Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಬಿಗ್ ಬಾಸ್ ಕಾರ್ಯಕ್ರಮ ಸ್ಟಾಪ್, ಯಾವಾಗಿನಿಂದ ಗೊತ್ತಾ??. ಅಧಿಕೃತ ಆದೇಶ ಹೊರಡಿಸಿದ ಕಲರ್ಸ್.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕೋರೋಣ ಕಾರಣದಿಂದ ಬಹುತೇಕ ದೇಶ ಸ್ತಬ್ದ ವಾಗುವತ್ತ ಕಾಲಿಟ್ಟಿದೆ, ಎಲ್ಲಿ ನೋಡಿದರೂ ಕೂಡ ಕೋರೋಣ ತಾಂಡವವಾಡುತ್ತಿದ್ದು ಬಹುತೇಕ ಕಾರ್ಯಕ್ರಮಗಳು ಈಗಾಗಲೇ ನಿಂತು ಹೋಗಿದೆ. ಇದು ಹೇಗೆ ಮುಂದುವರೆದಲ್ಲಿ ಕಂಡಿತ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ ಹೇರುವ ಸಾಧ್ಯತೆ ಇಡೀ ದೇಶದಲ್ಲಿ ಕಾಣಿಸುತ್ತಿದೆ

ಇನ್ನು ಇದೆ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಿತವಾಗಿರುವ ಪರಮೇಶ್ವರ್ ಗುಂಡ್ಕಲ್ ರವರು ಅಧಿಕೃತ ಆದೇಶವನ್ನು ಹೊರಡಿಸಿತುದ್ದು, ಅಭಿಮಾನಿಗಳಿಗೆ ಕಹಿ ಸುದ್ದಿಯನ್ನು ನೀಡಿದ್ದಾರೆ ಹಾಗೂ ಸ್ಪರ್ಧಿಗಳು ಇಷ್ಟು ದಿವಸ ಆಟವಾಡಿದ ಎಲ್ಲಾ ಆಟಗಳು ನೀರಲ್ಲಿ ಹೋಮ ಮಾಡಿದಂತಾಗಿದೆ.

ಹೌದು ಸ್ನೇಹಿತರೆ ಇದೀಗ ಪರಮೇಶ್ವರ್ ಗುಂಡ್ಕಲ್ ಅವರು ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬಿಗ್ ಬಾಸ್ ಶುರುವಾಗಿ ಇವತ್ತಿಗೆ 71 ನೇ ದಿನ. ಸ್ಟುಡಿಯೋ ನಲ್ಲಿ ನಿಂತು ಈ ಮನೆಯಲ್ಲಿರುವ 11 ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ ಎಂದು ಬರೆದು ಕೊಂಡಿದ್ದಾರೆ.

Comments are closed.