Neer Dose Karnataka
Take a fresh look at your lifestyle.

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಖ್ಯಾತಿಗಳಿಸಿದ ವೀಣಾ ಸುಂದರ್ ಅವರ ಮಗಳು ಹೇಗಿದ್ದಾಳೆ ಗೊತ್ತಾ? ಅವರ ಮಗಳು ಸಖತ್ ಕ್ಯೂಟ್.

119

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಥವಾ ಕನ್ನಡ ಮನೋರಂಜನೆ ಕ್ಷೇತ್ರದಲ್ಲಿ ಒಂದು ವಾಡಿಕೆಯಿದೆ. ಒಂದೊಮ್ಮೆ ನೀವು ಕನ್ನಡದ ಚಿತ್ರರಂಗದಲ್ಲಿ ನಿಮ್ಮ ನಟನೆಯನ್ನು ಪ್ರಾರಂಭಿಸಿದರೆ ಅಲ್ಲಿಂದ ಕಿರುತೆರೆಗೆ ನೀವು ಬರುವ ಸಾಧ್ಯತೆ ಇರುತ್ತದೆ. ಇನ್ನು ಕೆಲವೊಮ್ಮೆ ಯುವ ನಟ ನಟಿಯರು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿ ಕನ್ನಡ ಚಿತ್ರರಂಗಕ್ಕೆ ಹಾರಿ ಬಿಡುತ್ತಾರೆ. ನಮ್ಮ ಇಂದಿನ ವಿಶೇಷ ಸಂಚಿಕೆಯಲ್ಲಿ ನಾವು ಕೂಡ ಇದೇ ಮಾದರಿಯ ಕಥೆಯನ್ನು ನಾವು ಹೇಳಲು ಹೊರಟಿದ್ದೇವೆ.

ಈ ನಟಿ ಮೊದಲು ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ನಟಿಸಿದವರು ಅದಾದನಂತರ ಕನ್ನಡ ಕಿರುತೆರೆಯಲ್ಲಿ ಬಹು ಬೇಡಿಕೆಯ ನಟಿಯಾಗಿ ನಟಿಸಿದ ಖ್ಯಾತಿ ಪಡೆದವರು. ಆ ನಟಿ ಯಾರದು ಎಂಬ ನಿಮ್ಮ ಗೊಂದಲಕ್ಕೆ ಕಾರಣವಾಗಿರಬಹುದು ನಿಮ್ಮ ಗೊಂದಲವನ್ನು ನಾವು ಪರಿಹರಿಸುತ್ತೇವೆ ಬನ್ನಿ. ಹೌದು ನಾವು ಇಂದು ಹೇಳಹೊರಟಿರುವ ನಟಿಯ ಹೆಸರು ನಮಗೆಲ್ಲಾ ಗೊತ್ತಿರೋ ನೆಚ್ಚಿನ ಪೋಷಕ ನಟಿ ವೀಣಾ ಸುಂದರ್ ಅವರ ಬಗ್ಗೆ.

ಅಂದಿನ ಕಾಲದಿಂದಲೂ ಇಂದಿನವರೆಗೂ ಕನ್ನಡ ಚಿತ್ರರಂಗದಲ್ಲಿ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ನಡೆಸಿಕೊಂಡು ಬಂದವರು. ಎಂತಹ ಪಾತ್ರಗಳನ್ನು ಕೂಡ ಸುಲಲಿತವಾಗಿ ನಿರ್ವಹಿಸಬಲ್ಲಂತಹ ಪ್ರತಿಭಾನ್ವಿತ ನಟಿ ವೀಣಾ ಸುಂದರ್. ವೀಣಾ ಸುಂದರ್ ಅವರು ಚಿತ್ರರಂಗದಲ್ಲಿ ಎಲ್ಲಾ ಸೂಪರ್ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುಬೇಡಿಕೆಯ ಪೋಷಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ವೀಣಾ ಸುಂದರ್ ರವರು ಮಾತ್ರವಲ್ಲದೆ ಅವರ ಪತಿ ಸುಂದರ್ ಅವರು ಕೂಡ ಕನ್ನಡಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಚಾಲ್ತಿಯಲ್ಲಿರುವ ಬಹುಬೇಡಿಕೆಯ ಪೋಷಕ ನಟ.

ಇವರಿಬ್ಬರು ಪೋಷಕ ನಟರಾಗಿ ಜೋಡಿಯಾಗಿ ನಟಿಸಿರುವುದು ನಿಮ್ಮ ಹಲವಾರು ಸಿನಿಮಾಗಳು ಹಾಗೂ ಧಾರವಾಹಿಯಲ್ಲಿ ಕಂಡಿರಬಹುದು. ಪೋಷಕ ನಟರಾಗಿ ನಟಿಸಿದರು ಕೂಡ ಇವರು ತಮ್ಮ ಕಾಂಬಿನೇಷನ್ ಮೂಲಕ ಬಹುಬೇಡಿಕೆ ಸೂಚಿಸಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಹಾಗೂ ಧಾರವಾಹಿಯಲ್ಲಿ. ಇವರಿಬ್ಬರ ಜೋಡಿಯನ್ನು ನೀವು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ ಪವರ್ ನಲ್ಲಿ ನೋಡಿರಬಹುದು. ಪವರ್ ಸ್ಟಾರ್ ಪುನೀತ್ ರಾಜಕುಮಾರ ನಟನೆಯ ಚಿತ್ರವಾಗಿತ್ತು.

ಇವರ ಜೋಡಿ ಕೇವಲ ಚಿತ್ರ ನಟನೆಯಲ್ಲಿ ಮಾತ್ರವಲ್ಲದೆ ಕಿರುತೆರೆಯ ಸೂಪರ್ ಹಿಟ್ ಧಾರವಾಹಿಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದು. ಅಲ್ಲಿ ಕೂಡ ಅಭೂತಪೂರ್ವ ರೆಸ್ಪಾನ್ಸ್ ಪಡೆದು ಸೂಪರ್ ಹಿಟ್ ಜೋಡಿಯಾಗಿ ಮಿಂಚಿತ್ತು. ಸುಂದರ್ ರವರು ವೃತ್ತಿಯಲ್ಲಿ ಶಿಕ್ಷಕರು. ನಟನೆಯನ್ನು ಹಾಬಿಯಾಗಿ ತೆಗೆದುಕೊಂಡು ಈಗ ನಟನೆಯಲ್ಲಿ ಜೀವನವನ್ನು ಕಾಣುತ್ತಿದ್ದಾರೆ. ನಟಿ ವೀಣಾ ಸುಂದರ ಕೂಡ ಗಂಡನಷ್ಟೇ ಪ್ರತಿಭಾವಂತ ನಟಿ ಹಾಗೂ ಗಂಡನಿಗೆ ತಕ್ಕಂತ ಮಡದಿ. ಇನ್ನು ಇವರ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ.

ಸುಂದರ್ ಹಾಗೂ ಶ್ರೀಮತಿ ವೀಣಾ ಸುಂದರ್ ಅವರ ಕುಟುಂಬ ಸಂತೋಷದಿಂದ ಕೂಡಿದ್ದು ಇವರಿಬ್ಬರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳು. ಹೆಣ್ಣುಮಕ್ಕಳು ಕ್ಯೂಟ್ ಆಗಿದ್ದು ಈಗಾಗಲೇ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದಾರೆ. ಹೆಣ್ಣುಮಗಳಿಗೂ ಸಹ ನಟನೆಯ ಶಿಕ್ಷಣವನ್ನು ನೀಡುತ್ತಿದ್ದು ಒಂದೇ ಕುಟುಂಬದಿಂದ ಮೂವರು ಕೂಡ ನಟನಾ ರಂಗಕ್ಕೆ ತಮ್ಮ ಬದುಕನ್ನು ಮೀಸಲಿಡುವ ನಿರೀಕ್ಷೆಯಿದೆ. ವೀಣಾ ಸುಂದರ್ ಅವರ ಮಗಳಿಗೆ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯ ರಂಗದಲ್ಲಿ ಉತ್ತಮ ಭವಿಷ್ಯ ಸಿಗಲೆಂದು ಹಾರೈಸೋಣ. ಈ ಮಾಹಿತಿ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Leave A Reply

Your email address will not be published.