Neer Dose Karnataka
Take a fresh look at your lifestyle.

ಏಷ್ಯಾ ಖಂಡದ ಉದ್ದವಾದ ರಸ್ತೆಗೆ ಕನ್ನಡದ ಖ್ಯಾತ ನಟನ ಹೆಸರು..! ಆ ನಟ ಯಾರು? ಆ ರಸ್ತೆ ಯಾವುದು ಗೊತ್ತಾ??

22

ನಮಸ್ಕಾರ ಸ್ನೇಹಿತರೇ ಯಾವುದೇ ಕ್ಷೇತ್ರವಾಗಲಿ ಇತಿಹಾಸ ನಿರ್ಮಿಸುವುದು ಸುಲಭದ ಮಾತಲ್ಲ. ಹೌದು ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕೆಂದರೆ ಅದರ ಹಿಂದೆ ನಾವು ಸಾಕಷ್ಟು ಪ್ರಯತ್ನ ಹಾಗೂ ಅಭ್ಯಾಸ ಮಾಡಿರಬೇಕು. ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿಯಲು ಸಾಕಷ್ಟು ರೀತಿಯ ಸಮಸ್ಯೆಗಳನ್ನು ವಿತರಿಸಿದರು ಕೂಡ ಎದೆಗುಂದದೆ ನಮ್ಮ ಗುರಿಯತ್ತ ನಾವು ಮುನ್ನುಗ್ಗುತ್ತಿರಬೇಕು. ಅಂದಾಗ ಮಾತ್ರ ನಾವು ಇತಿಹಾಸ ಸೃಷ್ಟಿಸಬಹುದು.

ಇನ್ನು ನಾವು ಸಾಕಷ್ಟು ರಸ್ತೆಗಳಿಗೆ ಖ್ಯಾತ ವ್ಯಕ್ತಿಗಳ ಹೆಸರನ್ನಿಟ್ಟಿರುವುದು ನೋಡಿರುತ್ತೇವೆ. ಹೌದು ಚಿತ್ರರಂಗ, ರಾಜಕೀಯ ರಂಗ, ಐಐಟಿ ರಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಹೆಸರನ್ನು ಪ್ರಮುಖ ರಸ್ತೆಗಳಿಗೆ ಇಡುವುದು ಸಹಜ. ಇಂತಹ ಸಾಕಷ್ಟು ರಸ್ತೆಗಳನ್ನು ನಾವು ವಿವಿಧ ನಗರಗಳಲ್ಲಿ ನೋಡಬಹುದು. ಆದರೆ ಇದೀಗ ಏಷ್ಯಾದ ಅತಿ ಉದ್ದವಾದ ರಸ್ತೆಗೆ ಕನ್ನಡ ಚಿತ್ರರಂಗದ ಖ್ಯಾತ ನಟರ ಹೆಸರನ್ನು ಇಟ್ಟಿದ್ದಾರೆ. ಹಾಗಾದರೆ ಆ ರಸ್ತೆ ಯಾವುದು? ಎಲ್ಲಿದೆ? ಆ ಕನ್ನಡದ ನಟ ಯಾರು? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಸ್ಟಾರ್ ನಟರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನು ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಇಂತಹ ನಟರನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನರನ್ನು ಗುರುತಿಸಬಹುದು. ಇನ್ನೂ ಕೆಲವು ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಕೂಡ ಅವರ ಒಂದು ಅಭಿನಯ ಹಾಗೂ ಅವರ ಒಂದು ಮುಖಚಹರೆ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಅಂತಹ ಸಾಕಷ್ಟು ನಟರು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಅಜರಾಮರವಾಗಿದ್ದಾರೆ. ಇನ್ನೂ ಅಂತಹ ನಟರಲ್ಲಿ ಒಬ್ಬ ನಟನ ಹೆಸರು ಇದೀಗ ಏಷ್ಯಾದ ಅತಿ ಉದ್ದವಾದ ರಸ್ತೆಗೆ ಇಡಲಾಗಿದೆ. ಇದು ನಮ್ಮ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಹೌದು ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರ ಹೆಸರನ್ನು ರಸ್ತೆಗೆ ಇಟ್ಟಿದ್ದು ಕನ್ನಡಿಗರಿಗೆ ತುಂಬಾ ಖುಷಿಯಾಗಿದೆ.

ಇನ್ನು ಈ ರಸ್ತೆಗೆ ಹೆಸರನ್ನಿಡಲು cnn-ibn ಒಂದು ಸರ್ವೆ ಮಾಡಿದ್ದು, ಈ ಸರ್ವೇಯಲ್ಲಿ ಹೆಚ್ಚು ಮತ ಪಡೆದ ಕನ್ನಡದ ಹಿರಿಯ ನಟರೊಬ್ಬರು ಹೆಸರನ್ನು ಇದೀಗ ಉದ್ದವಾದ ರಸ್ತೆಗೆ ಇಡಲಾಗಿದೆ. ಇನ್ನು ಆ ನಟ ಮತ್ತ್ಯಾರು ಅಲ್ಲ ನಮ್ಮ ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್. ಹೌದು ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ನಟ ವಿಷ್ಣುವರ್ಧನ್ ಅವರ ಅಭಿನಯ ಮರೆಯುವಂತಿಲ್ಲ. ಇನ್ನು ಏಷ್ಯಾಖಂಡದಲ್ಲೇ ಯಾರು ಮುರಿಯಲಾರದ ಅಂತಹ ದಾಖಲೆಯೊಂದು ನಟ ವಿಷ್ಣುವರ್ಧನ್ ಅವರ ಹೆಸರು ಮೇಲಿದೆ ಎಂದು ಅದೆಷ್ಟೋ ಜನರಿಗೆ ತಿಳಿದಿಲ್ಲ.

ಹೌದು ಇದೀಗ 14.5 ಕಿಲೋಮೀಟರ್ ಉದ್ದವಿರುವ ಬನಶಂಕರಿ ದೇವಸ್ಥಾನದಿಂದ ಕೆಂಗೇರಿಯವರೆಗೆ ಇರುವ ರಸ್ತೆಗೆ ವಿಷ್ಣುವರ್ಧನ್ ಅವರ ಹೆಸರನ್ನಿಡಲಾಗಿದೆ. ಈ ಮೂಲಕ ಏಷ್ಯಾ ಖಂಡದಲ್ಲಿ ಒಬ್ಬ ನಟನ ಹೆಸರನ್ನು ಹೊಂದಿರುವ ಅತಿ ಉದ್ದವಾದ ರಸ್ತೆ ಇದಾಗಿದೆ. ಇನ್ನೂ ಚಿತ್ರರಂಗದ ಯಾವ ನಟನ ಹೆಸರಿನಲ್ಲಿಯೂ ಕೂಡ ಈ ರೀತಿಯ ಒಂದು ದಾಖಲೆ ಇಲ್ಲ. ಅಂತಹ ದಾಖಲೆಗೆ ನಮ್ಮ ಸಾಹಸಸಿಂಹ ಪಾತ್ರರಾಗಿದ್ದಾರೆ. ಇನ್ನು ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು ಅವರ ಅಭಿಮಾನಿಗಳು ಸಾಕಷ್ಟು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುದ್ದಿ ನೀವು ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.