ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಕಾರ್ ಸಂಗ್ರಹ ಕೇಳಿದ್ರೆ ದಂಗಾಗಿಬಿಡುತ್ತಿರಾ; ಇಲ್ಲಿದೆ ಸಂಪೂರ್ಣ ಮಾಹಿತಿ.

Entertainment

ನಮಸ್ಕಾರ ಸ್ನೇಹಿತರೇ ತೆಲಗು ಚಿತ್ರಗಳು ಸಾಮಾನ್ಯವಾಗಿ ಐಷಾರಾಮಿ ನಿರ್ಮಾಣವೇ ಆಗಿರುತ್ತವೆ. ಟಾಲಿವುಡ್ ಸಿನಿಮಾಗಳಲ್ಲಿ ನಾಯಕ ನಾಯಕಿಯರ ಬಟ್ಟೆಯಿಂದ ಹಿಡಿದು ಫೈಟಿಂಗ್ ಸೀನ್ ಕೂಡ ತುಂಬಾ ರಿಚ್ ಆಗಿಯೇ ಇರುತ್ತೆ. ಇನ್ನು ಹಾಡುಗಳ ಚಿತ್ರೀಕರಣವನ್ನು ಫಾರಿನ್ ನಲ್ಲಿ ನಡೆಸುವುದು ಸಾಮಾನ್ಯ. ಹಾಗಾಗಿ ಇಂಥ ರಿಚ್ ಚಿತ್ರದಲ್ಲಿ ನಟಿಸುವ ನಟರೂ ಕೂಡ ಅಷ್ಟೇ ರಿಚ್ ಆಗಿರುತ್ತಾರೆ. ತೆಲಗು ನಟ ಮಹೇಶ್ ಬಾಬು ತಮ್ಮ ನಟನೆಯಿಂದ ಲಕ್ಷಗಟ್ಟಲೇ ಅಭಿಮಾನಿಗಳನ್ನ ಗಳಿಸಿದ್ದಾರೆ. ಇತ್ತೀಚಿಗೆ ತಮ್ಮ 46 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿನ್ಸ್ ಮಹೇಶ ಬಾಬು ಅವರಿಗೆ ಅಭಿಮಾನಿಗಳ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ.

ತೆಲುಗು ಚಿತ್ರರಂಗದ ಅದ್ಭುತ ನಟ ಕೃಷ್ಣ ಅವರ ಮಗ ಮಹೇಶ್ ಬಾಬು. ಬಾಲನಟನಾಗಿ ಅಭಿನಯಿಸಿದ್ದರೂ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ತಮ್ಮ ‘ರಾಜಕುಮಾರಡು’ ಸಿನಿಮಾ ಮೂಲಕ್. ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಹೇಶ್ ಬಾಬು ಜೋಡಿಯಾಗಿ ತೆರೆ ಹಂಚಿಕೊಂಡಿದ್ದರು. ಆನಂತರ ಮಹೇಶ್ ಬಾಬು ತಿರುಗಿ ನೋಡಿದ್ದೇ ಇಲ್ಲ. ಅವರ ನಟನೆಯ ಹೆಚ್ಚಿನ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ.

ಸ್ಟಾರ್‍ ನಟ ಮಹೇಶ್ ಬಾಬು ಅವರ ಆಸ್ತಿ ಎಷ್ಟಿದೆ ಗೊತ್ತಾ: ಸೂಪರ್ ಸ್ಟಾರ್ ಪ್ರಿನ್ಸ್, ಮಹೇಶ್ ಬಾಬು ಶ್ರೀಮಂತ ನಟ ಕೂಡ ಹೌದು. ಇವರ ಒಟ್ಟು ಆಸ್ತಿ 149 ಕೋಟಿ ಎಂದು ಇಂಗ್ಲಿಷ್ ಫಿಲ್ಮಿಬೀಟ್ ವರದಿಯಿಂದ ತಿಳಿದುಬಂದಿದೆ. ತಿಂಗಳಿಗೆ 2 ಕೋಟಿಯಷ್ಟು ಆದಾಯ ಗಳಿಸುವ ಮಹೇಶ್ ಬಾಬು ಒಂದು ಚಿತ್ರಕ್ಕೆ ಸುಮಾರು 22 ಕೋಟಿಯವರೆಗೂ ಗಳಿಸುತ್ತಾರಂತೆ. ಇನ್ನು ಮಹೇಶ್ ಬಾಬು ಜಾಹಿರಾತುಗಳಿಂದ ಗಳಿಸುವ ಸಂಭಾವನೆಯೇ ಜಾಸ್ತಿ. ಪ್ರತಿ ಜಾಹಿರಾತುಗಳಿಗೂ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ ಟಾಲಿವುಡ್ ಪ್ರಿನ್ಸ್. ಇವುಗಳ ಜೊತೆಗೆ ತಮ್ಮದೇ ಚಾರಿಟಬಲ್ ಟ್ರಸ್ಟ್ ಮೂಲಕ ಬಡವರ ಸಹಾಯಕ್ಕೂ ನಿಲ್ಲುತ್ತಾರೆ ಎನ್ನುವ ವಿಷಯ ಇಲ್ಲಿ ಗಮನಾರ್ಹ.

ಇನ್ನು ಮಹೇಶ್ ಬಾಬು ಅವರಿಗೆ ಕಾರ್ ಕ್ರೇಜ್ ಕೂಡ ಹೆಚ್ಚಾಗಿಯೇ ಇದ್ದಂತಿದೆ. ತಮ್ಮ ಬಳಿ ಹಲವು ದುಬಾರಿ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ರೇಂಜ್ ರೋವರ್ ವೋಗ್, ಮರ್ಸಿಡಿಸ್ ಜಿಎಲ್‌ಎಸ್ 350 ಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಇ 280, ಟೊಯೋಟಾ ಲ್ಯಾಂಡ್ ಕ್ರೂಸರ್ ವಿ8, ಮೊದಲಾದ ಕಾರುಗಳ ಸಂಗ್ರಹ ಮಾಡಿದ್ದಾರೆ ಮಹೇಶ್ ಬಾಬು. ಇನ್ನು ಮಹೇಶ್ ಬಾಬು ಬಳಸುವ ವ್ಯಾನಿಟಿ ವ್ಯಾನ್ ಸಹ ತುಬಾರಿಯಾಗಿದ್ದು ನಟ ಶಾರೂಖ್ ಖಾನ್ ಬಳಸುವ ವ್ಯಾನ್‌ಗಿಂತಲೂ ಹೆಚ್ಚಿನ ಮೊತ್ತದ್ದು ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *