Neer Dose Karnataka
Take a fresh look at your lifestyle.

ಕೋಟಿಗೊಬ್ಬ 3 ನಟನೆಯ ಮೂಲಕ ಕನ್ನಡಿಗರ ಹೃದಯ ಕದ್ದಿರುವ ಮಡೋನ್ನಾ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ.

ನಮಸ್ಕಾರ ಸ್ನೇಹಿತರೇ ಈಗಂತು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಪ್ರೇಕ್ಷಕರ ಬಾಯಲ್ಲಿ ಬರುತ್ತಿರುವುದು ಒಂದೇ ಮಾತು ಕೋಟಿಗೊಬ್ಬ3 ಚಿತ್ರದ ಕುರಿತಂತೆ. ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಒಂದು ದಿನ ಲೇಟಾಗಿ ಬಿಡುಗಡೆಯಾದರೂ ಕೂಡ ರಾಜ್ಯಾದ್ಯಂತ 350 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಈಗಾಗಲೆ ಪ್ರೇಕ್ಷಕರ ಮನರಂಜಿಸಲು ಯಶಸ್ವಿಯಾಗಿದೆ. ಇನ್ನು ಕೋಟಿಗೊಬ್ಬ 3 ಚಿತ್ರದಲ್ಲಿ ಹಲವಾರು ಪಾತ್ರಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆದರಲ್ಲಿ ನಾಯಕ ನಟಿಯ ಪಾತ್ರ ಕೂಡ ಒಂದು ಹೌದು. ಮಲಯಾಳಂ ಬ್ಯೂಟಿ ಮಡೋನಾ ಸೆಬಾಸ್ಟಿಯನ್ ಕೋಟಿಗೊಬ್ಬ3 ಚಿತ್ರದಲ್ಲಿ ಪ್ರಿಯಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೋಟಿಗೊಬ್ಬ 3 ಚಿತ್ರದಲ್ಲಿ ಅವರು ಒಬ್ಬರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಮಡೋನಾ ಸೆಬಾಸ್ಟಿಯನ್ ರವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯವಾಗಿರುವುದು ಪ್ರೇಮಂ ಚಿತ್ರದ ಮೂಲಕ. ಇನ್ನು ಚಿತ್ರದಲ್ಲಿ ಇವರ ಸೌಂದರ್ಯವನ್ನು ನೋಡಿರುವ ಪ್ರೇಕ್ಷಕರೆಲ್ಲರೂ ಇವರು 20 ವರ್ಷದವರು ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಮಡೋನಾ ಸೆಬಾಸ್ಟಿಯನ್ ರವರ ನಿಜವಾದ ವಯಸ್ಸಿನ ಕುರಿತಂತೆ ನಾವು ನಿಮಗೆ ಇಂದು ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಎಲ್ಲರೂ ಅಂದುಕೊಂಡಿರುವಂತೆ ಮಡೋನಾ ಸೆಬಾಸ್ಟಿಯನ್ ರವರಿಗೆ 20ವರ್ಷ ವಯಸ್ಸಲ್ಲ ಬದಲಾಗಿ 29 ವರ್ಷ ವಯಸ್ಸು. ಕೋಟಿಗೊಬ್ಬ 3 ಚಿತ್ರದಲ್ಲಿ ಸಕ್ಕತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಮಡೋನಾ ಸೆಬಾಸ್ಟಿಯನ್ ಮೊದಲ ಚಿತ್ರದಲ್ಲೇ ಕನ್ನಡ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಮಡೋನಾ ಸೆಬಾಸ್ಟಿಯನ್ ರವರು ಕೋಟಿಗೊಬ್ಬ3 ಚಿತ್ರದಲ್ಲಿ ನಿರ್ವಹಿಸಿರುವ ಪಾತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.