Neer Dose Karnataka
Take a fresh look at your lifestyle.

ಪೊಗರು, ರಾಬರ್ಟ್ ನಂತರ ಟಾಲಿವುಡ್ ನಲ್ಲಿಧೂಳೆಬ್ಬಿಸಲು ಮುಂದಾದ ಮತ್ತೊಬ್ಬರು ಕನ್ನಡದ ಸ್ಟಾರ್ ನಟ.

3

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡ ಭಾಷೆಯ ಚಿತ್ರಗಳು ಕೂಡ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ, ಕೇವಲ ಬಿಡುಗಡೆಯಾಗುವುದಕ್ಕೆ ಅಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ.

ಅದರಲ್ಲಿಯೂ ಇತ್ತೀಚೆಗೆ ದರ್ಶನ್ ರವರ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಹಾಗೂ ಧ್ರುವ ಸರ್ಜಾ ಅವರ ನಟನೆಯ ಪೊಗರು ಚಿತ್ರ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಭಾರಿ ಸದ್ದು ಮಾಡಿದ್ದವು, ರಾಬರ್ಟ್ ಸಿನಿಮಾ ಅಂತು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮೂಲೆ ಮೂಲೆಯಲ್ಲಿಯೂ ಕೂಡ ಭರ್ಜರಿ ಕಲೆಕ್ಷನ್ ಮಾಡಿ ಲಕ್ಷಗಟ್ಟಲೆ ಹಣವನ್ನು ಬಾಚಿಕೊಂಡಿದೆ.

ಇದೀಗ ಇದೇ ರೀತಿ ಕನ್ನಡದ ಮತ್ತೊಬ್ಬ ಸ್ಟಾರ್ ನಟರಾಗಿರುವ ‌ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದು ಕೊಂಡಿರುವ ಸುದೀಪ್ ರವರ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಸಿನಿಮಾ ತೆಲುಗು ಭಾಷೆಯಲ್ಲಿಯೂ ಕೂಡ ಬಿಡುಗಡೆಗೆ ಎಲ್ಲಾ ಸಿದ್ಧತೆ ನಡೆದಿದ್ದು, ಈಗಾಗಲೇ ಸುದೀಪ್ ರವರು ತೆಲುಗಿನಲ್ಲಿ ಚಿರ ಪರಿಚಿತ ಮುಖವಾಗಿರುವ ಕಾರಣ ಸಿನಿಮಾ ಮತ್ತಷ್ಟು ಯಶಸ್ಸು ಕಾಣಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಕನ್ನಡದ ಸಿನಿಮಾಗಳು ಗಡಿದಾಟಿ ಸದ್ದು ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ.

Leave A Reply

Your email address will not be published.