Neer Dose Karnataka
Take a fresh look at your lifestyle.

ಒಂದ್ಕಕಿಂತಲೂ ಹೆಚ್ಚು ಬಾರಿ ಮದುವೆಯಾಗಿರುವ ಕನ್ನಡದ ನಟಿ ಮಣಿಯರು ಯಾರ್ಯಾರು ಗೊತ್ತೇ?? ಇಲ್ಲಿದ್ದಾರೆ ನೋಡಿ.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅದು ಹೆಣ್ಣೆ ಆಗಿರಲಿ ಗಂಟೆ ಆಗಿರಲಿ ಮದುವೆ ಅನ್ನೋದು ಒಂದು ಪ್ರಮುಖ ಘಟ್ಟವಾಗಿದೆ. ಮದುವೆಯನ್ನು ನೂರಾರು ಬಾರಿ ಆಲೋಚಿಸಿ ಹಾಗೂ ಅದರ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ಎರಡು ಮನಸುಗಳು ಒಂದಾಗುವ ಕಾರ್ಯಕ್ರಮವೇ ಮದುವೆ ಎನ್ನ ಬಹುದು.

ಆದರೆ ನಾವಿಂದು ಹೇಳಹೊರಟಿರುವ ವಿಷಯವೇನೆಂದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ಮದುವೆಯೇನೋ ಆಗಿದ್ದಾರೆ ಆದರೆ, ಕೇವಲ ಒಂದು ಮದುವೆಯಲ್ಲ ಒಂದಕ್ಕಿಂತ ಹೆಚ್ಚು ಅಂದರೆ ಎರಡು ಮದುವೆ ಆಗಿದ್ದಾರೆ. ಇಂದು ನಾವು ಅಂತ ನಟಿಯರ ಕುರಿತಂತೆ ಹಾಗೂ ಅವರ ಮದುವೆಯಾಗುತ್ತಿದ್ದಂತೆ ಮಾತನಾಡಲು ಹೊರಟಿದ್ದೇವೆ ಬನ್ನಿ ಈ ಕುರಿತಂತೆ ನಿಮಗೆ ನಾವು ಸಂಪೂರ್ಣ ವಿವರವನ್ನು ನೀಡುತ್ತೇವೆ.

ಶ್ರುತಿ ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಭಾವನಾತ್ಮಕ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಪ್ರತಿಭಾನ್ವಿತ ನಟಿ ಎಂದರೆ ಅದು ಶ್ರುತಿ. ಇತ್ತೀಚಿನ ವರ್ಷಗಳಲ್ಲಿ ಬಿಗ್ಬಾಸ್ ಕೂಡ ಹೋಗಿ ಬಂದಂತಹ ನಟಿಯಾಗಿದ್ದರು ನಮ್ಮ ಶೃತಿಯವರು. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ನಟಿಸುತ್ತಿದ್ದಾರೆ. ಇನ್ನು ಇವರು ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಯಶಸ್ವಿ ನಿರ್ದೇಶಕರಾಗಿದ್ದ ಅಂತಹ ಎಸ್ ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ನಂತರ ಹನ್ನೊಂದು ವರ್ಷಗಳ ವೈವಾಹಿಕ ಜೀವನದ ನಂತರ ಶ್ರುತಿ ಹಾಗೂ ಎಸ್ ಮಹೇಂದ್ರ ನಡುವಿನ ಅವರಿಂದಾಗಿ ಇಬ್ಬರು ಕೂಡ ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆದಿದ್ದಾರೆ. ನಂತರ ಶ್ರುತಿ ರವರು ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಲ್ಲಿ ಜೋರಾಗಿ ಕೇಳಿಬರುತ್ತಿರುವ ಹೆಸರು ಎಂದರೆ ಚಕ್ರವರ್ತಿ ಚಂದ್ರಚುಡ್ ರವರು. ಹೌದು ಸ್ನೇಹಿತರೆ ನಟಿ ಶ್ರುತಿ ರವರು ಚಕ್ರವರ್ತಿ ಚಂದ್ರಚೂಡ್ ರವರನ್ನು ಕೊಲ್ಲೂರಿನ ದೇವಸ್ಥಾನದಲ್ಲಿ ಸರಳವಾಗಿ ಎರಡನೇ ಮದುವೆಯಾದರು. ಇದು ಕೂಡ ಹೆಚ್ಚು ವರ್ಷಗಳ ಕಾಲ ಉಳಿಯಲಿಲ್ಲ.

ಸುಧಾರಾಣಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ ಸುಧಾರಾಣಿ ಯವರು ಮೊದಲು ಅಮೆರಿಕ ಮೂಲದ ವೈದ್ಯರಾಗಿದ್ದಂತಹ ಸಂಜಯ್ ರವರನ್ನು ವಿವಾಹವಾಗಿ ಅಮೆರಿಕಕ್ಕೆ ತೆರಳಿದ್ದರು. ನಂತರ ತಲೆದೋರಿದ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಕೂಡ ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆದರು. ಈಗ ಸುಧಾರಾಣಿ ಅವರು ಸಂಬಂಧಿಯಾದ ಅಂತಹ ಗೋವರ್ಧನ್ ರವರನ್ನು ಮದುವೆಯಾಗಿ ಸುಖ ಜೀವನವನ್ನು ನಡೆಸಿಕೊಂಡಿದ್ದಾರೆ.

ರಾಧಿಕಾ ರಾಧಿಕಾ ರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಬಿಟ್ಟಿದ್ದರು. ರತನ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದ ರಾಧಿಕಾ ರವರು ಮುಂದಿನ ದಿನಗಳಲ್ಲಿ ಅವರ ಪತಿ ಇಹಲೋಕವನ್ನು ತ್ಯಜಿಸಿದರು. ನಂತರದ ದಿನಗಳಲ್ಲಿ ರಾಧಿಕಾ ರವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡರು ಆನಂತರ ಚಿತ್ರರಂಗದಿಂದ ದೂರ ಆದಮೇಲೆ ಕುಮಾರಸ್ವಾಮಿ ಅವರನ್ನು ಎರಡನೇ ವಿವಾಹವಾಗಿ ಶಮಿಕಾ ಎಂಬ ಮಗಳನ್ನು ಪಡೆದರು.

ಅನುಪ್ರಭಾಕರ್ ಅನು ಪ್ರಭಾಕರ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಅಂತಹ ಗ್ರಾಮರ ಹಾಗೂ ಸಾಂಸ್ಕೃತಿಕ ಪಾತ್ರಗಳನ್ನು ಮಾಡಬಲ್ಲಂತಹ ಪ್ರತಿಭಾನ್ವಿತ ನಟಿ. ಇನ್ನು ಇವರು ಮೊದಲಿಗೆ ಕನ್ನಡದ ಖ್ಯಾತ ಹಿರಿಯ ನಟಿ ಜಯಂತಿ ರವರ ಮಗನಾದ ಕೃಷ್ಣಕುಮಾರ್ ಎಂಬುವವರನ್ನು ಮದುವೆಯಾಗಿ 2014 ರಲ್ಲಿ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಕೂಡ ಪರಿಸರ ವಿವಾಹ ವಿಚ್ಛೇದನವನ್ನು ಪಡೆದರು. ನಂತರ ನಟಿ ಅನು ಪ್ರಭಾಕರ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದ ಅಂತಹ ರಘುಮುಖರ್ಜಿ ಅವರನ್ನು ವಿವಾಹವಾದರು.

Comments are closed.