Neer Dose Karnataka
Take a fresh look at your lifestyle.

ಕವಿತಾ, ಪ್ರಣೀತಾ ನಂತರ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಟಾಪ್ ನಟಿ, ವರನ್ಯಾರು ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಈ ಲಾಕ್ಡೌನ್ ಕೆಲವರಿಗೆ ಆರ್ಥಿಕ ಸಂಕಷ್ಟವನ್ನು ಒದಗಿಸುತ್ತಿದ್ದಾರೆ ಇನ್ನು ಕೆಲವರಿಗೆ ಸಹಾಯ ಮಾಡಲು ಒಂದು ಸದಾವಕಾಶವನ್ನು ಒದಗಿಸುತ್ತಿದೆ. ಇನ್ನು ಕೆಲವರು ಕನ್ನಡ ಚಿತ್ರರಂಗದ ನಟ-ನಟಿಯರು ಲಾಕ್ ಡೌನ್ ನಲ್ಲಿ ಸಿಂಪಲ್ಲಾಗಿ ಮದುವೆ ಮಾಡಿಕೊಂಡು ಬಿಟ್ಟಿದ್ದಾರೆ. ಅವರ ಮದುವೆ ಹಿಂದೆ ನಿಶ್ಚಯವಾಗಿದ್ದರು ಲಾಕ್ಡೌನ್ ನಿಯಮಗಳಿಂದಾಗಿ ಅವರ ಮದುವೆ ಮುಂದೂಡಲ್ಪಟ್ಟಿತ್ತು ಇನ್ನೂ ಮುಂದೂಡುವುದು ಬೇಡವೆಂದು ಲಾಕ್ ಡೌನ್ ಅಲ್ಲಿ ಮದುವೆ ಆಗಿರಬಹುದು.

ಮೊದಲಿಗೆ ಈ ಲಾಕ್ ಡೌನ್ ಮದುವೆ ಪರಂಪರೆಯ ಬಗ್ಗೆ ಹೇಳುವುದಾದರೆ ಮೊದಲು ಕನ್ನಡ ಕಿರುತೆರೆಯಲ್ಲಿ ಖ್ಯಾತರಾಗಿರುವ ಜೋಡಿ ಚಂದನ್ ಗೌಡ ಹಾಗೂ ಕವಿತ ಗೌಡ ಮದುವೆಯಾಗಿ ಈ ಪರಂಪರೆಯನ್ನು ಶುರುಮಾಡಿದರು ಎನ್ನಬಹುದು. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಪರಿಚಿತರಾದ ಈ ಜೋಡಿ ನಂತರ ದಿನಗಳಲ್ಲಿ ಇವರಿಬ್ಬರ ನಡುವೆ ಸ್ನೇಹ ಸಂಬಂಧ ಏರ್ಪಟ್ಟಿತು. ನಂತರದ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಚಂದನ್ ಗೌಡ ಹಾಗೂ ಕವಿತಾ ಗೌಡ ಕನ್ನಡಿಗರ ಮನೆಮಾತಾದರು.

ಕಿರುತೆರೆಯ ಸೂಪರ್ ಫೇವರೆಟ್ ಜೋಡಿಯಾಗಿ ಇವರ ಜೋಡಿ ಕಾಣಿಸಿಕೊಂಡಿತ್ತು. ಇವರಿಬ್ಬರು ಹಲವಾರು ಮ್ಯೂಚಲ್ ಫ್ಯಾನ್ಸ್ ಗಳನ್ನು ಕೂಡ ಹೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಗಲಿ ಅಥವಾ ನಿಜಜೀವನದಲ್ಲಿ ಆಗಲಿ ಅಭಿಮಾನಿಗಳು ಇವರನ್ನು ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ ನಿಜಜೀವನದಲ್ಲೂ ಮದುವೆಯಾಗಿ ಎಂದು ಕೇಳಿಕೊಳ್ಳುತ್ತಿದ್ದರು. ಎಲ್ಲಾ ಅಂದುಕೊಂಡಂತೆ ಇವರ ಮಧ್ಯೆ ಸ್ನೇಹದಿಂದ ಪ್ರೀತಿ ಹೆಚ್ಚಾಯಿತು. ಪ್ರೀತಿ ಇತ್ತೀಚೆಗಷ್ಟೇ ಮದುವೆಯಾಗಿ ಇವರಿಬ್ಬರು ಜೀವನಪರ್ಯಂತ ಜೋಡಿಗಳಾಗಿ ತಮ್ಮ ಹೊಸಬದುಕನ್ನು ಪ್ರಾರಂಭಿಸಿದ್ದಾರೆ.

ಇದಾದ ನಂತರ ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಸ್ಟಾರ್ ನಟಿ ಹಾಗೂ ಬಹುಭಾಷಾ ಬೇಡಿಕೆ ನಟಿ ಪ್ರಣೀತಾ ಸುಭಾಷ್ ಅವರು ಮದುವೆಯಾಗುವ ಮೂಲಕ ಸುದ್ದಿಯಾದರು. ಹೌದು ನಟಿ ಪ್ರಣೀತಾ ಸುಭಾಷ್ ಅವರ ಮದುವೆ ಕೂಡ ಸಿಂಪಲ್ ಹಾಗೂ ಸೀಕ್ರೆಟಾಗಿ ನಡೆದುಹೋಯಿತು. ಲಾಕ್ಡೌನ್ ನಿಯಮಗಳಿಂದಾಗಿ ಯಾರನ್ನು ಆಹ್ವಾನಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಟಿ ಪ್ರಣೀತಾ ಸುಭಾಷ್ ಅವರು ತಮ್ಮ ಬಹುಕಾಲದ ಗೆಳೆಯ ಉದ್ಯಮಿ ನಿತಿನ್ ರಾಜು ರವರನ್ನು ಮೇ 30ರಂದು ಸರಳವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಕವಿತಾ ಗೌಡ ಹಾಗೂ ಪ್ರಣೀತಾ ಸುಭಾಷ್ ನಂತರ ಇನ್ನೊಬ್ಬ ಕನ್ನಡದ ಖ್ಯಾತ ನಟಿ ಸದ್ದಿಲ್ಲದೆ ಮದುವೆಯಾಗಿದ್ದಾರೆ. ಅವರು ಯಾರೆಂದು ಹೇಳುತ್ತೇವೆ ಬನ್ನಿ.

ಹೌದು ಕನ್ನಡದ ಖ್ಯಾತ ನಟಿಯರಾದ ಕವಿತಾ ಗೌಡ ಹಾಗೂ ಪ್ರಣಿತ ಸುಭಾಷ್ ನಂತರ ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರು ವೈವಾಹಿಕ ಜೀವನಕ್ಕೆ ಮೊನ್ನೆಯಷ್ಟೇ ಕಾಲಿಟ್ಟಿದ್ದಾರೆ. ಯಾರಪ್ಪಾ ನಟಿ ಎಂದು ಯೋಚಿಸುತ್ತಿದ್ದೀರಾ ಅವರ ಹೆಸರು ಯಾಮಿ ಗೌತಮ್. 2009ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಅಭಿನಯದ ಸೂಪರ್ ಹಿಟ್ ಚಿತ್ರ ಉಲ್ಲಾಸ ಉತ್ಸಾಹ ದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಯಾಮಿ ಗೌತಮ್ ಹಲವಾರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ನಟಿಸಿದ್ದಾರೆ.

ಆದರೆ ಅವರು ಮುಖ್ಯವಾಗಿ ಹೆಸರು ಸಂಪಾದಿಸಿದ್ದು ಬಾಲಿವುಡ್ ಚಿತ್ರರಂಗದಲ್ಲಿ. ಮೊನ್ನೆಯಷ್ಟೇ ಯಾಮಿ ಗೌತಮ್ ರವರು ಗುರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ರವರನ್ನು ಸೀಕ್ರೆಟ್ ಆಗಿ ವಿವಾಹ ಮಾಡಿಕೊಳ್ಳುವುದರ ಮೂಲಕ ವೈವಾಹಿಕ ಜೀವನಕ್ಕೆ ಶುಭಾರಂಭ ಮಾಡಿದರು. ಇವರಿಬ್ಬರು ಬಹುಕಾಲದ ಗೆಳೆಯರಾಗಿದ್ದರು ಹಾಗೂ ಉರಿ ಚಿತ್ರದಲ್ಲಿ ಕೂಡ ಯಾಮಿ ಗೌತಮ್ ನಟಿಸಿದ್ದರು. ಇವರಿಬ್ಬರ ಗೆಳೆತನ ಈಗ ಮದುವೆಯಲ್ಲಿ ಒಂದಾಗಿದೆ. ಯಾಮಿ ಗೌತಮ್ ರವರಿಗೆ ವಿವಾಹ ಜೀವನದ ಶುಭಹಾರೈಕೆಗಳನ್ನು ತಿಳಿಸುತ್ತೇವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮಿಸ್ ಮಾಡದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.