Neer Dose Karnataka
Take a fresh look at your lifestyle.

ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಾರಕ್ಕೆ ಮಂಜು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಮಂಜು ಲೈಫ್ ಸ್ಟೈಲ್ ಫುಲ್ ಚೇಂಜ್.

1

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಎಲ್ಲಿ ನೋಡಿದರೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 8ರದ್ದೇ ಹವಾ. ಅದರಲ್ಲೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ರವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೌದು ಸ್ನೇಹಿತರೆ ಅತ್ಯಂತ ಬಡ ಕುಟುಂಬದಿಂದ ಬಂದಂತಹ ಪ್ರತಿಭಾನ್ವಿತ ಹುಡುಗ ಮಂಜು ಪಾವಗಡ. ತುಮಕೂರಿನ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಅಂತಹ ಮಂಜು ಪಾವಗಡ ರವರು ನಟನೆಯಲ್ಲಿ ವಿಪರೀತವಾದ ಆಸಕ್ತಿಯನ್ನು ಉಳ್ಳವರಾಗಿದ್ದರು.

ನಂತರ ದಿನಗಳಲ್ಲಿ ನಟನೆಯ ಅವಕಾಶವನ್ನು ಅರಸುತ್ತಾ ಬೆಂಗಳೂರಿಗೆ ಬಂದಂತಹ ಮಂಜು ಪಾವಗಡ ರವರು ಸೇರಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂತಹ ಮಜಾ ಭಾರತ ಕಾರ್ಯಕ್ರಮದಲ್ಲಿ. ಮಜಾಭಾರತ ಕಾರ್ಯಕ್ರಮದಲ್ಲಿ ವಿಭಿನ್ನ ಪಾತ್ರ ಹಾಗೂ ಮನರಂಜನಾತ್ಮಕ ನಾಟಕಗಳ ಮೂಲಕ ಪ್ರೇಕ್ಷಕರ ಮನಗೆದ್ದ ಕಿರುತೆರೆಯ ಸೂಪರ್ಸ್ಟಾರ್ ಆಗಿಬಿಟ್ಟರು. ಆಗಲಿ ಅವರ ನಟನೆಯ ಪ್ರತಿಭೆಯನ್ನು ನೋಡಿ ರಾಮಾರ್ಜುನ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಬಜರಂಗಿ 2 ಚಿತ್ರಕ್ಕೆ ಅವಕಾಶವನ್ನು ನೀಡಲಾಗಿದೆ. ಕೊಟ್ಟಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಮಟ್ಟಿಗೆ ಎಲ್ಲರೂ ಮಂಜು ಪಾವಗಡದ ಅವರನ್ನು ನೋಡಿ ಕಲಿಯಬೇಕು.

ಇನ್ನು ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದ್ದು ಈಗಾಗಲೇ ಬಿಗ್ ಬಾಸ್ ಕನ್ನಡ ಎಂಟರ ಸೀಸನ್ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಲು ಕೇವಲ 10 ದಿನಗಳಷ್ಟೇ ಬಾಕಿ ಉಳಿದಿವೆ. ಇನ್ನು ಈಗಾಗಲೇ ಮಂಜು ಪಾವಗಡ ರವರು ಕಲರ್ಸ್ ಕನ್ನಡ ವಾಹಿನಿಯ ಮುಖಾಂತರ ಬರೋಬ್ಬರಿ 5 ಲಕ್ಷದ 50 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ. ಬಡತನದಿಂದ ಆರಂಭವಾದ ಮಂಜು ಪಾವಗಡ ರವರ ಜೀವನ ಈಗ ಅವರು ಬೇಕೆಂದ ಹಾಗೆ ಜೀವಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕೆಲ್ಲ ಕಾರಣ ಆ ಮಂಜು ಪಾವಗಡ ರವರ ಪರಿಶ್ರಮದ ಜೀವನವೇ ಹೊರತು ಇನ್ನೇನಲ್ಲ ದೇವರು ಅವರಿಗೆ ಇನ್ನಷ್ಟು ಒಳ್ಳೆ ಅವಕಾಶ ಹಾಗೂ ಒಳ್ಳೆಯ ಜೀವನ ದೊರಕುವಂತೆ ಮಾಡಲಿ ಎಂದು ಆಶಿಸೋಣ.

Leave A Reply

Your email address will not be published.