿಕಾದ ಖ್ಯಾತ ಯುವ ನಟ ಹಾಗೂ ಮ್ಯೂಸಿಕ್ ಸೆನ್ಸೇಷನ್ ನಿಕ್ ಜೋನಾಸ್ ರವರೊಂದಿಗೆ ನಡೆಯಿತು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಮದುವೆಗೆ ಇಡೀ ಜಗತ್ತೇ ಸಾಕ್ಷಿಯಾಯಿತು. ಎರಡೂ ಪದ್ಧತಿಯ ಅನುಸಾರವಾಗಿ ನಡೆದ ಈ ಮದುವೆಯಲ್ಲಿ ಅರ್ಥಪೂರ್ಣ ಸಾರಾಂಶ ಅಡಗಿತ್ತು. ಇಂದಿಗೂ ಕೂಡ ನಿಕ್ ಜೋನಾಸ್ ಭಾರತೀಯ ಸಂಪ್ರದಾಯ ಹಾಗೂ ಆಚರಣೆಗಳನ್ನು ಗೌರವಿಸುತ್ತಾರೆ ಎಂಬುದು ಪ್ರಿಯಾಂಕಾ ಚೋಪ್ರಾ ರವರ ಮಾತು.

ಪ್ರಿಯಾಂಕಾ ಚೋಪ್ರಾ ರವರು ನಿಕ್ ಜೋನಾಸ್ ರವರಿಗಿಂತ 10 ವರ್ಷ ದೊಡ್ಡವರು. ಆದರೂ ಕೂಡ ಇವರಿಬ್ಬರ ಮಧ್ಯೆ ಯಾವ ಭಿನ್ನಾಭಿಪ್ರಾಯಗಳು ಇಲ್ಲ. ಬದಲಾಗಿ ಇಬ್ಬರಲ್ಲಿ ಕೂಡ ಬದುಕಿನ ಕುರಿತಂತೆ ಉತ್ತಮವಾದ ಹೊಂದಾಣಿಕೆಯಿದೆ. ಇವರಿಬ್ಬರ ನಡುವೆ ಇಂದಿಗೂ ಒಂದು ಕ್ಷಣಕ್ಕೂ ವಯಸ್ಸಿನ ವಿಚಾರವಾಗಿ ಭಿನ್ನಾಭಿಪ್ರಾಯ ಆಗಲೀ ಜಗಳವಾಗಲೀ ನಡೆದಿಲ್ಲ. ನನ್ನ ಪತಿ ನನಗೆ ಸೂಪರ್ ಹೀರೋ ಎನ್ನುತ್ತಾರೆ ಪ್ರಿಯಾಂಕಾ ಚೋಪ್ರಾ. ಇತ್ತ ನಿಕ್ ಜೋನಾಸ್ ಕೂಡ ಇದನ್ನೇ ಹೇಳುತ್ತಾರೆ. ಈ ಜೋಡಿಗೆ ಈಗ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಸಂಡೇ ಟೈಮ್ಸ್ ಪತ್ರಿಕೆಗೆ ಸಂದರ್ಶನ ನೀಡುತ್ತಿರಬೇಕಾದರೆ ನಿಮಗೆ ಎಷ್ಟು ಮಕ್ಕಳು ಬೇಕು ಎಂದಾಗ ಪ್ರಿಯಾಂಕಾ ಚೋಪ್ರಾ ನನಗೆ 11 ಮಕ್ಕಳು ಬೇಕೆಂದರು. ಇದನ್ನು ಕೇಳಿ ನೀವು ಹೈರಾಣಾಗಬಹುದು ಆದರೂ ಇದು ನಿಜ. ಸಂದರ್ಶಕರ ಪ್ರಶ್ನೆಗೆ ನೇರವಾಗಿ ತಮಾಷೆಯಾಗಿಯೇ ಉತ್ತರಿಸಿದ ನಟಿ ಪ್ರಿಯಾಂಕಾ ಚೋಪ್ರಾ ನನಗೆ 11 ಮಕ್ಕಳು ಬೇಕು. ಇದರಿಂದ ನಾನೇ ಒಂದು ಕ್ರಿಕೆಟ್ ತಂಡ ಕಟ್ಟಲಿದ್ದೇನೆ ಎಂದು ತಮಾಷೆಯಾಗಿಯೇ ಉತ್ತರಿಸಿದರು. ಈ ತಮಾಷೆ ಉತ್ತರ ಕೂಡ ಈಗ ವಿಶ್ವಾದ್ಯಂತ ಸುದ್ಧಿ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ಧಿ ಮಾಡಿದೆ. ಈ ಕುರಿತಂತೆ ನಿಕ್ ಜೋನಾಸ್ ರವರ ಪ್ರತಿಕ್ರಿಯೆ ಏನಿರಬಹುದು ಎಂಬ ನಿಮ್ಮ ಅನಿಸಿಕೆ ಅಭಿಪ್ರಾಯಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡೋ ಮೂಲಕ ಮಿಸ್ ಮಾಡದೇ ತಿಳಿಸಿ.

Comments are closed.