Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಬಿಗ್ ಬಾಸ್ ಗೆ ತೆರಳಲು ಕ್ವಾರಂಟೈನ್ ನಲ್ಲಿ ವಿಶೇಷ ಅತಿಥಿ, ಒಂದೇ ದಿನದಲ್ಲಿ ಟಿಆರ್ಪಿ ಲೆಕ್ಕಾಚಾರಗಳು ಉಡೀಸ್. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಅಧಿಕೃತವಾಗಿ ಮರು ಆರಂಭ ಪಡೆದುಕೊಂಡಿದೆ. ಲಾಕ್ ಡೌನ್ ಸಮಯದಲ್ಲಿ ಅರ್ಧಕ್ಕೆ ನಿಂತು ಹೋಗಿದ್ದ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಮತ್ತೊಮ್ಮೆ ವರ್ಣ ರಂಜಿತವಾಗಿ ಪುನರಾರಂಭವಾಗಿದೆ. ಕಿಚ್ಚ ಸುದೀಪ್ ರವರು 12 ಸ್ಪರ್ದಿಗಳನ್ನು ವೇದಿಕೆ ಮೇಲೆ ಕರೆದು ಮನೆಯ ಒಳಗಡೆ ಕಳುಹಿಸಿಕೊಟ್ಟಿದ್ದಾರೆ. ಇನ್ನು ಮೊದಲ ದಿನವೇ ಪೈಪೋಟಿ ಮೂಡಿಸಿದೆ.

ಹೌದು ಸ್ನೇಹಿತರೇ, ಮೊದಲ ದಿನವೇ ಸ್ಪರ್ದಿಗಳ ನಡುವೆ ಬಾರಿ ಪೈಪೋಟಿ ಮೂಡಿದೆ, ಪ್ರತಿಯೊಬ್ಬರೂ ಹೊರ ಜಗತ್ತಿನಲ್ಲಿ ನಡೆದುಕೊಂಡ ರೀತಿಯು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದು ಕೊಂಡಂತೆ ಬಹುತೇಕ ಸ್ಪರ್ದಿಗಳು ಪ್ರಶಾಂತ್ ಸಂಭರ್ಗಿ ರವರ ವಿರುದ್ಧ ಮಾತನಾಡಿದ್ದಾರೆ. ಸ್ನೇಹಿತರು ಎಂದು ಕೊಂಡಿದ್ದ ಸ್ಪರ್ದಿಗಳು ಒಬ್ಬರನ್ನೊಬ್ಬರು ಮಾತಿನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರಿಂದ ಬಿಗ್ ಬಾಸ್ ಕಾರ್ಯಕ್ರಮ ಮೊದಲ ದಿನವೇ ಬಾರಿ ಕುತೂಹಲ ಮೂಡಿಸಿದೆ. ಇದೇ ಸಮಯದಲ್ಲಿ ಕಿರುತೆರೆಯ ಮೂಲಗಳಿಂದ ಮತ್ತೊಂದು ಮಾಹಿತಿ ತಿಳಿದು ಬಂದಿದ್ದು, ಖ್ಯಾತ ನಟಿಯೊಬ್ಬರು ಬಿಗ್ ಬಾಸ್ ಮನೆಗೆ ಒಂದು ದಿನದ ಅತಿಥಿಯಾಗಿ ತೆರಳಿದ್ದಾರೆ ಎಂಬುದು ತಿಳಿದು ಬಂದಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಸ್ಪರ್ದಿಯಾಗಬೇಕಾಗಿದ್ದ ಇವರು ಕಾರಣಾಂತರಗಳಿಂದ ಇದೀಗ ಅತಿಥಿಯಾಗಿ ಹೋಗುತ್ತಿದ್ದಾರೆ. ಅವರು ಮತ್ಯಾರು ಅಲ್ಲ, ಕನ್ನಡ ಚಿತ್ರರಂಗದ ಸ್ವೀಟಿ ಎಂದೇ ಖ್ಯಾತಿ ಪಡೆದುಕೊಂಡಿರುವ ರಾಧಿಕಾ ರವರು ಇದೀಗ ಬಿಗ್ ಬಾಸ್ ಮನೆಯ ಒಳಗಡೆ ತೆರಳಲು ಕ್ವಾರಂಟೈನ್ ಆರಂಭ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಒಂದೇ ವೇಳೆ ಅದೇ ನಡೆದಲ್ಲಿ ಖಂಡಿತ ಟಿಆರ್ಪಿ ಲೆಕ್ಕಾಚಾರಗಳು ಉಡೀಸ್ ಆಗುವುದು ಖಚಿತ.

Comments are closed.