Neer Dose Karnataka
Take a fresh look at your lifestyle.

ಕೊನೆ ಘಳಿಗೆಯಲ್ಲಿ ಅಪ್ಪು ಎದ್ದು ಬರಬಹುದೇನೋ ಎಂದು ಮೈ ಕೈ ಮುಟ್ಟಿ ನೋಡುತ್ತಿರುವ ಪತ್ನಿ ಅಶ್ವಿನಿ ಗಂಡನಿಗಾಗಿ ತೆಗೆದುಕೊಂಡ ನಿರ್ಧಾರ ಏನು ಗೊತ್ತೇ??

17

ನಮಸ್ಕಾರ ಸ್ನೇಹಿತರೇ ಒಳ್ಳೆಯವರಿಗೆ ಕಾಲ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಜನಸಂಖ್ಯೆ ನಗುವಿನ ಶ್ರೀಮಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ದೈವಾದೀನರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊನ್ನೆಯಷ್ಟೇ ಭಜರಂಗಿ ಚಿತ್ರದ ಕಾರ್ಯಕ್ರಮದಲ್ಲಿ ಯಶ್ ಹಾಗೂ ಶಿವಣ್ಣನವರೊಂದಿಗೆ ಪಾಲ್ಗೊಂಡಿದ್ದರು. ಅದಾದ ನಂತರ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಕೂಡ ಮಧ್ಯರಾತ್ರಿ 12 ಗಂಟೆಯವರೆಗೆ ಕಾಣಿಸಿಕೊಂಡಿದ್ದರು.

ಆದರೆ ನಿನ್ನೆ ವರ್ಕೌಟ್ ಮಾಡುತ್ತಿರಬೇಕಾದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ತೀವ್ರವಾಗಿ ಹೃದಯಾಘಾತ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಕರೆತಂದ ಕೆಲವೇ ಕ್ಷಣಗಳಲ್ಲಿ ದೈವಾದೀನರಾಗಿದ್ದಾರೆ. ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟರಲ್ಲಿ ಒಬ್ಬರಾದ ಅಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತೀವ್ರವಾದ ಹೃದಯಾಘಾತದಿಂದಾಗಿ ನಮ್ಮನ್ನೆಲ್ಲಾ ಅಗಲಿ ದೈವಾದೀನರಾಗಿದ್ದಾರೆ. ಇನ್ನು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಕಂಠೀರವ ಸ್ಟೇಡಿಯಂನಲ್ಲಿ ಇಟ್ಟಿದ್ದು ಅವರನ್ನು ನೋಡಲು ಬರುತ್ತಿರುವ ಲಕ್ಷಾಂತರ ಅಭಿಮಾನಿಗಳನ್ನು ನೋಡಿದಾಗ ಗೊತ್ತಾಗುತ್ತದೆ ಅಪ್ಪು ಅವರು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು ಎಂಬುದಾಗಿ.

ಇನ್ನು ಈ ಸಂದರ್ಭದಲ್ಲಿ ಅವರನ್ನು ಕೇವಲ ಪರದೆಯ ಮೇಲೆ ನೋಡಿರುವ ನಮಗೆ ಅಷ್ಟೊಂದು ದುಃಖವಾಗುತ್ತಿದೆ ಎಂದರೆ ಅವರೊಂದಿಗೆ ಹಲವಾರು ವರ್ಷಗಳ ಕಾಲ ಸಂಸಾರವನ್ನು ಮಾಡಿಕೊಂಡು ಬಂದ ಅವರ ಪತ್ನಿ ಅಶ್ವಿನಿ ಅವರಿಗೆ ಹೇಗಾಗಿರಬೇಡ. ಗಂಡನ ದೇಹವನ್ನು ಪದೇಪದೇ ಮುಟ್ಟಿ ಅವರಲ್ಲಿ ಇನ್ನೂ ಕೂಡ ಜೀವವಿದೆ ಎದ್ದು ಬರುತ್ತಾರೆ ಎಂಬ ನಿರೀಕ್ಷೆಯಿಂದ ಅವರು ಕಂಡಿದ್ದು ಎಲ್ಲರ ಮನಕಲುಕುವಂತಿತ್ತು. ಅಶ್ವಿನಿ ಅವರಿಗೆ ಹಾಗೂ ಅವರಿಬ್ಬರ ಹೆಣ್ಣುಮಕ್ಕಳಿಗೆ ಬಂದಿರುವ ಈ ಸ್ಥಿತಿ ಯಾವ ಶತ್ರುವಿಗೂ ಕೂಡ ಬಾರದಿರಲಿ ಎಂಬುದು ನಮ್ಮ ಹಾರೈಕೆ.

ಇನ್ನು ಪುನೀತ್ ರಾಜಕುಮಾರ್ ಅವರ ಆಸೆಯನ್ನು ಪೂರೈಸುವ ನಿರ್ಧಾರವನ್ನು ಅಶ್ವಿನಿ ಅವರು ಕೈಗೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಬೇರೆ ಕಡೆ ಮಾಡುವ ನಿಶ್ಚಯವಾಗಿತ್ತು ಆದರೆ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅಮ್ಮ ಹಾಗೂ ಅಪ್ಪನ ಪಕ್ಕದಲ್ಲಿ ಮಾಡಬೇಕೆಂದು ಪುನೀತ್ ರವರ ಆಸೆಯನ್ನು ನೆರವೇರಿಸಲು ಅಶ್ವಿನಿ ಅವರು ನಿರ್ಧರಿಸಿದ ಅದಕ್ಕಾಗಿ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿವೆ.

ಇನ್ನು ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕೂಡ ನೀವು ಯಾಕೆ ವಾರಕ್ಕೆ ಒಮ್ಮೆಯಾದರೂ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿಗಳಿಗೆ ಹೋಗುತ್ತಿರ ಎನ್ನುವುದಾಗಿ ಹೇಳಿದಾಗ, ಅದೇನು ಗೊತ್ತಿಲ್ಲ ಸರ್ ಒಂಥರಾ ನೆಮ್ಮದಿ ಸಿಗುತ್ತದೆ ನಾನು ಅವರ ಬಳಿ ಏನನ್ನೂ ಕೇಳುವುದಿಲ್ಲ ಹೇಳುವುದು ಇಲ್ಲ ಆದರೂ ಕೂಡ ಅವರ ಹತ್ತಿರ ಬಂದು ಸಮಯವನ್ನು ಕಳೆಯುವುದಕ್ಕೆ ಮನಸ್ಸಿಗೆ ಒಂಥರಾ ನೆಮ್ಮದಿ ಎನ್ನುವುದಾಗಿ ಹೇಳಿದ್ದರು. ಇನ್ನು ಇಂದು ಸಾರ್ವಜನಿಕ ವೀಕ್ಷಣೆಗಾಗಿ ಇಟ್ಟಿದ್ದು ನಾಳೆ ಮಧ್ಯಾಹ್ನದ ಹೊತ್ತಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸುವ ತಯಾರಿ ನಡೆಯುತ್ತಿದೆ.

ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಅಂತಿಮ ನಮನವನ್ನು ಸಲ್ಲಿಸಲು ಸಾಗರದ ಮಾದರಿಯಲ್ಲಿ ಕಂಠೀರವ ಸ್ಟೇಡಿಯಂ ನತ್ತ ಬರುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೇವಲ ಕನ್ನಡ ಚಿತ್ರರಂಗದ ನಟನಾಗಿ ಮಾತ್ರವಲ್ಲದೆ ಒಬ್ಬ ಮಾನವತಾವಾದಿಯಾಗಿ ಕೂಡ ಹಲವಾರು ಸಮಾಜ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಈಗಾಗಲೇ ತಮ್ಮನನ್ನು ಕಳೆದುಕೊಂಡಿರುವ ದುಃಖದಲ್ಲಿ ಶಿವಣ್ಣ ರಾಘಣ್ಣ ಕುಟುಂಬಸ್ಥರು ದಿಕ್ಕು ತೋಚದಂತೆ ಮಮ್ಮಲ ಮರುಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಸಂಪೂರ್ಣ ಸೂತಕದ ಛಾಯೆಯಲಿ ಆವರಿಸಿದೆ.

Leave A Reply

Your email address will not be published.