Neer Dose Karnataka
Take a fresh look at your lifestyle.

ಕನ್ನಡದ ಎಲ್ಲರ ಅಚ್ಚು ಮೆಚ್ಚಿನ ನಟ ಶಿವಣ್ಣನವರ ಮದುವೆ ಲಗ್ನಪತ್ರಿಕೆ ಹೇಗಿದೆ ಗೊತ್ತಾ?? ಏನೇನೆಲ್ಲಾ ಬರೆದಿದ್ದಾರೆ ನೋಡಿ.

4

ನಮಸ್ಕಾರ ಸ್ನೇಹಿತರೇ ಕರುನಾಡ ಚಕ್ರವರ್ತಿ ಶಿವಣ್ಣನವರು ಕನ್ನಡ ಚಿತ್ರರಂಗದಲ್ಲಿ ಮೂರು ಜನರೇಶನ್ ನಿಂದ ನಟಿಸಿಕೊಂಡು ಬರುತ್ತಿರುವವರು. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 35 ಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿದ್ದಾರೆ ಎಂದರೆ ಅವರ ಅನುಭವ ಹಾಗೂ ಚಿತ್ರರಂಗದ ಕುರಿತಂತೆ ಇರುವ ಶೃದ್ಧೆ ಹಾಗೂ ಪ್ರೀತಿ ಗೌರವವನ್ನು ನೀವೇ ಲೆಕ್ಕ ಹಾಕಿಕೊಳ್ಳಬಹುದಾಗಿದೆ.

ಹೌದು ಗೆಳೆಯರೆ ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣನವರು ಈಗಾಗಲೇ ಬರೋಬ್ಬರಿ 125ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ಚಿತ್ರದಿಂದ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿದ ಶಿವಣ್ಣನವರು ಈಗಾಗಲೇ ನಾಳೆ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಭಜರಂಗಿ 2 ಚಿತ್ರದವರೆಗೂ ಕೂಡ ಅದೇ ಎನರ್ಜಿಯಿಂದ ನಟಿಸಿಕೊಂಡು ಬಂದಿದ್ದಾರೆ. ಇದಕ್ಕಾಗಿ ಕನ್ನಡ ಚಿತ್ರರಂಗದ ಎಲ್ಲರೂ ಕೂಡ ಅವರನ್ನು ಲೀಡರ್ ಎಂದು ಕರೆಯುವುದು. ನೀನು ಇಂದು ನಾವು ಮಾತನಾಡಲು ಹೊರಟಿರುವುದು ಶಿವಣ್ಣನವರ ವೈವಾಹಿಕ ಜೀವನದ ಕುರಿತಂತೆ. ಹೌದು ಗೆಳೆಯರೇ ಶಿವಣ್ಣ ಹಾಗೂ ಗೀತಾ ರವರ ಜೋಡಿಯನ್ನು ಸ್ಯಾಂಡಲ್ವುಡ್ನಲ್ಲಿ ಶಿವ-ಪಾರ್ವತಿಯರ ಜೋಡಿ ಎಂಬುದಾಗಿ ಹೇಳುತ್ತಾರೆ.

ಇವರಿಬ್ಬರು ಮದುವೆಯಾಗಿರುವುದು 1986 ರ ಮೇ 19ರಂದು. ಇನ್ನು ನಿಮಗೆಲ್ಲ ತಿಳಿದಿರುವಂತೆ ಗೀತಾರವರು ಮಾಜಿ ಮುಖ್ಯಮಂತ್ರಿಯಾಗಿರುವ ಎಸ್ ಬಂಗಾರಪ್ಪ ನವರ ಮಗಳು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇವರಿಬ್ಬರ ಅದ್ದೂರಿ ವಿವಾಹವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಬೇರೆ ಬೇರೆ ಭಾಷೆಗಳಿಂದ ಉದಾಹರಣೆಗೆ ತಮಿಳು ಚಿತ್ರರಂಗದಿಂದ ಎಂಜಿಆರ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಬಂದು ಇಬ್ಬರಿಗೂ ಹರಸಿ ಹೋಗಿದ್ದರು. ಅಣ್ಣಾವ್ರ ಮಗನ ಮದುವೆ ಅಂದ್ರೆ ಕೇಳಬೇಕಾ ಭರ್ಜರಿಯಾಗಿಯೇ ನಡೆದಿರುತ್ತೆ. ಇತ್ತೀಚಿಗೆ ಇವರಿಬ್ಬರ ಮದುವೆಯ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.

Leave A Reply

Your email address will not be published.