Neer Dose Karnataka
Take a fresh look at your lifestyle.

ಕೊನೆಗೂ ಸಿಕ್ಕವು ಮಾಹಿತಿ, ಕೋಟಿಗೊಬ್ಬ3 ಹಾಗೂ ಸಲಗ ಓಪನಿಂಗ್ ಡೇ ಹೈಯೆಸ್ಟ್ ಕಲೆಕ್ಷನ್ ಮಾಡಿದ್ದು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಂತ ನೀರಿನಂತಿದ್ದ ಕನ್ನಡ ಚಿತ್ರರಂಗಕ್ಕೆ ಸಲಗ ಹಾಗೂ ಕೋಟಿಗೊಬ್ಬ-3 ಚಿತ್ರಗಳು ಒಳ್ಳೆಯ ಮಟ್ಟದ ಚಲನೆಯನ್ನು ನೀಡಿದೆ ಎಂದು ಹೇಳಬಹುದಾಗಿದೆ. ನಿನ್ನೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇನ್ನು ಈ ಮಾಸ್ ಕಮರ್ಷಿಯಲ್ ಚಿತ್ರಕ್ಕೆ ಪ್ರೇಕ್ಷಕರು ಸೈ ಎಂದಿದ್ದರು. ಇನ್ನು ದುನಿಯಾ ವಿಜಯ್ ಅವರ ನಿರ್ದೇಶನಕ್ಕೂ ಕೂಡ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದರು. ಕೆಪಿ ಶ್ರೀಕಾಂತ್ ರವರು ನಿರ್ಮಾಪಕನಾಗಿ ಎರಡನೇ ಚಿತ್ರದಲ್ಲಿ ಕೂಡ ವಿಜಯವನ್ನು ಸಾಧಿಸಿದ್ದರು.

ಇನ್ನು ಧನಂಜಯ್ ಹಾಗೂ ಸಂಜನಾ ಆನಂದ ರವರ ಪರ್ಫಾರ್ಮೆನ್ಸ್ ಕೂಡ ಎಲ್ಲರ ಮನಗೆದ್ದಿತ್ತು. ಇನ್ನು ಇಂದು ವಿಜಯದಶಮಿ ಹಬ್ಬದ ಪ್ರಯುಕ್ತವಾಗಿ ಸೂರಪ್ಪ ಬಾಬು ನಿರ್ಮಾಣದ ಶಿವ ಕಾರ್ತಿಕ್ ಎಂಬ ಹೊಸ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿಬಂದಿರುವ ಕೋಟಿಗೊಬ್ಬ 3 ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಈ ಚಿತ್ರವನ್ನು ನೋಡಲು ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದರು.

ಇಂದು ಬಿಡುಗಡೆಯಾಗಿರುವ ಕೋಟಿಗೊಬ್ಬ3 ಚಿತ್ರ ರಾಜ್ಯಾದ್ಯಂತ ಅದ್ಭುತ ಓಪನಿಂಗ್ ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇನ್ನು ಸಲಗ ಹಾಗೂ ಕೋಟಿಗೊಬ್ಬ3 ಚಿತ್ರಗಳಲ್ಲಿ ಅತ್ಯಧಿಕ ಓಪನಿಂಗ್ ಪಡೆದಿರುವ ಚಿತ್ರಗಳು ಯಾವುವು ಎಂದು ಹೇಳುವುದಾದರೆ, ಸಲಗ ಚಿತ್ರ ನಿನ್ನೆ ಬಿಡುಗಡೆಯಾಗಿ ಮೊದಲ ದಿನವೇ ಎಂಟರಿಂದ 10 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಇನ್ನು ಇದಕ್ಕೆ ಕೋಟಿಗೊಬ್ಬ3 ಚಿತ್ರದ ಪ್ರದರ್ಶನ ರದ್ದಾಗಿರುವುದು ಕೂಡ ಕಾರಣವಾಗಿದೆ. ಇನ್ನು ಇಂದು ಬಿಡುಗಡೆಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಬಾಕ್ಸ್ ಆಫೀಸ್ ನಲ್ಲಿ 12 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತದೆ.

Comments are closed.