Neer Dose Karnataka
Take a fresh look at your lifestyle.

ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳೋ ಉಪೇಂದ್ರ ಮನೆಯಲ್ಲಿ ಹೇಗಿರ್ತಾರಂತೆ ಗೊತ್ತ; ಇಲ್ಲಿದೆ ರಿಯಲ್ ಹೀರೋನ ರಿಯಲ್ ಸ್ಟೋರಿ

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಉಪ್ಪಿ ದಾದಾ, ಅವರ ಚಿಂತನೆಯಿಂದ ಹೊಸ ಆಲೋಚನೆಗಳಿಂದ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಹೆಸರು ಮಾಡಿರುವ ಉಪೇಂದ್ರ ಅವರ ನಿರ್ದೇಶನ ತುಂಬಾನೇ ವಿಭಿನ್ನ. ರಿಯಾಲಿಟಿಗೆ ಹತ್ತಿರವಾದ ಸಾಕಷ್ಟು ವಿಷಯಗಳನ್ನು ತಮ್ಮ ಚಿತ್ರದ ಮೂಲಕ ಸಾದರ ಪಡಿಸುತ್ತಾರೆ. ಇನ್ನು ಹತ್ತು ವರ್ಷ ಹಳೆಯದಾದ ಅವರ ನಿರ್ದೇಶನದ ಚಿತ್ರ ಇಂದಿನ ದಿನಕ್ಕೂ ಅನ್ವಯವಾಗುವಂತ ಸಂದೇಶವನ್ನು ಹೊಂದಿರುವುದೇ ವಿಶೇಷ.

ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಕನ್ನಡಿಗರ ಅಚ್ಚುಮೆಚ್ಚಿನ ನಟಿ, ಬೇರೆ ರಾಜ್ಯದಿಂದಲೇ ಬಂದು ಕನ್ನಡವನ್ನು ಕಲಿತು, ಕನ್ನಡಿಗನನ್ನು ಮದುವೆಯಾಗಿ ಕನ್ನಡಿಗಳೇ ಆಗಿಹೋದ ಪ್ರಿಯಾಂಕಾ ನಿಜಕ್ಕೂ ಗ್ರೇಟ್. ತಾಯಿ ನೆಲವನ್ನು ಬಿಟ್ಟು ಬಂದು ಭಾಷೆ, ಸಂಸ್ಕೃತಿ ಸಂಪ್ರದಾಯ ಎಲ್ಲವೂ ಬೇರೆಯಾದ ಒಂದು ಸ್ಥಳದಲ್ಲಿ ಜೀವನ ಮಾಡಬೇಕು ಎಂದರೆ ಅಷ್ಟು ಸುಲಭದ ಮಾತಲ್ಲ. ಅದು ಎಲ್ಲರಿಂದಲೂ ಸಾಧ್ಯವಾಗುವುದೂ ಇಲ್ಲ. ಕನ್ನಡ ಚಿತ್ರಗಳಲ್ಲಿ ನಟಿಸಲು ಬಂದ ಪ್ರಿಯಾಂಕಾ ಉಪೇಂದ್ರ ಅವರನ್ನು ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದಾರೆ.

ಇನ್ನು ಹಲವು ಚಿತ್ರಗಳಲ್ಲಿ ನಟಿಸಿರುವ ಪ್ರಿಯಾಂಕಾ ಒಬ್ಬ ಚಿರಪರಿಚಿತ ಸೆಲಿಬ್ರೆಟಿ. ಹಾಗಾಗಿ ಕನ್ನಡದಲ್ಲಿ ಪ್ರಸಾರವಾಗುವ ಹಲವಾರು ರಿಯಾಲಿಟಿ ಶೋಗಳಲ್ಲಿ ಪ್ರಿಯಾಂಕಾ ಅತಿಥಿಯಾಗಿ ಬರುವುದು ಸಾಮಾನ್ಯ. ಹಾಗೆಯೇ ಈ ವಾರಾಂತ್ಯದಲ್ಲಿ ಪ್ರಸಾರವಾಗುವ ರಾಜಾರಾಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಪ್ರಿಯಾಂಕಾ. ಪ್ರಿಯಾಂಕಾ ಅವರೊಂದಿಗಿನ ತಮಾಷೆಯ ತುಣುಕುಗಳ ಪ್ರೋಮೋವನ್ನು ಕಲರ್ಸ್ ಹಂಚಿಕೊಂಡಿದೆ. ಇದರಲ್ಲಿ ನಿರೂಪಕಿ ಅನುಪಮಾ ಮನೆಯಲ್ಲಿ ಯಾರು ಡೈರೆಕ್ಟರ್ ಎನ್ನುವ ಪ್ರಶ್ನೆಗೆ ನಮಲ್ಲಿ ಡೈರೆಕ್ಟರ್ ಯಾರೂ ಇಲ್ಲ, ನಾವಿಬ್ಬರೂ ಕೋ ಪ್ರೊಡ್ಯೂಸರ್ಸ್. ಹಾಗಾಗಿ ನಮ್ಮ ಪಾತ್ರಗಳು ಬದಲಾಗುತ್ತಾ ಇರುತ್ತೆ ಎಂದಿದ್ದಾರೆ.

ಇನ್ನು ಉಪೇಂದ್ರ ಅವರು ಸಿನಿಮಾದಲ್ಲಿಯ ಹಾಗೆ ಮನೆಯಲ್ಲೂ ರೊಮ್ಯಾಂಟಿಕ್ ಆಗಿ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ’ಈ ಪ್ರೀತಿ ಪ್ರೇಮ ಎನ್ನಾ ಪುಸ್ತಕದ ಬದನೆಕಾಯಿ ಎಂದು ಅವರೇ ಹೇಳಿದ್ದಾರಲ್ಲ, ಇನ್ನು ಮನೆಯಲ್ಲಿ ಹೇಗಿರಬಹುದು ನೀವೇ ಹೇಳೆ’ ಎಂದು ತಮಾಷೆ ಮಾಡಿದ್ದಾರೆ. ಜೊತೆಗೆ ’ಉಪೇಂದ್ರ ಅವರು ನಿಮ್ಮನ್ನು ಹೇಗೆ ಮದುವೆಯಾದರು, ಏನು ಮೋಡಿ ಮಾಡಿದ್ರಿ, ಅವರು ಮದುವೆನೇ ಆಗಲ್ಲ ಅಂದುಕೊಂಡಿದ್ದೆ ನಾನು’ ಎಂದು ಯಶ್ ಕೇಳುವ ಪ್ರಶ್ನೆಯನ್ನೂ ಕೂಡ ಪ್ರಿಯಾಂಕಾ ಇಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಅವರೊಂದಿಗಿನ ಇನ್ನಷ್ಟು ಮಾತುಕತೆಗಳನ್ನು ಕೇಳಲು ರಾಜಾರಾಣಿಯ ವಾರಾಂತ್ಯದ ಎಪಿಸೋಡ್ ನ್ನು ತಪ್ಪದೇ ನೋಡಿ.

Comments are closed.