Neer Dose Karnataka
Take a fresh look at your lifestyle.

ಗಾಯಕಿ ಸುನೀತಾ ಎರಡನೇ ಮದುವೆಯಾಗಲು ಕಾರಣವಾದರೂ ಏನು ಗೊತ್ತೆ?? ಕೆಟ್ಟದಾಗಿ ಯೋಚಿಸುವ ಮುನ್ನ ಒಮ್ಮೆ ನೋಡಿ

9

ನಮಸ್ಕಾರ ಸ್ನೇಹಿತರೇ ಕನ್ನಡ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಹಲವಾರು ಹಾಡುಗಳಿಗೆ ಗಾಯಕಿಯಾಗಿ ಮಿಂಚಿರುವ ಸುನೀತಾ ರವರು ಬಹುಶಹ ನಿಮಗೆಲ್ಲರಿಗೂ ಹೆಚ್ಚಾಗಿ ತಿಳಿದಿರುವುದಿಲ್ಲ. ಯಾಕೆಂದರೆ ಇವರು ಕನ್ನಡದಲ್ಲಿ ಹಲವಾರು ಹಾಡುಗಳಿಗೆ ಕಂಠದಾನ ಮಾಡಿದ್ದರೂ ಕೂಡ ಹೆಚ್ಚಾಗಿ ತಮಿಳು ಚಿತ್ರರಂಗದಲ್ಲಿ ಹಾಗೂ ಪ್ರಮುಖವಾಗಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿದ್ದಾರೆ, ಆದ ಕಾರಣ ಸಾಮಾನ್ಯವಾಗಿ ಗಾಯಕಿ ಸುನೀತಾ ಎಂದ ತಕ್ಷಣ ತೆಲುಗು ಚಿತ್ರರಂಗ ನೆನಪಾಗುತ್ತದೆ.

ಇನ್ನು ಇವರು ಇತ್ತೀಚೆಗೆ ಕಳೆದ ಕೆಲವು ದಿನಗಳ ಹಿಂದೆ ಕೇವಲ ಹಾಡಿನಲ್ಲಿ ಅಷ್ಟೇ ಅಲ್ಲದೆ 42ರ ವಯಸ್ಸಿನಲ್ಲಿ ಎರಡನೇ ಮದುವೆಯಾದ ಕಾರಣ ಬಾರಿಗೆ ಟ್ರಾಲ್ ಗೆ ಒಳಗಾಗಿದ್ದರು, ಕೆಲವರು ಇದು ಒಂದು ಒಳ್ಳೆಯ ನಿರ್ಧಾರ ಎಂದರೆರೇ ಮತ್ತಷ್ಟು ಜನ ಗಾಯಕ್ಕೆ ಸುನೀತಾ ರವರನ್ನು ವೈಯಕ್ತಿಕ ವಿಚಾರಗಳನ್ನು ಕೆದಕಿ ಮನ ಬಂದಂತೆ ಮಾತನಾಡಿದರು, ಮದುವೆಯಾಗುವ ವಯಸ್ಸಿನ ಮಕ್ಕಳು ಇರುವಾಗ ಇವರಿಗೆ ಈಗ ಮದುವೆ ಯಾಕೆ ಎಂದು ಪ್ರಶ್ನೆ ಮಾಡಿದರು. ಆದರೆ ಇವರು ಎರಡನೇ ಮದುವೆ ಯಾಗುವ ಕಾರಣ ತಿಳಿದರೆ ನಿಜಕ್ಕೂ ದೃಷ್ಟಿಕೋನವೇ ಬದಲಾಗುತ್ತದೆ.

ಹೌದು ಸ್ನೇಹಿತರೇ ಸುನಿತಾ ರವರು ಮೊದಲ ಮದುವೆಯಾದಾಗ ಇವರಿಗೆ ಕೇವಲ ಹತ್ತೊಂಬತ್ತು ವರ್ಷ, ಮದುವೆಯಾದ ಕೆಲವು ವರ್ಷಗಳ ಬಳಿಕ ಎರಡು ಮಕ್ಕಳಿಗೆ ಜನ್ಮ ನೀಡಿದರು, ಆದರೆ ಮೊದಲ ಪತಿ ಅವರಿಗೆ ವಿಚ್ಛೇದನ ನೀಡಿ ದೂರ ಹೋಗಿ ಬಿಟ್ಟರು, ಇವರು ಇಬ್ಬರು ಮಕ್ಕಳನ್ನು ಇಂದು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದಾರೆ, ಜೀವನ ಪೂರ್ತಿ ಒಬ್ಬಂಟಿಯಾಗಿ ಇರಲು ನಿರ್ಧಾರ ಮಾಡಿದ ಸುನೀತಾ ಅವರನ್ನು ಎರಡನೇ ಮದುವೆಗೆ ಕುದ್ದು ಇವರ ಮಕ್ಕಳು ಹಾಗೂ ಇವರ ಪೋಷಕರು ಒಪ್ಪಿಸಿ ಮದುವೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ, ನನಗೆ ಇಷ್ಟವಿಲ್ಲ ಎಂದು ಕೇಳಿದರು ಕೂಡ ತಾಯಿಯನ್ನು ಒಪ್ಪಿಸುವಲ್ಲಿ ಕೊನೆಗೆ ಮಕ್ಕಳು ಯಶಸ್ವಿಯಾಗಿದ್ದಾರೆ, ತದ ನಂತರ ಖ್ಯಾತ ಉದ್ಯಮಿ ರಾಮ್ ವೀರಪನೇನಿ ಎಂಬುವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದರ ಕುರಿತು ಜನರು ತಪ್ಪು ಪ್ರತಿಕ್ರಿಯೆ ನೀಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

Leave A Reply

Your email address will not be published.