Neer Dose Karnataka
Take a fresh look at your lifestyle.

ಯಶ್ ರವರು ಚಿತ್ರರಂಗದವರ ಸಹಾಯಕ್ಕೆ ನಿಂತಿದಕ್ಕೆ ಷಾಕಿಂಗ್ ಪ್ರತಿಕ್ರಿಯೆ ನೀಡಿದ ಉಪೇಂದ್ರ. ಏನು ಗೊತ್ತಾ??

0

ನಮಸ್ಕಾರ ಸ್ನೇಹಿತರೇ ಭಾರತಾದ್ಯಂತ ಕೋವಿಡ್ ಎರಡನೇ ಅಲೆ ಅಕ್ಷರಶಃ ಜನಜೀವನವನ್ನ ಅಲುಗಾಡಿಸಿಬಿಟ್ಟಿದೆ. ಅದರಲ್ಲೂ ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ಲಾಕ್ ಡೌನ್ ಜಾರಿಯಲ್ಲಿದೆ.ಈ ಕಾರಣದಿಂದ ಚಿತ್ರೋದ್ಯಮ ಸಹ ಯಾವ ಕೆಲಸವನ್ನು ಸಹ ನಿರ್ವಹಿಸುತ್ತಿಲ್ಲ. ಚಿತ್ರೋದ್ಯಮವನ್ನ ನಂಬಿ ಹಲವಾರು ಕಲಾವಿದರು, ತಂತ್ರಜ್ಞರು, ನೃತ್ಯ ಹಾಗೂ ಸಾಹಸ ಕಲಾವಿದರು, ದಿನಗೂಲಿ ನೌಕರರು ಜೀವನ ಸಾಗಿಸುತ್ತಿದ್ದಾರೆ. ಆದರೇ ಈಗ ಅವರು ಜೀವನ ನಿರ್ವಹಿಸಲು ಸಹ ಬಹಳಷ್ಟು ಕಷ್ಟಪಡುತ್ತಿದ್ದಾರೆ.

ಈ ಸಂಕಷ್ಟಕ್ಕೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಧಾರಾಳ ನೆರವನ್ನು ಘೋಷಿಸಿದ್ದು ನಿಮಗೆಲ್ಲಾ ತಿಳಿದಿರುವ ವಿಷಯ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಯಶ್, ಚಿತ್ರರಂಗದಲ್ಲಿರುವ ಮೂರು ಸಾವಿರಕ್ಕೂ ಹೆಚ್ಚಿರುವ ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ತಲಾ ಐದು ಸಾವಿರ ರೂಪಾಯಿಯನ್ನು ಅವರ ಬ್ಯಾಂಕ್ ಅಕೌಂಟ್ ಗೆ ಹಾಕುತ್ತೆನೆ ಎಂದು ತಿಳಿಸಿದ್ದಾರೆ. ಮುಂದುವರಿದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ ಗೋವಿಂದುರವರಿಗೆ ಪತ್ರ ಬರೆದಿರುವ ಯಶ್ ರವರು, ಎಲ್ಲಾ ಕಾರ್ಮಿಕ, ಕಲಾವಿದ, ತಂತ್ರಜ್ಞರ ಬ್ಯಾಂಕ್ ಅಕೌಂಟ್ ಗಳ ಮಾಹಿತಿಯನ್ನು ತಮಗೆ ನೀಡಲು ಮನವಿ ಸಲ್ಲಿಸಿರುತ್ತಾರೆ. ಯಶ್ ರವರ ಈ ನಡೆಯನ್ನ ಹಲವಾರು ಜನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಐದು ಸಾವಿರ ಕೆಲವರಿಗೆ ಸಣ್ಣ ಅಮೌಂಟ್ ಆದರೂ, ಈ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಖಂಡಿತ ಅದು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ಇದಕ್ಕೆ ರಿಯಲ್ ಸ್ಟಾರ್ ಉಪ್ಪಿ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಉಪೇಂದ್ರ ಲಾಕ್ ಡೌನ್ ಸಮಯದಲ್ಲಿ ರೈತರಿಂದ ತರಕಾರಿ ಖರೀದಿಸಿ ಸಂಕಷ್ಟದಲ್ಲಿರುವವರಿಗೆ ಉಚಿತವಾಗಿ ಹಂಚಿದ್ದರು. ಈಗ ಯಶ್ ಬಗ್ಗೆ ಮಾತನಾಡಿರುವ ಉಪೇಂದ್ರ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಶ್ ಕಾರ್ಯವನ್ನು ಹಂಚಿಕೊಂಡಿದ್ದಾರೆ. ಯಶ್ ಅವರಿಂದ ಮಹತ್ವದ ಹೆಜ್ಜೆ, ಧನ್ಯವಾದಗಳು ಯಶ್, ಇಂತಹ ಮಹತ್ಕಾರ್ಯವನ್ನು ಮಾಡಲು ತಮಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದು ಶುಭ ಹಾರೈಸಿದ್ದಾರೆ.

ಬೆಂಗಳೂರಿನಲ್ಲಿ ರಾತ್ರಿ ಕಳೆಯಲು ತಲೆಯ ಮೇಲೆ ಸೂರು ಸಹ ಇಲ್ಲದೇ, ಮೆಜೆಸ್ಟಿಕ್ ಬಸ್ ಸ್ಟಾಂಡ್ ನಲ್ಲಿ ರಾತ್ರಿ ಮಲಗಿದ್ದ ಯಶ್, ಇಂದು ಚಿತ್ರರಂಗದವರಿಗೆ ಇಷ್ಟೊಂದು ದೊಡ್ಡ ರೀತಿಯಲ್ಲಿ ಸಹಾಯ ಮಾಡಿರುವುದು ನಿಜಕ್ಕೂ ಅದ್ಭುತ ಕೆಲಸ. ಚಿತ್ರರಂಗದವರ ಕಷ್ಟ ಏನು ಎಂಬುದು ಯಶ್ ಗೆ ಗೊತ್ತಿದೆ, ಹಾಗಾಗಿ ಇಂತಹ ದೊಡ್ಡ ಸಹಾಯ ಮಾಡಿದ್ದಾರೆ ಎಂದು ಹಲವಾರು ಜನ ಅಭಿಪ್ರಾಯಪಟ್ಟಿದ್ದಾರೆ. ಅದಲ್ಲದೇ ಉಳಿದ ನಟರು ಸಹ ಯಶ್ ಮಾದರಿಯಲ್ಲಿ ಸಹಾಯ ಮಾಡಿ, ಚಿತ್ರಂಗದಲ್ಲಿ ದುಡಿಯುತ್ತಿರುವ ಹಿರಿಯ,ಕಿರಿಯ ಕಲಾವಿದ, ತಂತ್ರಜ್ಞ,ಕಾರ್ಮಿಕರುಗಳಿಗೆ ಸಹಾಯಹಸ್ತ ಚಾಚಬೇಕೆಂದು ಹೇಳಿದ್ದಾರೆ. ಯಶ್ ರವರ ಮಹತ್ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.