Neer Dose Karnataka
Take a fresh look at your lifestyle.

ಇಂದಿಗೂ ಕೂಡ 20 ರ ಹುಡುಗಿಯಂತೆ ಕಾಣುವ ನಟಿ ಸುಮನ್ ರಂಗನಾಥ್ ರವರ ಪತಿಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

1

ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳಹೊರಟಿರುವ ಕನ್ನಡ ಚಿತ್ರರಂಗದ ಖ್ಯಾತ ನಟಿ ಹಲವಾರು ವರ್ಷಗಳಿಂದ ಹಲವಾರು ಭಾಷೆಗಳಲ್ಲಿ ನಟಿಸುತ್ತ ಬಂದಿದ್ದರು ಕೂಡ ಇಂದಿಗೂ ಕೂಡ ಚಿರ ಯುವತಿಯಂತೆ ಕಾಣಿಸುತ್ತಿದ್ದಾರೆ. ಇಂದಿಗೂ ಕೂಡ ಯುವ ನಟಿಯರು ನಾಚುವಂತೆ ಸೌಂದರ್ಯವತಿಯಾಗಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಸುಮನ ರಂಗನಾಥ್ ಅವರ ಕುರಿತಂತೆ.

ಸುಮನ ರಂಗನಾಥ ರವರು ಪ್ರಶಸ್ತಿ ವಿಜೇತ ಚಿತ್ರ ಸಂತ ಶಿಶುನಾಳ ಶರೀಫ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಯನ್ನು ಪ್ರಾರಂಭಿಸುತ್ತಾರೆ. ಇನ್ನು ಇವರು ಶಂಕರ್ ನಾಗ್ ನಟನೆಯ ಸಿಬಿಐ ಶಂಕರ್ ಚಿತ್ರದಲ್ಲಿ ಕೂಡ ನಟಿಸಿ ಜನಪ್ರಿಯತೆ ಪಡೆದರು. ಇನ್ನು ಈ ಚಿತ್ರದ ನಂತರ ಅವರ ಬೇಡಿಕೆ ಹೆಚ್ಚಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಸುಮನ ರಂಗನಾಥ ರವರು 1996 ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಕೂಡ ಪಾದರ್ಪಣೆ ಮಾಡುತ್ತಾರೆ. ಇನ್ನು ಸುಮನಾ ರಂಗನಾಥ್ ರವರು 2007 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೂಡ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕೂಡ ಹಲವಾರು ಕಾರ್ಯಕ್ರಮಗಳಲ್ಲಿ ಮುಖ್ಯಅತಿಥಿ ಹಾಗೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಸುಮನ ರಂಗನಾಥ್ ರವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಇವರು ಮೊದಲು ಬಾಲಿವುಡ್ ಚಿತ್ರರಂಗದ ನಿರ್ಮಾಪಕರಾದಂತಹ ಬಂಟಿ ವಾಲಿಯ ರವರನ್ನು ವಿವಾಹವಾಗುತ್ತಾರೆ. ನಂತರ 2007 ರಲ್ಲಿ ಇವರಿಬ್ಬರು ಪರಸ್ಪರ ದೂರ ಆಗುತ್ತಾರೆ. ಇನ್ನು 2019 ರಲ್ಲಿ ಸುಮನ್ ರಂಗನಾಥ್ ಅವರು ಸಜ್ಜನ್ ಎನ್ನುವವರನ್ನು ಮದುವೆಯಾಗುತ್ತಾರೆ. ಇನ್ನು ಇವರಿಬ್ಬರು ಈಗ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಸುಮನ ರಂಗನಾಥ್ ರವರಿಗೆ ವಯಸ್ಸು ನಲವತ್ತರ ಮೇಲೆ ಆಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ನಾಯಕನಟಿಯ ಪಾತ್ರವನ್ನು ನಿರ್ವಹಿಸುವ ಸೌಂದರ್ಯ ಅವರಿಗಿದೆ.

Leave A Reply

Your email address will not be published.