Neer Dose Karnataka
Take a fresh look at your lifestyle.

ಈ ಪುಟ್ಟ ಬಾಲಕಿ ಈಗ ಕನ್ನಡ ಟಾಪ್ ನಟಿ, ಯಾರೆಂದು ಊಹಿಸಬಲ್ಲಿರಾ?? ಶೇಕಡಾ 90 % ಜನರಿಗೆ ಸಾಧ್ಯವಾಗುವುದಿಲ್ಲ.

ನಮಸ್ಕಾರ ಸ್ನೇಹಿತರೇ ಈ ಫೋಟೋ ದಲ್ಲಿ ಕಾಣಿಸುತ್ತಿರುವ ಹುಡುಗಿ ಎಷ್ಟು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ ಅಲ್ವಾ. ಇದು ಒಬ್ಬರ ಬಾಲ್ಯದ ಫೋಟೋ. ಮೊದಲಿಗೆ ನಾವು ಇವರು ಯಾರೆಂಬ ಒಂದೊಂದೇ ಸುಳಿವು ಗಳನ್ನು ಬಿಚ್ಚಿಡುತ್ತಾ ಹೋಗುತ್ತೇವೆ ನೀವು ಈ ಬಾಲಕಿ ನಿಜ ಹೆಸರು ಏನೆಂಬುದನ್ನು ನಮಗೆ ತಿಳಿಸಬೇಕು. ಕೊನೆಯಲ್ಲಿ ನಾವೂ ಕೂಡ ಈ ಬಾಲಕಿ ಯಾರೆಂದು ಹೇಳುತ್ತೇವೆ. ಆಗ ನೀವು ಗೆಸ್ ಮಾಡಿರೋದು ಸರಿಯೋ ತಪ್ಪೋ ಎಂದು ನೋಡೋಣ.

ಈ ಬಾಲಕಿ 1989 ರಲ್ಲಿ ಹಾಸನ ಜಿಲ್ಲೆಯಲ್ಲಿ ಜನಿಸಿದವರು. ಈಗ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟಿ ಹಾಗೂ ನಿರ್ಮಾಪಕಿಯಾಗಿ ಚಾಲ್ತಿಯಲ್ಲಿದ್ದಾರೆ. ಇವರು ಬಾಲ್ಯದಲ್ಲಿ ಕೂಡ ಸಾಕಷ್ಟು ಸಾಧನೆ ಮಾಡಿದವರು. ರಾಜ್ಯಮಟ್ಟದಲ್ಲಿ ಈಜುಗಾರ್ತಿಯಾಗಿ ತಮ್ಮ ಜಿಲ್ಲೆಯನ್ನು ಪ್ರತಿನಿಧಿಸಿದವರು. ಇನ್ನು ವಿದ್ಯಾಭ್ಯಾಸದ ವಿಚಾರಕ್ಕೆ ಬಂದರೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ನಲ್ಲಿ ಪದವಿ ಪಡೆದಂತಹ ಬುದ್ಧಿವಂತೆ.

ಇದಾದ ನಂತರದ ದಿನಗಳಲ್ಲಿ ಚಿತ್ರರಂಗದ ಬಗ್ಗೆ ಆಸಕ್ತಿ ಮೂಡಿ ಕನ್ನಡ ಚಿತ್ರರಂಗಕ್ಕೆ 2013ರಲ್ಲಿ ಕಾಲಿಡೋ ಮೂಲಕ ಬಣ್ಣದ ಲೋಕಕ್ಕೆ ಕಾಲಿಡೋ ಮೂಲಕ ತಮ್ಮ ಜೀವನದಲ್ಲಿ ಬಹುಮುಖ್ಯ ಅಂಗವನ್ನು ಪ್ರಾರಂಭಿಸಿದರು. 2013 ರಲ್ಲಿ ಇವರು ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಇವರಿಗೆ ಕನ್ನಡದಲ್ಲಿ ಒಳ್ಳೇ ಕೊಟ್ಟಂತಹ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ಬೃಂದಾವನ. ಬೃಂದಾವನ ಚಿತ್ರದ ಸೂಪರ್ ಹಿಟ್ ಯಶಸ್ಸು ಇವರನ್ನು ಕನ್ನಡಿಗರ ಮನದಲ್ಲಿ ನೆಲೆಯೂರುವಂತೆ ಮಾಡಿತು.

ಕೇವಲ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ಈ ನಟಿ ನಟಿಸಿ ಯಶಸ್ವಿಯಾಗಿದ್ದಾರೆ. ನಂತರ ಇತ್ತೀಚಿನ ವರ್ಷಗಳಲ್ಲಿ ಕನ್ನಡಕ್ಕೆ ವಾಪಾಸ್ಸಾದ ಇವರು ಮತ್ತೆ ಉದ್ಭವ ಹಾಗೂ ಲವ್ ಮಾಕ್ಟೇಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಲವ್ ಮಾಕ್ಟೇಲ್ ಚಿತ್ರವಂತೂ ಇವರ ಸಹ ನಿರ್ಮಾಣದಲ್ಲಿ ಮೂಡಿಬಂದಂತಹ ಚಿತ್ರ. ಇದರಲ್ಲಿ ಇವರು ನಾಯಕಿಯಾಗಿ ಕೂಡ ನಟಿಸಿದ್ದಾರೆ. ಈ ಚಿತ್ರ ಇವರ ಸಿನಿಜರ್ನಿಯ ಟರ್ನಿಂಗ್ ಪಾಯಿಂಟ್ ಅಂತಾನೇ ಹೇಳಬಹುದು. ಚಿತ್ರರಂಗದಲ್ಲಿ ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಸಖತ್ ಸೆನ್ಸೇಷನ್ ಸೃಷ್ಟಿಸಿದ್ದು ಮಾತ್ರವಲ್ಲದೆ ಅಮೇಜಾನ್ ಪ್ರೈಮ್ ನಲ್ಲಿ ಕೂಡ ಪರಭಾಷಿಗರಿಂದ ಅತ್ಯಂತ ಹೆಚ್ಚು ಮೆಚ್ಚುಗೆ ಪಡೆದ ಚಿತ್ರವಾಗಿತ್ತು.

ಈ ಚಿತ್ರದಲ್ಲಿ ಮೇಕಪ್, ನಿರ್ದೇಶನ, ಸಂಭಾಷಣೆ ಹೀಗೆ ಬಹುತೇಕ ಎಲ್ಲಾ ಡಿಪಾರ್ಟ್ಮೆಂಟ್ ಗಳಲ್ಲಿ ಕೂಡ ಇವರು ತಮ್ಮ ಕೊಡಗೆ ನೀಡಿದ್ದರು. ಈಗ ಚಿತ್ರರಂಗದಲ್ಲಿ ಹಲವಾರು ಚಿತ್ರಗಳು ಹಾಗೂ ಅವಕಾಶಗಳು ಕೈಯಲ್ಲಿದ್ದರೂ ಮೊದಲು ತಮ್ಮ ಜೀವನಕ್ಕೊಬ್ಬ ಸಂಗಾತಿಯನ್ನು ಗೊತ್ತು ಮಾಡಿಕೊಂಡು ಮದುವೆಯಾಗಿದ್ದಾರೆ. ಅವರು ಇನ್ನ್ಯಾರೂ ಅಲ್ಲ ಸ್ಯಾಂಡಲ್ ವುಡ್ ನ ಖ್ಯಾತ ಯುವ ನಟ ಹಾಗೂ ನಿರ್ದೇಶಕ ಹಾಗೂ ನಿರ್ಮಾಪಕ ಡಾರ್ಲಿಂಗ್ ಕೃಷ್ಣ. ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿರಬಹುದು. ಹೌದು ನಾವು ಮಾತನಾಡುತ್ತಿರೋದು ಏಳು ವರ್ಷಗಳಿಂದ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ ನಟಿ ಮಿಲನಾ ನಾಗರಾಜ್ ಕುರಿತಂತೆ. ಇಂದಿಗೆ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದರೂ ಕೂಡ ಪ್ರತಿ ಚಿತ್ರದಲ್ಲಿ ಕೂಡ ಪರಿಶ್ರಮ ಹಾಕುತ್ತಿದ್ದಾರೆ. ಮಿಲನಾ ನಾಗರಾಜ್ ಕಹಾನಿ ಕೇಳಿದ್ರಲ್ಲ ಏನನ್ನಿಸಿತು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ನಮಗೆ ತಿಳಿಸಿ.

Comments are closed.