Neer Dose Karnataka
Take a fresh look at your lifestyle.

ಮಜಾ ಟಾಕೀಸ್ ನಲ್ಲಿ ಶ್ವೇತ ಚಂಗಪ್ಪ ರವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೆ??

6

ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಇದುವರೆಗೂ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿ ಕೊಂಡಿರುವ ಮಜಾ ಟಾಕೀಸ್ ಕಾರ್ಯಕ್ರಮ ನೋಡಿದ ಯಾರೇ ಆಗಲಿ ನಗದೇ ಇರಲು ಸಾಧ್ಯವೇ ಇಲ್ಲ, ಸಾಮಾನ್ಯವಾಗಿ ಜನರನ್ನು ನಕ್ಕು ನಗಿಸಲು ಒಬ್ಬ ನಗುವಿನ ಮಾಂ’ತ್ರಿಕ ಇದ್ದರೆ ಸಾಕು ಆದರೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಒಬ್ಬರಲ್ಲ ಇಬ್ಬರಲ್ಲ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಪ್ರತಿಯೊಬ್ಬರು ಕೂಡ ಪ್ರೇಕ್ಷಕರನ್ನು ನಕ್ಕು ನಲಿಸುವ ದರಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇತರ ಭಾಷೆಗಳಿಗೆ ಹೋಲಿಸಿಕೊಂಡರೆ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿರಲಿಲ್ಲ, ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೂ ಕೂಡ ಹಾಸ್ಯ ಕಲಾವಿದರು ಹೆಚ್ಚಿನ ಪ್ರಮಾಣದಲ್ಲಿ ಅವಕಾಶಗಳನ್ನು ಪಡೆಯಲು ವಿಫಲವಾಗುತ್ತಿದ್ದರು. ಇಂತಹ ಸಂದರ್ಭದಲ್ಲಿ ಕನ್ನಡ ಕಿರುತೆರೆಯಲ್ಲಿ ಮಜಾ ಟಾಕೀಸ್ ಆರಂಭಿಸುವ ಮೂಲಕ ಸೃಜನ್ ರವರು ಹಲವಾರು ಕಲಾವಿದರಿಗೆ ಬದುಕು ಕಟ್ಟಿಕೊಡುವ ಕಾರ್ಯವನ್ನು ಕೂಡ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಮಂಡ್ಯ ರಮೇಶ್, ಕುರಿ ಪ್ರತಾಪ್ ಸೇರಿದಂತೆ ಹಲವಾರು ಜನರು ‌ ಈ ಕಾರ್ಯಕ್ರಮದ ಮೂಲಕ ಇನ್ನೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಇದೀಗ ಕರ್ನಾಟಕದ ಎಲ್ಲೆಡೆ ಮನೆಮಾತಾಗಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಶ್ವೇತ ಚಂಗಪ್ಪ ಅವರು ಕೂಡ ರಾಣಿ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದರಲ್ಲಿ ಯಶಸ್ವಿ ಯಾಗುತ್ತಿದ್ದಾರೆ, ತಮ್ಮದೇ ಹಾವ ಭಾವ ಹಾಗು ಡೈಲಾಗ್ ಡೆಲವರಿ ಮೂಲಕ ಅತ್ಯದ್ಭುತ ನಟನೆ ಮಾಡಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುವ ಈ ಶ್ವೇತ ಚಂಗಪ್ಪ ರವರ ಒಂದು ಎಪಿಸೋಡಿಗೆ ಮೂವತ್ತರಿಂದ 35000 ಗಳವರೆಗೂ ಸಂಭಾವನೆ ಪಡೆಯುತ್ತಾರೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಇವರ ಪ್ರದರ್ಶನದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave A Reply

Your email address will not be published.