Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಿರ್ಮಾಪಕ, ವಿಲ್ಲನ್ ಅರುಣ್ ಪಾಂಡ್ಯ ರವರ ಮಗಳು ಕೂಡ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಂದನವನಕ್ಕೆ ವಲಸೆ ಬಂದಂತಹ ಹಲವಾರು ನಟರೂ ಕನ್ನಡ ಪ್ರೇಕ್ಷಕ ಮಹಾಪ್ರಭುಗಳ ದಯೆಯಿಂದ ಗೆದ್ದು ಆ ಕಾಲದಲ್ಲಿ ಬೀಗಿದವರಿದ್ದಾರೆ. ಕನ್ನಡಿಗರು ಅವರನ್ನು ಕೂಡ ನಮ್ಮ ನಾಡಿನ ಹೀರೋಗಳಿಗೆ ಕೊಟ್ಟಷ್ಟೇ ಗೌರವ ಪ್ರೀತಿಗಳನ್ನು ನೀಡಿ ಅವರ ನಟನೆಯ ಸಿನಿಮಾವನ್ನು ಆದರಿಸಿದ್ದಾರೆ. ಅತಿಥಿ ದೇವೋಭವ ಎಂಬ ಮಾತನ್ನು ನಿಜಗೊಳಿಸಿದ್ದಾರೆ. ಅಂತಹ ಕೆಲವು ನಟರಲ್ಲೇ ಒಬ್ಬರ ಬಗ್ಗೆ ಈಗ ಹೇಳ ಹೊರಟಿದ್ದೇವೆ. ನಾವು ಇಂದು ಮಾತನಾಡಲು ಸಜ್ಜಾಗಿರೋದು ತಮಿಳು ಮೂಲದ ನಟ ಅರುಣ್ ಪಾಂಡ್ಯನ್ ರವರ ಕುರಿತಂತೆ.

1958 ರಲ್ಲಿ ತಮಿಳುನಾಡಿನಲ್ಲಿ ಜನಿಸುವ ಅರುಣ್ ಪಾಂಡ್ಯನ್ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ವನ್ನು ಇಷ್ಟ ಪಡುತ್ತಾ ಸಿನಿಮಾ ನಟನಾಗಬೇಕು ಎಂಬ ಕನಸನ್ನು ಕಾಣುತ್ತ ಬೆಳೆದವರು. ಹಾಗೆಯೇ ಅರುಣ್ ಮೊದಲ ಚಿತ್ರವನ್ನು ತಮಿಳಿನಲ್ಲಿಯೇ ಮಾಡಿದರು. ಚಿದಂಬರ ರಹಸ್ಯಂ’ ಎಂಬ ತಮಿಳು ಚಿತ್ರದ ಮೂಲಕ ಅರುಣ್ ಪಾಂಡ್ಯನ್ ಸಿನಿಮಾ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟರು. ಕ್ರಮೇಣವಾಗಿ ಬರುತ್ತಾ ಬರುತ್ತಾ ತಮಿಳು ಚಿತ್ರಗಳಲ್ಲಿ ನಟಿಸುತ್ತಾ ಮಾಸ್ ನಟನಾಗಿ ಹೆಚ್ಚು ನಟಿಸುತ್ತಿದ್ದರಿಂದ ಅವರು ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದರು.

ಇನ್ನು ಅರುಣ್ ಪಾಂಡ್ಯನ್ ಕನ್ನಡ ಚಿತ್ರರಂಗಕ್ಕೆ ಹೇಗೆ ಎಂಟ್ರಿ ಕೊಟ್ರು ಅಂದ್ರೆ ಡೈಲಾಗ್ ಕಿಂಗ್ ಸಾಯಿಕುಮಾರ್ ನಟನೆಯ ಆಯುಧ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ನೀಡಿದ್ರು. ಇದಾದ ಮೇಲೆ ಅರುಣ್ ಪಾಂಡ್ಯನ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೆ ಒಂದರಂತೆ ಅವಕಾಶಗಳು ಬೆಂಬಿಡದೆ ಅವರ ಕೈಗೆ ಸಿಕ್ಕಿದವು. ಪ್ರತಿಯೊಂದು ಚಿತ್ರದಲ್ಲಿ ಆಕ್ಷನ್ ನಟ ಇಲ್ಲ ಖಡಕ್ ಪೋಲೀಸ್ ಆಫಿಸರ್ ಆಗಿ ಕಾಣಿಸಿಕೊಳ್ಳುತ್ತಿದ್ದ ಆರುಣ್ ಪಾಂಡ್ಯನ್ ರವರು ಕನ್ನಡಿಗರ ಮನಸ್ಸಿಗೆ ಕಾಲ ಕ್ರಮೇಣ ಹತ್ತಿರ ವಾಗುತ್ತ ಬಂದರು.

ಅರುಣ್ ಪಾಂಡ್ಯನ್ ಕೇವಲ ಕನ್ನಡ ಹಾಗೂ ತಮಿಳು ಚಿತ್ರರಂಗಗಳಿಗೆ ಸೀಮಿತವಾಗಿರದೆ ಆಕ್ಷನ್ ನಟನಾಗಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಹಾಗೂ ಬಾಲಿವುಡ್ ನ ಚಿತ್ರಗಳಲ್ಲಿ ಕೂಡ ನಟಿಸಿ ಅಂದಿನ ದಿನಗಳಲ್ಲಿ ತಮ್ಮ ಫಿಟ್ನೆಸ್ ನ ಮೂಲಕ ಆಕ್ಷನ್ ನಟರಾಗಿ ಕರೆಯಲ್ಪಟ್ಟಿದ್ದಾರೆ. ಕೇವಲ ನಟನೆಯಲ್ಲಿ ತಮ್ಮ ಜಲ್ವಾ ತೋರಿಸಿರೋದು ಮಾತ್ರವಲ್ಲ ಅರುಣ್ ಪಾಂಡ್ಯನ್ ಕೆಲ ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರರಂಗದ ಹಲವು ಮಜಲುಗಳನ್ನು ಅರುಣ್ ಪಾಂಡ್ಯನ್ ಪರಿಚಯ ಮಾಡಿಕೊಂಡು ಯಶಸ್ವಿಯಾಗಿ ಅದನ್ನು ಪೂರ್ಣಗೊಳಿಸಿದ್ದಾರೆ.

ಇದಾದ ನಂತರ ಅರುಣ್ ಪಾಂಡ್ಯನ್ ರವರ ಸೆಕೆಂಡ್ ಇನ್ನಿಂಗ್ಸ್ ಬಗ್ಗೆ ಹೇಳೋದಾದ್ರೆ, ಚಿತ್ರರಂಗದಿಂದ ಸ್ವಲ್ಪ ಸ್ವಲ್ಪವೇ ದೂರಾಗುತ್ತ ದೂರಾಗುತ್ತ ಅರುಣ್ ಪಾಂಡ್ಯನ್ ರವರು ರಾ ಜಕಾರಣದ ಕಡೆಗೆ ಸ್ವಲ್ಪ ವಾಲಿದರು. ಒಮ್ಮೆ ಗೆದ್ದು ಎಂ ಎಲ್ಎ . ಆಗಿ ಅಧಿಕಾರವನ್ನು ಕೈಗೆತ್ತಿಕೊಂಡು ತಮ್ಮ ಅವಧಿಯಲ್ಲಿ ಕ್ಷೇತ್ರದ ಜನರ ಅಭಿವೃದ್ಧಿ ಮಾಡಿದ್ದಾರೆ. ಅರುಣ್ ಪಾಂಡ್ಯನ್ ರವರ ಫ್ಯಾಮಿಲಿ ಬಗ್ಗೆ ಹೇಳೋದಾದ್ರೆ ಅವರಿಗೆ ಮೂವರು ಹೆಣ್ಣು ಮಕ್ಕಳು ಅದರಲ್ಲಿ ಒಬ್ಬರಾದ ಕೀರ್ತಿ ಪಾಂಡ್ಯನ್ ಈಗ ತಮಿಳು ಚಿತ್ರರಂಗದಲ್ಲಿ ಚಿಕ್ಕದಾಗಿ ಸದ್ದು ಮಾಡುತ್ತಿದ್ದಾರೆ ತಮ್ಮ ಪ್ರತಿಭೆ ಮೂಲಕ ತಂದೆಯಂತೆಯೇ ತಾನು ಕೂಡ ದೊಡ್ಡ ಕಲಾವಿದೆ ಯಾಗಬೇಕೆನ್ನುವ ಹಂಬಲ. ಅರುಣ್ ಪಾಂಡ್ಯನ್ ರವರಂತೆ ಅವರ ಪುತ್ರಿ ಕೂಡ ದೊಡ್ಡ ನಟಿಯಾಗಲೆಂದು ಹಾರೈಸುತ್ತಾ ನಿಮಗೆ ವಿಚಾರದ ಬಗ್ಗೆ ಏನನ್ನಿಸಿತು ಎಷ್ಟು ಇಷ್ಟವಾಯಿತು ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ.

Comments are closed.