Neer Dose Karnataka
Take a fresh look at your lifestyle.

ಅಪ್ಪು ಕುರಿತು ಮತ್ತೊಂದು ಯಾರಿಗೂ ತಿಳಿಯದ ವಿಷಯ ತಿಳಿಸಿದ ಕಿಚ್ಚ ಸುದೀಪ್, ಕೇಳಿ ಮತ್ತೊಮ್ಮೆ ಭಾವನಾತ್ಮಕವಾಗಿ ಕಣ್ಣೀರು ಹಾಕಿದ ಫ್ಯಾನ್ಸ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಂಠೀರವನ ಕಿರಿಮಗ ಇಂದು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ತಮ್ಮ ಗೆಳೆಯನನ್ನು ಇಂದು ಕೊನೆಯ ಬಾರಿ ನೋಡಿ ಅಂತಿಮ ನಮನ ಸಲ್ಲಿಸಿದ್ದಾರೆ. ಪುನೀತ್ ರವರ ಕುರಿತಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಚ್ಚ ಸುದೀಪ್ ರವರು ಭಾವನಾತ್ಮಕವಾಗಿ ಪತ್ರವನ್ನು ಬರೆದಿದ್ದಾರೆ. ಅದನ್ನು ನಿಮ್ಮೆದುರು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇವೆ. ” ನಾನು ಅವರನ್ನು ಮೊದಲ ಬಾರಿ ನೋಡಿದ್ದು ಭಾಗ್ಯವಂತ ಚಿತ್ರದ ವಿಜಯಯಾತ್ರೆಗೆ ಶಿವಮೊಗ್ಗಕ್ಕೆ ನಮ್ಮ ಮನೆಗೆ ಊಟಕ್ಕೆ ಬಂದಾಗ.

ಅದಾಗಲೇ ಅವರು ಸ್ಟಾರ್ ಆಗಿದ್ದರು ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಮಗ. ಇನ್ನು ಅವರ ಹಿಂದೆ ಊಟ ಮಾಡಿಸಲು ಒಬ್ಬರು ಹೆಂಗಸು ಓಡಾಡುತ್ತಿದ್ದರು ಕೂಡ ಅವರಿಗೆ ಕಣ್ಣಿದ್ದು ನನ್ನ ಆಟಿಕೆಯ ಮೇಲೆ. ಅವರನ್ನು ನೋಡಲು ನಮ್ಮ ಮನೆ ಸುತ್ತ ಹಲವಾರು ಮಕ್ಕಳು ಅದಾಗಲೇ ಬಂದಿದ್ದರು ಯಾಕೆಂದರೆ ಅದಾಗಲೇ ಅವರೊಬ್ಬ ತಾರೆ ಆಗಿದ್ದರು ಎಲ್ಲರಿಗಿಂತ ಹೆಚ್ಚಾಗಿ ವರನಟನ ಮಗ ಬೇರೆ. ಇದಾದ ನಂತರ ನಾವು ಹಲವಾರು ಬೇಟಿಯಾಗಿದ್ದು ಉಂಟು ಕನ್ನಡ ಚಿತ್ರರಂಗದಲ್ಲಿ ಸ್ನೇಹಿತರಾಗಿ ಕೆಲಸ ಮಾಡಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ಸ್ನೇಹಿತ ಮಾತ್ರವಲ್ಲದೆ ಅತ್ಯುತ್ತಮ ಪ್ರತಿಸ್ಪರ್ಧಿ ಕೂಡ ಹೌದು. ಪುನೀತ್ ರಾಜಕುಮಾರ್ ಅವರು ಒಬ್ಬ ಡ್ಯಾನ್ಸರ್ ಉತ್ತಮ ಫೈಟರ್ ನಟ ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಅತ್ಯುತ್ತಮ ವ್ಯಕ್ತಿ. ಅವರೊಂದಿಗಿನ ಸ್ಪರ್ಧೆಯನ್ನು ನಾನು ಸದಾ ಕಾಲ ಸಂತೋಷಪಟ್ಟಿದ್ದೇನೆ. ನನ್ನನ್ನು ಉತ್ತಮಪಡಿಸಿಕೊಳ್ಳಲು ಅವರು ಸ್ಪರ್ಧೆ ಕೂಡ ನನ್ನನ್ನು ಹುರಿದುಂಬಿಸಿತು.

ಅವರು ನಟಿಸಿದ ಕಾಲದಲ್ಲಿ ನಾನು ಕೂಡ ನಟನಾಗಿದ್ದೆ ಎನ್ನುವುದು ನನಗೆ ಹೆಮ್ಮೆ. ಇಂದು ಅವರಿಲ್ಲದ ಚಿತ್ರರಂಗ ಬರಿದಾಗಿದೆ ಎಂದಿದ್ದಾರೆ. ಸುದ್ದಿ ಕೇಳಿದರೆ ನಾನು ಅವರ ಮನೆಗೆ ಪಾರ್ಥಿವ ಶರೀರವನ್ನು ನೋಡಲು ಹೊರಟೆಯಾ ಆದರೆ ಅಲ್ಲಿಗೆ ಹತ್ತಿರ ಹೋಗುತ್ತಾ ನನ್ನ ಮನಸ್ಸು ಭಾರವಾಗಿತ್ತು. ಅಪ್ಪು ಅನ್ನು ಚಿರ ನಿದ್ರೆಯಲ್ಲಿ ನೋಡಿ ಎದೆಯ ಮೇಲೆ ಬಂಡೆಯನ್ನು ಇಟ್ಟಂತಾಗಿದೆ. ನನ್ನ ಸ್ನೇಹಿತನನ್ನು ಹೆಚ್ಚು ಕಾಲ ಆ ಸ್ಥಿತಿಯಲ್ಲಿ ನನಗೆ ನೋಡಲಾಗಲಿಲ್ಲ. ಆ ಸಮಯದಲ್ಲಿ ಶಿವಣ್ಣ ಅವನಿನ್ನು ನನಗಿಂತ 13 ವರ್ಷ ಚಿಕ್ಕವನು ನನ್ನ ಮಗನಂತೆ ಆತನನ್ನು ಇದೆ ಕೈಯಲ್ಲಿ ಬೆಳೆಸಿದ್ದೇನೆ. ಇನ್ನು ಈ ಕಣ್ಣಿನಿಂದ ಏನೇನು ನೋಡಬೇಕು ಎಂಬುದಾಗಿ ದುಃಖತಪ್ತರಾಗಿ ಹೇಳಿದ್ದು ಇಂದಿಗೂ ಕೂಡ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ. ಅಪ್ಪು ವಿನಿಂದ ಖಾಲಿಯಾಗಿರುವ ಸ್ಥಾನವನ್ನು ಯಾರು ಕೂಡ ಭರಿಸಲು ಸಾಧ್ಯವಿಲ್ಲ. ಆಸ್ಥಾನ ಕೇವಲ ಅಪ್ಪುಗೆ ಮಾತ್ರ. ನಮ್ಮ ಪ್ರೀತಿಯ ಅಪ್ಪುಗೆ ಮಾತ್ರ ಎಂಬುದಾಗಿ ಭಾವನಾತ್ಮಕವಾದ ಪತ್ರವನ್ನು ತಮ್ಮ ಸ್ನೇಹಿತನಾಗಿ ಬರೆದಿದ್ದಾರೆ ಕಿಚ್ಚ.

Comments are closed.