Neer Dose Karnataka
Take a fresh look at your lifestyle.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಸಹೋದರ ಯಾರು ಗೊತ್ತೇ?? ಅವರು ಕೂಡ ತುಂಬಾನೇ ಫೇಮಸ್ ಯಾರು ಗೊತ್ತಾ‌??

0

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಅತ್ಯಂತ ಖ್ಯಾತರಾಗಿದ್ದಂತಹ ಖಳನಟ ಶಕ್ತಿಪ್ರಸಾದ್ ರವರ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ಇನ್ನು ಅವರ ಮಗ ಕೂಡ ಏನು ಸಾಮಾನ್ಯರಲ್ಲ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಬಗ್ಗೆ. ಅರ್ಜುನ್ ಸರ್ಜಾ ರವರು ಮೊದಲಿಗೆ ಕನ್ನಡ ಚಿತ್ರಂಗಕ್ಕೆ ಸಿಂಹದಮರಿ ಸೈನ್ಯ ಎಂಬ ಚಿತ್ರದ ಮೂಲಕ ಬಾಲನಟನಾಗಿ ಎಂಟ್ರಿ ಕೊಡುತ್ತಾರೆ. ನಂತರ ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ನಾಲ್ಕರಿಂದ ಐದು ಸಿನಿಮಾಗಳಲ್ಲಿ ನಟಿಸುತ್ತಾರೆ.

ನಂತರ ಮಳೆ ಬಂತು ಮಳೆ ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಂತರ ತಮಿಳು ತೆಲುಗು ಹಿಂದಿ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ತಮಿಳು ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರಿಗೆ ಬಹಳಷ್ಟು ಬೇಡಿಕೆಯಿದೆ. ಇದುವರೆಗೂ ಪಂಚ ಭಾಷೆಗಳನ್ನು 250ಕ್ಕೂ ಅಧಿಕ ಸಿನಿಮಾಗಳಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರಂತೆ ಇವರ ಸಹೋದರ ಕೂಡ ತುಂಬಾ ಫೇಮಸ್ ಗೊತ್ತಾ.

ಹೌದು ಸ್ನೇಹಿತರೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಸಹೋದರ ಕಿಶೋರ್ ಸರ್ಜಾ ರವರು ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಅವರು ನಿರ್ದೇಶಕರಾಗಿ 6 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅರ್ಜುನ್ ಸರ್ಜಾ ರವರಿಗೆ ಅಳಿಮಯ್ಯ ಹಾಗೂ ಮಕ್ಕಳ ಸಾಕ್ಷಿ, ರಮೇಶ್ ಅರವಿಂದ್ ರವರಿಗೆ ತುತ್ತ ಮುತ್ತ, ಶಿವರಾಜ್ ಕುಮಾರ್ ರವರಿಗೆ ಜೋಡಿ ಹಾಗೂ ಬಾವ ಬಾಮೈದ, ಚಿರು ಸರ್ಜಾ ಅವರ ಚೊಚ್ಚಲ ಚಿತ್ರ ವಾಯುಪುತ್ರ ವನ್ನು ಕೂಡ ಇವರ ನಿರ್ದೇಶಿಸಿದ್ದರು. ಇನ್ನು ತಮ್ಮ 50ನೇ ವಯಸ್ಸಿನಲ್ಲಿ ಇವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ.

Leave A Reply

Your email address will not be published.