Neer Dose Karnataka
Take a fresh look at your lifestyle.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಟಿ ಮೇಘನಾ ಸರ್ಜಾ ರವರ ಅಣ್ಣ ಕೂಡ ಟಾಪ್ ನಟ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವು ನಟಿಯರು ಕರ್ನಾಟಕದಲ್ಲಿ ಹುಟ್ಟಿ ನಂತರ ಬೇರೆ ಭಾಷೆಗಳಲ್ಲಿ ನಟಿಸಿ ಪ್ರಸಿದ್ಧಿಯನ್ನು ಹೊಂದಿದ ನಂತರ ಮತ್ತೊಮ್ಮೆ ಕನ್ನಡಚಿತ್ರರಂಗದಲ್ಲಿ ಕಾಲಿಟ್ಟು ಯಶಸ್ಸನ್ನು ಗಳಿಸಿರುವ ಹಲವಾರು ಘಟನೆಗಳು ನಿಮಗೆ ಗೊತ್ತಿದೆ. ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಕೂಡ ಇದರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಈಗ ಈಕೆ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿದ್ದರು ಸಹ ಹೀಗೆ ಪಾದಾರ್ಪಣೆ ಮಾಡಿದ್ದು ಮಾತ್ರ ಮಲಯಾಳಂ ಚಿತ್ರರಂಗದಲ್ಲಿ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿರುವ ಮೇಘನಾ ರಾಜ್ ರವರ ಕುರಿತಂತೆ. ಹೌದು ಸ್ನೇಹಿತರಾಗಿ ಮೇಘನರಾಜ್ ಚಿಕ್ಕವಯಸ್ಸಿನಿಂದಲೂ ಚಿತ್ರರಂಗವನ್ನು ಚೆನ್ನಾಗಿ ಬಲ್ಲವರು ಹಾಗೂ ಹತ್ತಿರದಿಂದ ನೋಡಿದವರು. ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟರಾಗಿರುವ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮಗಳಾಗಿ 1990 ಯಲ್ಲಿ ಜನಿಸಿದರು. ಬೆಂಗಳೂರಲ್ಲಿ ತಮ್ಮ ಸರ್ವ ಶಿಕ್ಷಣವನ್ನು ಹಾಗೂ ಪದವಿಯನ್ನು ಪಡೆದ ಇವರು ಚಿಕ್ಕವಯಸ್ಸಿನಿಂದಲೂ ತಂದೆಯ ಜೊತೆಗೆ ನಾಟಕ ಹಾಗೂ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ಹೋಗುತ್ತಿದ್ದರು.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಅವರು ನಟಿಯಾಗಿ ಪಾದಾರ್ಪಣೆ ಮಾಡಿದ್ದು ತಮ್ಮ ತಂದೆ ಜೊತೆ ನಾಟಕಗಳಲ್ಲಿ. ಅವರು ಸಿನಿ ಜಗತ್ತಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದು ಕೆ ಬಾಲಚಂದರ್ ಅವರ ಕೃಷ್ಣ ಲೀಲಾ ಚಿತ್ರದ ಮೂಲಕವಾದರೂ ಸಹ ಅದು ನಿರೀಕ್ಷಿತ ಸಮಯದಲ್ಲಿ ಬಿಡುಗಡೆಯಾಗಲಿಲ್ಲ. ನಂತರ ನಟಿ ಮೇಘನರಾಜ್ ಅವರು ಮಲಯಾಳಂ ಚಿತ್ರವಾದ ಬೆಂದು ಅಪ್ಪರಾವ್ ಆರ್ ಎಂ ಪಿ ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು.

ನಂತರ ಹಲವಾರು ಪರಭಾಷಾ ಚಿತ್ರಗಳಲ್ಲಿ ನಟಿಸಿದ ಏಕೆ ಕನ್ನಡಕ್ಕೆ ಕಾಲಿಟ್ಟಿದ್ದ ಲೂಸ್ ಮಾದ ಯೋಗಿ ನಟನೆಯ ಪುಂಡ ಚಿತ್ರದ ಮೂಲಕ. ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟಿಯಾಗಿ ಕೂಡ ರೂಪುಗೊಂಡರು. ಆದರೂ ಸಹ ಮೇಘನರಾಜ ರವರು ಸಾಕಷ್ಟು ಯಶಸ್ಸನ್ನು ಗಳಿಸಿಕೊಂಡಿದ್ದು ಮಲಯಾಳಂ ಚಿತ್ರರಂಗದಲ್ಲಿ. ಇನ್ನು ಇವರು ಚಿರು ಸರ್ಜಾ ರನ್ನು ಪ್ರೀತಿಸಿ ಮದುವೆಯಾಗಿರುವುದು ನಿಮಗೆ ಗೊತ್ತಿದೆ. ಇತ್ತೀಚಿನ ದಿನಗಳಲ್ಲಿ ಅವರು ನಟಿಸಿದ ಕೊನೆಯ ಚಿತ್ರ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ.

ನಿಮಗೆ ಒಂದು ವಿಷಯ ಗೊತ್ತಾ ಸ್ನೇಹಿತರೆ ನಟಿ ಮೇಘನಾ ರಾಜ್ ಅವರ ಅಣ್ಣ ಕೂಡ ಖ್ಯಾತ ನಟ. ಇವರ್ಯಾರು ಎಂಬ ಕುರಿತಂತೆ ನಿಮಗೆ ವಿವರವಾಗಿ ಮಾಹಿತಿ ನೀಡುತ್ತವೆ ಬನ್ನಿ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಹಿರಿಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮಗಳಾಗಿರುವ ಮೇಘನಾ ರಾಜ್ ರವರ ಅಣ್ಣ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಮೇಘನಾ ರಾಜ್ ಅವರ ಸೋದರನ ಹೆಸರು ತೇಜ್ ಎಂದು.

ಇನ್ನು ಇವರು ಈಗಾಗಲೇ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ಕನ್ನಡ ಚಿತ್ರರಂಗದಲ್ಲಿ ರಿವೈಂಡ್ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇನ್ನು ಇದಾದ ನಂತರ ಆ ರಾಮಾಚಾರಿ 2.0 ಚಿತ್ರದ ಮೂಲಕ ಮಗದೊಮ್ಮೆ ಕನ್ನಡ ಪ್ರೇಕ್ಷಕರ ಮನವನ್ನು ಗೆಲ್ಲಲು ಸಜ್ಜಾಗಿದ್ದಾರೆ. ಒಟ್ಟಾರೆ ಸಹೋದರ ಹಾಗೂ ಸಹೋದರಿಯರಿಬ್ಬರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಸ್ಥಾಪಿಸಲು ಪರಿಶ್ರಮ ಪಡುತ್ತಿದ್ದಾರೆ. ಇವರಿಬ್ಬರಿಗೂ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿ ಎಂದು ಆಶಿಸೋಣ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.