Neer Dose Karnataka
Take a fresh look at your lifestyle.

ಪುನೀತ್ ರಾಜಕುಮಾರ್ ರವರ ಪೋಸ್ಟರ್ ಒರೆಸಿ ಮುತ್ತಿಟ್ಟ ಅಜ್ಜಿ ಯಾರು ಗೊತ್ತಾ?? ಇವರು ಯಾರೆಂದು ತಿಳಿದರೆ ನಿಜಕ್ಕೂ ದಂಗಾಗ್ತೀರಾ.

4

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕೇವಲ ಚಿತ್ರರಂಗ ಮಾತ್ರವಲ್ಲದೆ ಇಡೀ ಕರ್ನಾಟಕವೇ ದುಃಖದ ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಮಾಜಸೇವೆಯ ಮೂಲಕ ಕೂಡ ಎಲ್ಲರ ಮನೆ ಗೆದ್ದಂತಹ ಮಹಾನುಭಾವ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಸಿನಿಮಾಗಳನ್ನು ವಯಸ್ಸಿನ ಭೇದವಿಲ್ಲದೆ ಮಕ್ಕಳು ಯುವಕರು ಹಿರಿಯರು ಕೂಡ ನೋಡುತ್ತಿದ್ದರು.

ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಾಜಕುಮಾರ ಚಿತ್ರದ ನಂತರ ಅವರನ್ನು ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿ ಇಷ್ಟಪಡಲು ಪ್ರಾರಂಭಿಸಿದ್ದರು. ಎಲ್ಲ ಪ್ರಕಾರದ ಪ್ರೇಕ್ಷಕರ ಮನಗೆದ್ದಂತಹ ಕೆಲವೇ ಕೆಲವು ನಟರಲ್ಲಿ ಪುನೀತ್ ರಾಜಕುಮಾರ್ ರವರು ಅಗ್ರಸ್ಥಾನ ರಾಗಿ ಕಾಣಿಸಿಕೊಳ್ಳುತ್ತಾರೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅಜ್ಜಿಯೊಬ್ಬರು ಬಸ್ಸಿನ ಮೇಲಿರುವ ಪುನೀತ್ ರಾಜಕುಮಾರ್ ಅವರ ಪೋಸ್ಟರನ್ನು ತಮ್ಮ ಸೆರಗಿನಿಂದ ಕಣ್ಣೀರು ಒರೆಸುತ್ತಿದ್ದದ್ದು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಕೂಡ ಸದ್ದು ಮಾಡಿತ್ತು.

ಹೌದು ಈ ಅಜ್ಜಿ ಮೂಲತಹ ಕೊಪ್ಪಳ ಮೂಲದವರಂತೆ. ಕೊಪ್ಪಳದಲ್ಲಿ ಬಿಕ್ಷುಕಿ ಆಗಿರುವ ಈ ವೃದ್ಧೆ ಕೊಪ್ಪಳದ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿನ ಮೇಲಿರುವ ಪುನೀತ್ ರಾಜಕುಮಾರ್ ರವರ ಪೋಸ್ಟರನ್ನು ನೋಡಿ ತಾಳಲಾರದೆ ದುಃಖದಿಂದ ಒರೆಸು ತ್ತಿದ್ದುದು ಕಂಡು ಬಂದಿತ್ತು. ಇವರು ಚಿಕ್ಕ ವಯಸ್ಸಿನಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೋಡಿದ್ದರಂತೆ. ಈಗ ಅವರು ಇಲ್ಲ ಎಂಬುದು ಕೆಲವು ಹುಡುಗರಿಂದ ತಿಳಿದುಬಂದಿತ್ತು ಹೀಗಾಗಿ ಅವರು ಕೂಡ ಸಾಕಷ್ಟು ದುಃಖಿತರಾಗಿದ್ದಾರೆ. ಈ ವಿಚಾರದ ಕುರಿತಂತೆ ನೀವು ಏನು ಅನ್ನುತ್ತೀರಾ ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.