Neer Dose Karnataka
Take a fresh look at your lifestyle.

ದ್ವಿತ್ವ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ನಟಿಸುತ್ತಿರುವ ದಕ್ಷಿಣಭಾರತದ ಖ್ಯಾತ ನಟಿ ಯಾರು ಗೊತ್ತೆ??

4

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಗಳಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಗಳು ಮೂಡಿಬರುತ್ತಿವೆ. ಇದರಲ್ಲಿ ಇತ್ತೀಚಿಗೆ ಘೋಷಣೆಯಾಗಿರುವ ದ್ವಿತ್ವ ಚಿತ್ರ ಕೂಡ ಒಂದು. ಹೌದು ಸ್ನೇಹಿತರೆ ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರ ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ನಿಂದಾಗಿ ಸಾಕಷ್ಟು ಸುದ್ದಿ ಮಾಡುತ್ತಿವೆ.

ಮೊದಲ ಬಾರಿಗೆ ಪವನ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಚಿತ್ರಕ್ಕಾಗಿ ಒಂದಾಗಿದ್ದು ಅಭಿಮಾನಿಗಳು ಮಾತ್ರವಲ್ಲದೆ ಕನ್ನಡ ಹಾಗೂ ಸಿನಿರಸಿಕರು ಕಾತರದಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಎಂದರೆ ಕೇಳಬೇಕಾಗಿಲ್ಲ ದೊಡ್ಡ ಪ್ರಮಾಣದಲ್ಲಿ ಮೂಡಿಬರಲಿದೆ. ಇನ್ನು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಜೋಡಿಯಾಗಿ ನಟಿಸುತ್ತಿರುವ ಆ ದಕ್ಷಿಣ ಭಾರತದ ಖ್ಯಾತ ನಟಿ ಯಾರು ಗೊತ್ತಾ ಸ್ನೇಹಿತರೆ.

ಹೌದು ಸ್ನೇಹಿತರೆ ಈ ಹಿಂದೆ 2014 ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪವರ್ ಚಿತ್ರದಲ್ಲಿ ನಟಿಸಿದ್ದ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ತ್ರಿಷಾ ಕೃಷ್ಣನ್ ಈಗ ಮಿತ್ವ ಚಿತ್ರಕ್ಕೂ ನಾಯಕ ನಟಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನು ಈ ಕುರಿತಂತೆ ಚಿತ್ರತಂಡ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಅನೌನ್ಸ್ಮೆಂಟ್ ಮಾಡಬಹುದು. ಅದೇನೇ ಇರಲಿ ಪವರ್ಸ್ಟಾರ್ ಅಭಿಮಾನಿಗಳಲ್ಲಿ ದ್ವಿತ್ವ ಚಿತ್ರದ ಕುರಿತಂತೆ ಕಾತುರತೆ ಹಾಗೂ ಕುತೂಹಲ ಸಾಕಷ್ಟು ಮನೆ ಮಾಡಿದ್ದು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಸುದ್ದಿ ಮಾಡುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.