Neer Dose Karnataka
Take a fresh look at your lifestyle.

ಮಂಡ್ಯ ರಮೇಶ್ ರವರ ಮಗನ ಮದುವೆಯ ಸಮಾರಂಭ ಹೇಗಿತ್ತು ಗೊತ್ತಾ?? ಮದುವೆಯ ಸುಂದರ ಕ್ಷಣಗಳನ್ನು ನೋಡಿ.

1

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಇದ್ದುಕೊಂಡು ನಾಯಕನಟರಾದವರು ಹಲವಾರು ಮಂದಿ ಇದ್ದಾರೆ ಆದರೆ ಇಂದಿಗೂ ಕೂಡ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿದವರು ಕೆಲವು ಮಂದಿ ಮಾತ್ರ ಅವರಲ್ಲಿ ಒಬ್ಬರು ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇನೆ. ಹೌದು ಸ್ನೇಹಿತರೆ ನಾವು ಮಾತನಾಡಲು ಬರುತ್ತಿರುವುದು ಖ್ಯಾತ ನಟ ಮಂಡ್ಯ ರಮೇಶ್ ಅವರ ಕುರಿತಂತೆ. ಮಂಡ್ಯ ರಮೇಶ್ ರವರು ಅಂದಿನ ಕಾಲದಲ್ಲಿ ಕೇವಲ ಬಹುಬೇಡಿಕೆಯ ಹಾಸ್ಯನಟನಾಗಿ ಮಾತ್ರವಲ್ಲದೆ ಹಾಸ್ಯಪ್ರಧಾನ ಚಿತ್ರಗಳಿಗೆ ನಾಯಕನಟನಾಗಿ ಕೂಡ ಜನಪ್ರಿಯತೆಯನ್ನು ಹೊಂದಿದವರು.

ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 350 ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಅನುಭವವನ್ನು ಹೊಂದಿದ್ದಾರೆ ನಮ್ಮ ಮಂಡ್ಯ ರಮೇಶ್ ರವರು. ಮಂಡ್ಯ ರಮೇಶ್ ರವರು ಮೊದಲ ಬಾರಿಗೆ ಕಾಣಿಸಿಕೊಳ್ಳುವುದು 1995 ರಲ್ಲಿ ಬಿಡುಗಡೆಯಾದ ಅಂತಹ ಜನುಮದ ಜೋಡಿ ಚಿತ್ರದ ಮೂಲಕ. ಇನ್ನು ಮಂಡ್ಯ ರಮೇಶ್ ರವರು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಾದಂತಹ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಶಿವಣ್ಣ, ದುನಿಯಾ ವಿಜಿ ಹೀಗೆ ಬಹುತೇಕ ಎಲ್ಲ ನಟರೊಂದಿಗೆ ಕೂಡ ನಟಿಸಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿಕೊಂಡಿದ್ದಾರೆ. ಇನ್ನು ಈಗ ಮಂಡ್ಯ ರಮೇಶ್ ರವರಿಗೆ 57 ವರ್ಷ ವಯಸ್ಸು. 2002 ರಲ್ಲಿ ನಟನ ಎನ್ನುವ ನಟನೆಯ ಕುರಿತಂತೆ ಶಿಕ್ಷಣವನ್ನು ಕಲಿಸುವ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.

ಇನ್ನು ಮಂಡ್ಯ ರಮೇಶ್ ಅವರ ವೈಯಕ್ತಿಕ ಜೀವನದ ಬಗ್ಗೆ ಬರುವುದಾದರೆ ಇವರು ಸರೋಜಾ ಹೆಗಡೆ ಎಂಬುವರನ್ನು ಮದುವೆಯಾಗಿದ್ದಾರೆ. ಇನ್ನು ಮಂಡ್ಯ ರಮೇಶ್ ರವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡುಮಗ ಇದ್ದಾರೆ. ಮಗಳು ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ. ಮಗನ ಮದುವೆಯ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ. ಮದುವೆಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಾದ ಅಂತಹ ಸುಧಾರಾಣಿ ಧ್ರುವಸರ್ಜಾ ಯಶ್ ಡಿ ಬಾಸ್ ಅವಿನಾಶ್ ಹಲವಾರು ಮಂದಿ ಆಗಮಿಸಿ ಆಶೀರ್ವದಿಸಿದ್ದರು. ಇನ್ನು ಮದುವೆಯ ಫೋಟೋಗಳನ್ನು ನೀವು ಈ ಕೆಳಗಿನ್ಡ್ ವಿಡಿಯೋ ದಲ್ಲಿ ನೋಡಬಹುದಾಗಿದೆ.

Leave A Reply

Your email address will not be published.