Neer Dose Karnataka
Take a fresh look at your lifestyle.

ಡಿ ಬಾಸ್ ಹಾಗೂ ಕಿಚ್ಚನ ಜೊತೆಗೆ ಇದುವರೆಗೂ ಕೂಡ ರಾಧಿಕಾ ಪಂಡಿತ್ ನಟಿಸಿಲ್ಲ ಯಾಕೆ ಗೊತ್ತಾ?? ಇದರ ಹಿಂದಿರುವ ಅಸಲಿ ಕಾರಣವೇನು ಗೊತ್ತೇ??

8

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ನಟಿಯರು ಬಂದು ನಟಿಸುತ್ತಿದ್ದಾರೆ ಕೆಲವರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನು ಕೆಲವರು ಕೆಲವು ಚಿತ್ರಗಳಲ್ಲಿ ನಟಿಸಿ ಕಾಣೆಯಾಗಿದ್ದಾರೆ. ಇನ್ನು ಇತ್ತೀಚಿನ ಕೆಲ ವರ್ಷಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದು ಕೊಂಡ ನಟಿಯರಲ್ಲಿ ರಾಧಿಕಾ ಪಂಡಿತ್ ಖಂಡಿತವಾಗಿಯೂ ಅಗ್ರಸ್ಥಾನದಲ್ಲಿ ಕಾಣಸಿಗುತ್ತಾರೆ. ಮದುವೆಯಾದ ಮೇಲೆ ರಾಧಿಕಾ ಪಂಡಿತ್ ರವರು ನಟಿಸುವುದನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಇನ್ನು ರಾಧಿಕಾ ಪಂಡಿತ್ ರವರು ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಟಿಸಿದ್ದಾರೆ. ಉದಾಹರಣೆಗೆ ರಾಕಿಂಗ್ ಸ್ಟಾರ್ ಯಶ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರುನಾಡ ಚಕ್ರವರ್ತಿ ಶಿವಣ್ಣ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪ್ ಭಂಡಾರಿ ಹೀಗೆ ಬಹುತೇಕ ಎಲ್ಲಾ ನಟರೊಂದಿಗೆ ನಟಿಸಿದರು. ಆದರೆ ಕನ್ನಡ ಚಿತ್ರರಂಗದ ಇಬ್ಬರು ಸೂಪರ್ಸ್ಟಾರ್ ನಟರೊಂದಿಗೆ ಮಾತ್ರ ಇದುವರೆಗೂ ಕೂಡ ರಾಧಿಕಾ ಪಂಡಿತ್ ಅವರು ನಟಿಸಿಲ್ಲ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಒಂದು ಕಾಲದ ಕನ್ನಡ ಚಿತ್ರರಂಗದ ಕುಚಿಕು ಗಳು ಎಂದೇ ಖ್ಯಾತರಾಗಿದ್ದ ಅಂತಹ ಕಿಚ್ಚ ಹಾಗೂ ದಚ್ಚು ರವರ ಕುರಿತಂತೆ. ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜೊತೆಗೆ ಇದುವರೆಗೂ ಕೂಡ ನಟಿ ರಾಧಿಕಾ ಪಂಡಿತ್ ಅವರು ನಟನೆ ಮಾಡಿಲ್ಲ. ಇದಕ್ಕೆ ಒಮ್ಮೆ ಸಂದರ್ಶನದಲ್ಲಿ ರಾಧಿಕಾ ಪಂಡಿತ್ ಅವರು ಯಾರೊಂದಿಗೂ ಕೂಡ ನಾನು ನಟಿಸಬಲ್ಲೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದರೆ ಖಂಡಿತವಾಗಿ ಅವರಿಬ್ಬರ ಜೊತೆ ಕೂಡ ನಟಿಸುತ್ತೇನೆ ಎಂಬುದಾಗಿ ಹೇಳಿದ್ದರು. ಇನ್ನು ಅಭಿಮಾನಿಗಳು ಕೂಡ ಇದಕ್ಕಾಗಿ ಕಾಯುತ್ತಿದ್ದರು ಮುಂದಿನ ದಿನಗಳಲ್ಲಿ ಅವಕಾಶ ಒಲಿದು ಬಂದರೆ ಖಂಡಿತವಾಗಿ ಅಭಿಮಾನಿಗಳು ಸಂತೋಷ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೆ.

Leave A Reply

Your email address will not be published.