Neer Dose Karnataka
Take a fresh look at your lifestyle.

ಬ್ರಹ್ಮಚಾರಿ ದತ್ತಣ್ಣ ಮದುವೆಯಾಗದೇ ಉಳಿದಿದ್ದು ಯಾಕೆ ಗೊತ್ತಾ?? ದತ್ತಣ್ಣ ಅವರ ಹಿಸ್ಟರಿ ಕೇಳಿದರೆ ನಿಜಕ್ಕೂ ನೀವು ಬೆರಗಾಗುತ್ತೀರಿ

4

ನಮಸ್ಕಾರ ಸ್ನೇಹಿತರೇ, ಬಿಳಿ ಕೂದಲಿನ, ಮಗುವಿನಂಥ ನಗುವಿರುವ ವ್ಯಕ್ತಿ ಎಂದರೆ ಅದು ಕನ್ನಡ ಚಿತ್ರರಂಗದ ಅತ್ಯದ್ಭುತ ನಟ ದತ್ತಣ್ಣ. ವಾಯುದಳದಲ್ಲಿ ಕಮಾಂಡರ್ ಆಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ದತ್ತಣ್ಣ, ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ತುಸು ತಡವಾಗಿಯೆ. ಆದರೆ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾದಿದವರ ಸಾಲಿಗೆ ಸೇರುತ್ತಾರೆ ದತ್ತಣ್ಣ.

ದತ್ತಣ್ಣ ಮೂಲತಃ ಚಿತ್ರದುರ್ಗದವರು. 1942, ಏಪ್ರಿಲ್ 20 ರಂದು ದತ್ತಣ್ಣ ಎಂಬ ಮಹಾ ಪ್ರತಿಭೆಯ ಜನನವಾಗಿದ್ದು. ಹರಿಹರ ಗುಂಡುರಾವ್ ಹಾಗೂ ವೆಂಕಮ್ಮ ಅವರ ಸುಪುತ್ರ ದತ್ತಣ್ಣ. ವಿದ್ಯಾವಂತ ಹಾಗೂ ಸಂಸ್ಕಾರಯುತ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ದತ್ತಾತ್ರೇಯ ಕಲಿಯುವುದರಲ್ಲಿ ತುಂಬಾನೇ ಮುಂದಿದ್ದರು. ಇಂಜನಿಯರಿಂಗ್ ನ್ನು ಬೆಂಗಳೂರಿನಲ್ಲಿ ಮುಗಿಸಿದ ಅವರು ಸೈನ್ಯಕ್ಕೆ ಸೇರಿದ್ದು ಒಂದು ರೋಚಕ ಕಥೆ.

1962ರಲ್ಲಿ ಭಾರತ ಹಾಗೂ ಚೀನಾ ನಡುವೆ ಯುದ್ಧ ಏರ್ಪಟ್ಟಾಗ ಭಾರತೀಯ ಸೇನೆಯನ್ನು ಬಲಪಡಿಸಲು ಅಂತಿಮ ಪದವಿಯಲ್ಲಿದ್ದ ವಿದ್ಯಾರ್ಥಿಗಳನ್ನು ಸೇನೆಗೆ ಸೇರಲು ಪ್ರೋತ್ಸಾಹಿಸಿದ್ದರು ಅಂದಿನ ಪ್ರಧಾನಿ ನೆಹರು ಅವರು. ಈ ಸಮಯದಲ್ಲಿ ದತ್ತಣ್ಣ ಕೂಡ ಆಯ್ಕೆಯಾಗುತ್ತಾರೆ. ವಾಯುಸೇನೆಯ ತಾಂತ್ರಿಕವಿಭಾಗದಲ್ಲಿ ಕಾರ್ಯನಿರ್ವಹಿಸಲು ಅಂದಿನ ರಾಷ್ಟ್ರಪತಿಯಾಗಿದ್ದ ವಿ.ವಿ ಗಿರಿಯವರಿಂದಲೇ ಅರ್ಹತಾ ಪತ್ರ ಪಡೆದರು. ನಂತರ ಬೆಂಗಳೂರಿನ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ತರಬೇತಿ ಪಡೆದು ಬೆಂಗಳೂರಿನ ಐ ಎ ಎಸ್ ಈ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಭಾರತೀಯ ಭೂದಳದಲ್ಲಿ 20 ವರ್ಷ ಸೇವೆ ಸಲ್ಲಿಸಿ ವಿಂಗ್ ಕಮಾಂಡರ್ ಆಗಿ ನಿರ್ವತ್ತಿ ಹೊಂದಿದ್ರು.

ಇನ್ನು ದತ್ತಣ್ಣ ಕಲಾರಂಗಕ್ಕೆ ಪ್ರವೇಶಿಸಿದ್ದೂ ಕೂಡ ಒಂದು ಸೋಜಿಗದ ಸಂಗತಿಯೆ. ಏಕೆಂದರೆ ಅವರು ನಿರ್ವಹಿಸುತ್ತಿದ್ದ ಕೆಲಸಕ್ಕೂ ನಟನೆಗೂ ಯಾವ ಸಂಬಂಧವೂ ಕೂಡ ಇರಲಿಲ್ಲ. 1982ರಲ್ಲಿ ದೆಹಲಿಯ ಹೆಚ್ ಎ ಎಲ್ ನಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ನಟನೆಗೆ ಮೊದಲುಗೊಂಡರು. ದೆಹಲಿಯಲ್ಲಿ ಬಿ ವಿ ಕಾರಂತ್ ಅವರ ನಹಿ ನಹಿ ರಕ್ಷತಿ ಎಂಬ ನಾಟಕದಲ್ಲಿ ಸಣ್ಣ ಪಾತ್ರ ನಿರ್ವಹಿಸುವುದಕ್ಕೆ ಅವಕಾಶ ಸಿಕ್ತು. ತಾವು ಮೆಟ್ರಿಕ್ ಅಧ್ಯಯನ ಮಾಡುವಾಗಲೇ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದ ದತ್ತಣ್ಣ ಇಲ್ಲಿಯೂ ಉತ್ತಮವಾಗಿ ಅಭಿನಯಿಸಿದ್ರು.

ನಂತರ ಬಿಜ್ಜಳನ ಪಾತ್ರವನ್ನು ಮಾಡಿ ನಟನೆಯಲ್ಲಿ ಗುರುತಿಸಿಕೊಂಡ್ರು. ಇದಾದ ಬಳಿಕ ಕೆಲವು ಕಿರು ಚಿತ್ರಗಳಲಿ ನಟಿಸಿದರು ದತ್ತಣ್ಣ. ನಂತರ 1988ಅಲ್ಲಿ ಟಿ ಎಸ್ ನಾಗಾಭರಣ ನಿರ್ದೇಶನದ ’ಆಸ್ಪೋಟ’ ಚಿತ್ರದಲ್ಲಿ ನಟಿಸಿದ್ದು ದತ್ತಣ್ಣ ಅವರ ನಿಜವಾದ ನಟನಾ ವೃತ್ತಿ ಆರಂಭ ಎನ್ನಬಹುದು. ಇದಕ್ಕೆ ರಾಜ್ಯ ಪ್ರಶಸ್ತಿ ಪಡೆದ್ರು ದತ್ತಣ್ಣ. ನಂತರ ದತ್ತಣ್ಣ ಸಾಕಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ಹೋದ್ರು. ರಾಷ್ಟ್ರ ಪ್ರಶಸ್ತಿ, ಜ್ಯೂರಿ ಪ್ರಶಸ್ತಿ ಮೊದಲಾದ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾದರು ದತ್ತಣ್ಣ.

2012ರಲ್ಲಿ ತೆರೆಕಂಡ ’ಭಾರತ್ ಸ್ಟೋರ್’ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಪಡೆದ್ರು. ೨೦೧೩ರಲ್ಲಿ ಫಿಜಿ ಅವಾರ್ಡ್ ಪಡೆದು ಅತ್ಯುತ್ತಮ ಕಲಾವಿದ ಪ್ರಶಸ್ತಿ ಗಳಿಸಿದ ಮೊದಲ ಕನ್ನಡಿಗ ಎನಿಸಿಕೊಂಡ್ರು. ಇತ್ತೀಚಿಗೆ ತೆರೆಕಂಡ ಹಿಂದಿ ಭಾಷೆಯ ಮಂಗಳಯಾನ್ ಚಿತ್ರದಲ್ಲಿ ಅಕ್ಷಯ ಕುಮಾರ್ ಹಾಗು ವಿದ್ಯಾಬಾಲನ್ ಜೊತೆ ತೆರೆ ಹಂಚಿಕೊಂಡಿದ್ದು ದತ್ತಣ್ಣ ಅವರ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇನ್ನು ದತ್ತಣ್ಣ ಮದುವೆಯಾಗದೇ ಬ್ರಹ್ಮಚಾರಿಯಾಗಿಯೇ ಯಾಕೆ ಉಳಿದ್ರು ಎಂಬ ಪ್ರಶ್ನೆಗೆ ಮದುವೆಯಾಗಲು ಸರಿಯಾದ ಕಾರಣ ಸಿಕ್ಕಿಲ್ಲ ಎನ್ನುವ ತಮಾಷೆಯ ಉತ್ತರವನ್ನು ದತ್ತಣ್ಣ ನೀಡುತ್ತಾರೆ. ಒಟ್ಟಿನಲ್ಲಿ ಇವತ್ತಿಗೂ ಕನ್ನಡ ಚಿತ್ರರಂಗಕ್ಕೆ ಬೇಕಾದ ಅದ್ಬುತ ಪೋಷಕ ನಟ ದತ್ತಣ್ಣ.

Leave A Reply

Your email address will not be published.