Neer Dose Karnataka
Take a fresh look at your lifestyle.

ಸ್ವರ್ಗದಿಂದಲೇ ಅಪ್ಪು ಎಷ್ಟು ಸಂತೋಷ ಪಡುತ್ತಿದ್ದರೋ, ಅಭಿಮಾನಿಗಳು ಪುನೀತ್ ರಾವರಿಗಾಗಿ ಮಾಡಿರುವ ಕೆಲಸ ನೋಡಿ. ಇದಪ್ಪ ಒಬ್ಬ ಮನುಷ್ಯನ ನಿಜವಾದ ಸಾಧನೆ.

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಅತಿ ಮುಖ್ಯ ಘಟ್ಟ ಎಂದರೇ ಅದು ಸಾರ್ಥಕತೆ. ಸಾರ್ಥಕ ಜೀವನ ಎಂದರೇ ಅದು ಜೀವ ಇದ್ದಾಗಲೂ ಹಾಗೂ ಜೀವನ ಹೋದಾಗಲೂ ನಮ್ಮತನವನ್ನ ಉಳಿಸಿ ಹೋಗಬೇಕು. ಒಳಿತು ಮಾಡು ಮನುಷಾ..ನೀ ಇರೋದು ಮೂರು ದಿವಸ ಎಂಬ ಕವಿವಾಣಿಯಂತೆ ಜೀವ ಹೋದ ಮೇಲೆ ಈ ದೇಹ, ಮಣ್ಣಿಗೆ ಅಥವಾ ಸುಡುವ ಬದಲು ನಮ್ಮಲ್ಲಿನ ಬೆಲೆಬಾಳುವ ಅಂಗಗಳು ಬದುಕಿರುವ ಇನ್ನೊಬ್ಬರಿಗೆ ಆಸರೆಯಾಗುವಂತೆ ಮಾಡುತ್ತದೆ. ಅದೇ ರೀತಿ ಅಂಗಾಂಗ ದಾನ ಅಥವಾ ನೇತ್ರದಾನದಂತಹ ಕಲ್ಪನೆಗಳು ಯುವ ಜನರಲ್ಲಿ ಜಾಗೃತಿ ಮೂಡಿಸುತ್ತಾ ಆಗಾಗ ಇಂತಹ ಅಭಿಯಾನಗಳು ನಡೆಯುತ್ತಿರುತ್ತವೆ.

ಇನ್ನು ಇತ್ತಿಚೆಗಷ್ಟೇ ನಮ್ಮನಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕಾಲಾನಂತರ ತಮ್ಮ ಕಣ್ಣುಗಳನ್ನ ದಾನ ಮಾಡಿದ್ದರು. ಇನ್ನು ನಮ್ಮ ಕರುನಾಡಿನ ಅಪ್ಪು ಸಹ ಕಣ್ಣನ್ನು ದಾನ ಮಾಡಿದರು. ಸೋಜಿಗ ಎಂಬಂತೆ ಅಪ್ಪುರವರ ಎರಡು ಕಣ್ಣುಗಳು ನಾಲ್ವರಿಗೆ ದೃಷ್ಠಿ ಭಾಗ್ಯ ನೀಡಿದ್ದವು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು. ಕೇವಲ ಇವರಿಬ್ಬರಲ್ಲದೇ ಕನ್ನಡದ ಆಸ್ತಿ, ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರು ಸಹ ನೇತ್ರದಾನ ಮಾಡಿದ್ದರು. ಸದ್ಯ ಈ ವಿಷಯ ಅಭಿಮಾನಿಗಳಿಗೆ ಮಾದರಿಯಾಗಿದ್ದು, ಸಾಗರೋಪಾದಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ತಮ್ಮ ಕಾಲಾನಂತರ ನೇತ್ರದಾನ ಮಾಡಲು, ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾಕ್ಟರ್ ಸುಜಾತಾ, ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಸಂಚಾರಿ ವಿಜಯ್ ಹಾಗೂ ಪುನೀತ್ ರಾಜಕುಮಾರ್ ಕಾಲಾನಂತರ ತೀವ್ರತರದಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರ ಜೊತೆಗೆ ನಾವೂ ಕೂಡಾ ದೇಹವನ್ನು ಹೂಳುವ ಅಥವಾ ಸುಡುವ ಬದಲು ನೇತ್ರದಾನದ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು. ಈ ಕಾರಣಕ್ಕಾಗಿಯೇ ಶೇಕಡಾ 20 ರಿಂದ 30 ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಕ್ಕೆ ಅಂಗವಾಗಿ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ರವರ 50 ಕ್ಕೂ ಹೆಚ್ಚು ಅಭಿಮಾನಿಗಳು ನೇತ್ರದಾನ ಮಾಡುವ ವಾಗ್ದಾನ ಮಾಡಿ, ನೋಂದಣಿ ಮಾಡಿಕೊಂಡರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.