Neer Dose Karnataka
Take a fresh look at your lifestyle.

ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದ ಕನ್ನಡದ ಸಿನಿಮಾ ಸ್ಟಾರ್ ಗಳು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.

0

ನಮಸ್ಕಾರ ಸ್ನೇಹಿತರೇ ಸಿನಿಮಾರಂಗದಲ್ಲಿ ನಟಿಸುವ ಕೆಲವು ನಟರ ಬದುಕು ಕೂಡ ಕೆಲವೊಮ್ಮೆ ನಟನೆಯಂತೆಯೇ ಆನ್ನಿಸುತ್ತದೆ. ಯಾಕೆಂದರೆ ಕೆಲವು ಕಲಾವಿದರು ತಮ್ಮ ದಾಂಪತ್ಯ ಜೀವನವನ್ನು ನಿಭಾಯಿಸುವಲ್ಲಿ ಸೋಲುತ್ತಾರೆ. ಮದುವೆ ಎಂಬ ಬಂಧ ಗಟ್ಟಿಯಾಗಿ ಉಳಿಯದೇ ಕಳಚಿಬೀಳುತ್ತದೆ. ಸಿನಿಮಾ ದೃಶ್ಯಗಳಂತೆಯೇ ಅವರ ನಿಜ ಜೀವನದಲ್ಲೂ ಘಟನೆಗಳು ನಡೆದಿರುತ್ತದೆ. ಇನ್ನು ಸಾಕಷ್ಟು ಪ್ರಖ್ಯಾತ ನಟ ನಟಿಯರು ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದು ಇದೆ. ಅಂತವರ ಹೆಸರುಗಳು ಇಲ್ಲಿವೆ ನೋಡಿ.

ನಟಿ ಲಕ್ಷ್ಮಿ ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲಿಗೆ ಭಾಸ್ಕರ್ ಎಂಬುವವರನ್ನು ಮದುವೆಯಾಗಿ ನಂತರ ಅವರನ್ನು ಬಿಟ್ಟು ಮೋಹನ್ ಶರ್ಮಾ ಅವರನ್ನು ವಿವಾಹ ವಾಗುತ್ತಾರೆ. ಆನಂತರ ಅವರಿಂದಲೂ ವಿಚ್ಛೇಧನ ಪಡೆದು ಶಿವಚಂದ್ರ ಎಂಬವರನ್ನು ಮದುವೆಯಾಗುತ್ತಾರೆ ನಟಿ ಲಕ್ಷ್ಮಿ. ಕನ್ನಡ ಚಿತ್ರರಂಗದ ಟೈಗರ್ ಪ್ರಭಾಕರ್ ಅವರು 2 ಮದುವೆಯಾಗಿದ್ದಾರೆ. ನಟಿಯರಾದ ಜಯಮಾಲ ಹಾಗೂ ಅಂಜು ಇವರ ಪತ್ನಿಯರು. ಇನ್ನು ನಟಿ ಶೃತಿಯವರು ಕೂಡ 2 ಮದುವೆಯಾದವರು. ಮೊದಲು ನಿರ್ದೇಶಕ ಮಹೇಂದರ್ ಅವರನ್ನು ವರಿಸಿ ನಂತರ ಅವರನ್ನು ಬಿಟ್ಟು ಚಕ್ರವರ್ತಿ ಚಂದ್ರಚೂಡ್ ಅವರನ್ನು ಮದುವೆಯಾದರು. ಈಗ ಅವರಿಂದಲೂ ದೂರವಾಗಿದ್ದಾರೆ.

ಇನ್ನು ಕನ್ನದ ಚಿತ್ರರಂಗದ ನಟ ಹಾಗೂ ನಿರ್ಮಾಪಕ ಓಂ ಪ್ರಕಾಶ್ ಕೂಡ 3 ಬಾರಿ ವಿವಾಹವಾಗಿದ್ದಾರೆ. ನಟಿ ರೇಖಾ ದಾಸ್ ಇವರ ಮೊದಲ ಪತ್ನಿ. ನಂತರ ಎರಡನೇ ವಿವಾಹವಾದದ್ದು ನಂದಾ ಎನ್ನುವವರುಅನ್ನು. ಮೂರನೆಯ ಮದುವೆ ಭವ್ಯಾ ಎಂಬುವವರ ಜೊತೆ ಆಗಿದ್ದಾರೆ. ಇನ್ನು ಗಾಯಕ ರಾಜೇಶ್ ಕೃಷ್ಣನ್ ಕೂಡ 3 ವಿವಾಹವಾಗಿದ್ದಾರೆ. ಮೊದಲು ಗಾಯಕಿ ಸೌಮ್ಯ ಅವರೊಂದಿಗೆ ವೈವಾಹಿಕ ಜೀವನ ಪ್ರಾರಂಭಿಸಿ ನಂತರ ಅವರಿಂದ ದೂರವಾಗಿ ಹರಿಪ್ರಿಯ ಎಂಬವವರನ್ನು ಮದುವೆಯಾಗುತ್ತಾರೆ. ನಂತರ ಅವರನ್ನು ಬಿಟ್ಟು ಗಾಯಕಿ ಹಾಗೂ ನಟಿ ರಮ್ಯಾ ವಸಿಷ್ಠ ಅವರನ್ನು ವಿವಾಹವಾಗಿ ಅವರಿಂದಲೂ ದೂರವಾಗಿದ್ದಾರೆ.

Leave A Reply

Your email address will not be published.