Neer Dose Karnataka
Take a fresh look at your lifestyle.

ಅಶ್ವಿನಿ ರವರ ಎಲ್ಲಾ ಮಾತಿಗೆ ಒಪ್ಪಿಗೆ ನೀಡಿದ ದೊಡ್ಮನೆ, ಇದೊಂದು ಮಾತಿಗೆ ಒಪ್ಪಲೇ ಇಲ್ಲ, ಈಡೇರದೆ ಹಾಗೆ ಉಳಿದ ಅಶ್ವಿನಿ ರವರ ಆಸೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ 20 ದಿನಗಳು ಮೀರಿವೆ. ಆದರೂ ಕೂಡ ಅವರ ನೆನಪು ಇನ್ನು ನಮ್ಮ ಮನದಾಳದಲ್ಲಿ ಕಾಡುತ್ತಿದೆ. ನಿಮಗೆಲ್ಲ ತಿಳಿದಿರುವಂತೆ ಪವರ್ ಸ್ಟಾರ್ ತಮ್ಮ ಜೀವಿತಾವಧಿಯಲ್ಲಿ ಆದಷ್ಟು ಜನಸೇವೆಯನ್ನು ಮಾಡಿಕೊಂಡು ಬಂದವರು. ಅವರ ಕೊನೆಯ ಅಂತಿಮ ದರ್ಶನಕ್ಕಾಗಿ ಬಂದ 25 ಲಕ್ಷಕ್ಕೂ ಅಧಿಕ ಜನರನ್ನು ನೋಡಿ ನೀವು ಇದನ್ನು ಅಂದಾಜಿಸಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಅಶ್ವಿನಿ ಅವರು ಅಂದುಕೊಂಡಿದ್ದ ಆಸೆ ಕೊನೆಗೂ ಈಡೇರಲೇ ಇಲ್ಲ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಕಂಠೀರವ ಸ್ಟುಡಿಯೋ ದಲ್ಲಿ ಮಾಡುವ ನಿರ್ಧಾರ ಮಾಡಿದ್ದು ಸರ್ಕಾರದವರು.

ಕಾರಣ ಅಲ್ಲೇ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿ ಕೂಡ ಇತ್ತು. ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ದರ್ಶನ ಮಾಡಲು ಕೂಡ ಅದು ಯೋಗ್ಯವಾದ ಸ್ಥಳವಾಗಿತ್ತು. ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಅಪ್ಪು ಅವರ ಸಮಾಧಿಯನ್ನು ತಮ್ಮ ರಾಮನಗರದ ಬಳಿಯ ಶೇಷಗಿರಿಯ ಫಾರ್ಮ್ ಹೌಸ್ ನಲ್ಲಿ ಮಾಡುವ ಇರಾದೆ ಇತ್ತು. ಒಂದು ವೇಳೆ ಇಲ್ಲಿ ಮಾಡಿದರೆ ಇದು ಕೇವಲ ಖಾಸಗಿ ಸಮಾಧಿ ಆಗಿಬಿಡುತ್ತದೆ ಸಾರ್ವಜನಿಕರಿಗೆ ಸರಿಯಾದ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿಯನ್ನು ಮಾಡಿದ್ದು. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅಪ್ಪು ಅವರ ಸಮಾಧಿಯನ್ನು ಇಲ್ಲಿ ಮಾಡಲು ಇದ್ದ ಬಲವಾದ ಕಾರಣ ಏನು ಗೊತ್ತ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಗೆಳೆಯರೇ ರಾಮನಗರದ ಬಿಡದಿಯ ಶೇಷಗಿರಿಹಳ್ಳಿಯಲ್ಲಿ ಇರುವ ಈ ಫಾರ್ಮ್ ಹೌಸ್ ಅನ್ನು ಕೊಂಡುಕೊಂಡಿದ್ದು ಡಾ ರಾಜಕುಮಾರ್ ಅವರು. ಈ ಫಾರ್ಮ್ ಹೌಸ್ ಗೆ ಅಣ್ಣಾವ್ರು ಪುನೀತ್ ಫಾರ್ಮ್ ಹೌಸ್ ಎಂಬುದಾಗಿ ನಾಮಕರಣ ಮಾಡಿದ್ದರಂತೆ. ಇಲ್ಲಿ ಅಣ್ಣಾವ್ರು ಒಂದು ಮನೆಯನ್ನು ಕೂಡ ಕಟ್ಟಿಸಿದರು. ಪುನೀತ್ ರವರು ಸಮಯ ಸಿಕ್ಕಾಗಲೆಲ್ಲ ಅಶ್ವಿನಿ ಅವರನ್ನು ಕರೆದುಕೊಂಡು ಬಂದು ಇಲ್ಲಿ ಸಮಯವನ್ನು ಕಳೆಯುತ್ತಿದ್ದರಂತೆ. ಇನ್ನು ಹಲವಾರು ಸಂದರ್ಶನಗಳಲ್ಲಿ ಇದು ನನ್ನ ನೆಚ್ಚಿನ ಜಾಗ ಎಂಬುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಅಪ್ಪು ಅವರಿಗೆ ಇಷ್ಟವಾಗಿರುವ ಈ ಜಾಗದಲ್ಲಿ ಅವರ ಸಮಾಧಿ ಮಾಡಬೇಕು ಎಂಬುದಾಗಿ ಅಶ್ವಿನಿ ಅವರು ಇಚ್ಛಿಸಿದ್ದರು. ಆದರೆ ಅದು ನಡೆಯದಿದ್ದರೂ ಕೂಡ ಈಗ ಅಪ್ಪು ಅವರು ತಮ್ಮ ತಂದೆ-ತಾಯಿಯರ ಪಕ್ಕದಲ್ಲಿ ಮಲಗಿದ್ದಾರೆ. ಇಂದಿಗೂ ಕೂಡ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ದಿನ ಕಂಠೀರವ ಸ್ಟುಡಿಯೋಗೆ ಅವರನ್ನು ನೋಡಲು ಹೋಗುತ್ತಾರೆ.

Comments are closed.