Neer Dose Karnataka
Take a fresh look at your lifestyle.

ಯಪ್ಪಾ, ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಶುಭ ರವರು ಬಾಯ್ ಫ್ರೆಂಡ್ ಜೊತೆ ಹೋಗಿದೆಲ್ಲಿಗೆ ಗೊತ್ತೇ??

15

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಗೆ ಇನ್ನೇನು ಕೆಲವೇ ಕೆಲವು ದಿನಗಳ ಕ್ಷಣಗಣನೆ ಮಾತ್ರ ಉಳಿದಿದೆ. ಈಗಾಗಲೇ ಬಿಗ್ ಬಾಸ್ ಫಿನಾಲೆಗೆ ಹೋಗಿರುವ top5 ಸ್ಪರ್ಧಿಗಳ ಹೆಸರು ಕೂಡ ನಮಗೆಲ್ಲರಿಗೂ ಗೊತ್ತಾಗಿದೆ. ಇತ್ತೀಚಿಗಷ್ಟೇ ಅಂದರೆ ಶನಿವಾರವಷ್ಟೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ನಟಿ ಶುಭಾ ಪೂಂಜಾ ರವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಬಿಗ್ ಬಾಸ್ ನ ನಂತರ ಶುಭಪುಂಜ ರವರ ಮೇಲಿದ್ದ ತಪ್ಪು ಕಲ್ಪನೆ ಜನರಲ್ಲಿ ನಿವಾರಣೆಯಾಗಿದೆ ಎಂಬುದು ಈಗಾಗಲೇ ಸಾಬೀತಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ನಟಿ ಶುಭಾ ಪೂಂಜಾ ರವರು ಯಾರ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿಲ್ಲ ಹಾಗೂ ಮನೆಯಲ್ಲಿ ಅಜಾತಶತ್ರುವಿನಂತೆ ಇದ್ದರು. ತಾನಾಯ್ತು ಹಾಗೂ ಟಾಸ್ಕ್ ಆಯ್ತು ಎಂದು ಇದ್ದವರು ಶುಭ ಪೂಂಜಾ ರವರು. ಏನು ಬಿಗ್ ಬಾಸ್ ಮನೆಯಿಂದ ಮೊನ್ನೆಯಷ್ಟೇ ಎಲಿಮಿನೇಟ್ ಆದ ಮೇಲೆ ಶುಭ ಪೂಂಜಾ ರವರು ಎಲ್ಲಿಗೆ ಹೋಗಿದ್ದಾರೆ ಗೊತ್ತಾ ಸ್ನೇಹಿತರೆ‌. ಬನ್ನಿ ಸ್ನೇಹಿತರೆ ಈ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಿಂದ ಎಲಿಮಿನೇಶನ್ ಆಗುತ್ತಿದ್ದಂತೆ ನಟಿ ಶುಭಾ ಪೂಂಜಾ ರವರು ತಮ್ಮ ಪ್ರಿಯಕರ ಹಾಗೂ ಭಾವಿ ಪತಿ ಸುಮಂತ್ ಮಹಾಬಲ ರವರೊಂದಿಗೆ ಗೋವಾಗೆ ಹಾರಿದ್ದಾರೆ. ನಟಿ ಶುಭಾ ಪೂಂಜಾ ರವರ ಸ್ವತಹ ಹೇಳಿರುವಂತೆ ಅವರ ಭಾವಿಪತಿ ಸುಮಂತ್ ಮಹಾಬಲ ಈಗಾಗಲೇ ಅವರಿಗಾಗಿ ಬಹಳಷ್ಟು ದಿನಗಳಷ್ಟು ಕಾದಿದ್ದಾರೆ. ಬಿಗ್ ಬಾಸ್ ಗ್ರಾಂಡ್ ಫಿನಾಲೆ ಮುಗಿಯುತ್ತಿದ್ದಂತೆ ಮದುವೆ ತಯಾರಿಗಳನ್ನು ಮಾಡಿಕೊಳ್ಳಬೇಕಾಗಿದೆ ಹಾಗೂ ಮದುವೆಯಾದ ನಂತರ ಪ್ರೊಡಕ್ಷನ್ ಕಂಪನಿಯೊಂದನ್ನು ಪ್ರಾರಂಭ ಮಾಡಲು ಯೋಚಿಸಿದ್ದೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಶುಭ ಪೂಂಜಾ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಕಾಣಿಸಿಕೊಂಡರು ಕೂಡ ಅಚ್ಚರಿಪಡಬೇಕಾಗಿಲ್ಲ.

Leave A Reply

Your email address will not be published.