Neer Dose Karnataka
Take a fresh look at your lifestyle.

ದರ್ಶನ ರವರನ್ನು ಸೋಲಿನ ಪಾತಾಳಕ್ಕೆ ತಳ್ಳಿದ್ದ 7 ಚಿತ್ರಗಳು, ತದನಂತರ ಇವರು ಮತ್ತೆ ಗೆದ್ದು ಬಂದದ್ದು ಹೇಗೆ ಗೊತ್ತೇ??

3

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮಾಸ್ ಐಕಾನ್ ಎಂಬ ಹಣೆಪಟ್ಟಿಯನ್ನು ಹೊಂದಿರುವುದು ನಮ್ಮೆಲ್ಲರ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಅವರ ತಂದೆ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ನಟನಾಗಿದ್ದರೂ ಕೂಡ. ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಂದೆ ಹೆಸರನ್ನು ಬಳಸಿಕೊಳ್ಳಲಿಲ್ಲ. ಹೌದು ಸ್ನೇಹಿತರೆ ಮೊದಲಿಗೆ ಹಲವಾರು ಚಿತ್ರಗಳಲ್ಲಿ ಸೈಡ್ ಆಕ್ಟರ್ ಆಗಿ ನಟಿಸುತ್ತಾ ನಂತರ ಮೆಜೆಸ್ಟಿಕ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಅದಾದ ನಂತರ ಅವರ ಚಿತ್ರರಂಗದಲ್ಲಿ ಮೊದಲೇ ಯಶಸ್ಸನ್ನು ನೀಡಿದ್ದು ಕಲಾಸಿಪಾಳ್ಯ ಚಿತ್ರ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಮಾಸ್ ಅಭಿಮಾನಿಗಳ ಸರದಾರ ಎಂದು. ಇದಾದ ನಂತರ ಒಂದೊಂದು ಒಂದೊಂದು ಚಿತ್ರಗಳಲ್ಲಿ ಬೇರೆಯದೇ ರೀತಿಯ ಪಾತ್ರ ಮಾಡುವ ಪ್ರೇಕ್ಷಕರನ್ನು ಗೆಲ್ಲುತ್ತಾ ಬಂದರು. ಇದರ ಮಧ್ಯದಲ್ಲಿ ಯಾವ ಸಾಂಸಾರಿಕ ಸಮಸ್ಯೆಗಳು ಕೂಡ ಗಾಂಧಿನಗರದಲ್ಲಿ ಸಾಕಷ್ಟು ಸುದ್ದಿಯನ್ನು ಹರಡಿತ್ತು. ಇದೆಲ್ಲವನ್ನೂ ಮೀರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾರಥಿ ಚಿತ್ರದ ಮೂಲಕ ಸೂಪರ್ ಕಂಬ್ಯಾಕ್ ಮಾಡುತ್ತಾರೆ. ಆದರೆ ಇದಾದ ನಂತರ ಬಂದಂತಹ 7 ಚಿತ್ರಗಳು ಅವರ ಸಿನಿ ಜೀವನದಲ್ಲಿ ಅವರನ್ನು ಒಬ್ಬ ತಾಳಕ್ಕೆ ಕೊಂಡೊಯ್ಯುವಷ್ಟರಮಟ್ಟಿಗೆ ನಿರಾಸೆಯನ್ನು ಮಾಡುತ್ತವೆ.

ಹೌದು ಸ್ನೇಹಿತರೆ ಬೃಂದಾವನ ಅಂಬರೀಶ ವಿರಾಟ್ ಚಕ್ರವರ್ತಿ ಜಗ್ಗುದಾದ ಐರಾವತ ತಾರಕ್. ಈ 7ಚಿತ್ರಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿ ಜೀವನದಲ್ಲಿ ಅತ್ಯಂತ ವಿಫಲ ಚಿತ್ರಗಳು ಎಂದು ಹೇಳಬಹುದು. ಇದಾದ ನಂತರ ಅವರು ಕಂಬ್ಯಾಕ್ ಮಾಡಿದ್ದೆ ಯಜಮಾನ ಹಾಗೂ ಕುರುಕ್ಷೇತ್ರ ಚಿತ್ರದ ಮೂಲಕ. ಈ ಎರಡು ಚಿತ್ರಗಳು ಕೂಡ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚಿನ ಕಲೆಕ್ಷನ್ ಮಾಡಿದಂತಹ ಚಿತ್ರಗಳ ಲಿಸ್ಟ್ ನಲ್ಲಿ ಸೇರಿಕೊಂಡಿದೆ. ಇನ್ನು ಅವರ ಚಿತ್ರಗಳ ವಿಫಲತೆಗೆ ಮುಖ್ಯ ಕಾರಣವೆಂದರೆ ಅವರು ಆಯ್ಕೆಮಾಡುವ ಕಥೆ ಹಾಗೂ ನಿರ್ದೇಶಕರು. ಆದರೆ ಅವರು ಯಾವುದೇ ರೀತಿಯ ಸಿನಿಮಾ ಮಾಡಲಿ ಅವರ ಅಭಿಮಾನಿಗಳು ಅವರ ಕೈ ಬಿಡುವುದಿಲ್ಲ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ.

Leave A Reply

Your email address will not be published.