Neer Dose Karnataka
Take a fresh look at your lifestyle.

ಎಷ್ಟೆಲ್ಲ ಸಾಧನೆ ಮಾಡಿರುವ ಸುದೀಪ್ ರವರ ಜೀವನದಲ್ಲಿ ಅಟ್ಟರ್ ಪ್ಲಾಪ್ ಆದ ಚಿತ್ರಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ತನ್ನನ್ನು ತಾನು ಸಾಬೀತುಪಡಿಸಿ ಕೊಂಡಿರುವ ನಟ ಎಂದರೆ ನಮಗೆ ನೆನಪಿಗೆ ಬರುವುದು ಖಂಡಿತವಾಗಿ ನಿಸ್ಸಂಶಯವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತ್ರ. ಇಂದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಹೊಂದಿರುವ ನಟ ಕಿಚ್ಚ ಸುದೀಪ್ ಅವರು. ಇಂದು ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತವೆ. ಆದರೆ ಒಂದು ಕಾಲದಲ್ಲಿ ಕಿಚ್ಚ ಸುದೀಪ್ ರವರು ಕೂಡ ಸಾಕಷ್ಟು ಸೋಲುಗಳನ್ನು ಅನುಭವಿಸಿದ್ದರು. ಹಿಂದಿನ ವಿಚಾರದಲ್ಲಿ ನಾವು ಕಿಚ್ಚ ಸುದೀಪ್ ರವರ 10 ಫ್ಲಾಪ್ ಚಿತ್ರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ.

ಪಾರ್ಥ 2003 ರಲ್ಲಿ ಬಿಡುಗಡೆಯಾದ ಅಂತಹ ಕಿಚ್ಚ ಸುದೀಪ್ ನಟನೆಯ ಪಾರ್ಥ ಚಿತ್ರ ಓಂ ಪ್ರಕಾಶ್ ರಾವ್ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು ಈ ಚಿತ್ರದಲ್ಲಿ ಕಿಚ್ಚ ಸುದೀಪ್ ರವರ ಕಾಲೇಜ್ ವಿದ್ಯಾರ್ಥಿಯ ಪಾತ್ರದಲ್ಲಿ ಸಕ್ಕತ್ತಾಗಿ ಕಾಣಿಸಿಕೊಂಡಿದ್ದರು. ಆದರೆ ಬಾಕ್ಸಾಫೀಸಿನಲ್ಲಿ ಚಿತ್ರ ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ.

ಕಾಶಿ ಫ್ರಮ್ ವಿಲೇಜ್ 2005 ರಲ್ಲಿ ಬಿಡುಗಡೆಯಾದ ಅಂತಹ ಕಾಶಿ ಫ್ರಮ್ ವಿಲೇಜ್ ತಮಿಳಿನ ಭಗವತಿ ಚಿತ್ರದ ರಿಮೇಕ್ ಆಗಿತ್ತು. ಇದು ಕೂಡ ಬಾಕ್ಸಾಫೀಸ್ ನಲ್ಲಿ ವಿಫಲವಾಗಿತ್ತು. ಸೈ ತಮಿಳಿನ ದಿಲ್ ಚಿತ್ರದ ರಿಮೇಕ್ ಆಗಿದ್ದ ಚಿತ್ರ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ರವರ ನಟನೆಯೊಂದಿಗೆ ಬಿಡುಗಡೆಯಾಗಿ ಸೋಲನ್ನು ಅನುಭವಿಸಿತು.

ನಮ್ಮಣ್ಣ ಇದು ಕೂಡ ತಮಿಳಿನ ಅಣ್ಣ ಚಿತ್ರದ ರೀಮೇಕ್ 2005 ರಲ್ಲಿ ಬಿಡುಗಡೆಯಾಗಿ ಕೆಲ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ಸನ್ನು ಕಂಡರು ಕೂಡ ಬಾಕ್ಸಾಫೀಸ್ ನಲ್ಲಿ ಲಾಭವನ್ನು ಪಡೆಯಲಿಲ್ಲ. ತಿರುಪತಿ ಕಿಚ್ಚ ಸುದೀಪ್ ರವರು ಖಾಕಿ ತೊಟ್ಟು ತಿರುಪತಿ ಚಿತ್ರದ ಮೂಲಕ ಎಲ್ಲರ ಮನಗೆಲ್ಲಲು ಯಶಸ್ವಿಯಾದರು ಆದರೆ ಈ ಚಿತ್ರ ಮಾತ್ರ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸನ್ನು ಕಾಣಲಿಲ್ಲ.

#73 ಶಾಂತಿ ನಿವಾಸ 2007 ರಲ್ಲಿ ಬಿಡುಗಡೆಯಾದ ಅಂತಹ ಶಾಂತಿನಿವಾಸ ಚಿತ್ರ ಸುದೀಪ್ ಅವರು ನಿರ್ದೇಶಿಸಿ ನಿರ್ಮಿಸಿದ ಚಿತ್ರ. ಆದರೆ ಇಂತಹ ಒಳ್ಳೆಯ ಸಾಂಸಾರಿಕ ಚಿತ್ರ ಪ್ರೇಕ್ಷಕರಿಗೆ ಮಾತ್ರ ರುಚಿಸಲಿಲ್ಲ. ಕಾಮಣ್ಣನ ಮಕ್ಕಳು 2008 ರಲ್ಲಿ ಚಿ ಗುರುದತ್ತ ನಿರ್ದೇಶನದಲ್ಲಿ ಹಾಗೂ ಕಿಚ್ಚ ಸುದೀಪ್ ರಾಕ್ ಲೈನ್ ವೆಂಕಟೇಶ್ ದೊಡ್ಡಣ್ಣ ಮೂವರು ಕೂಡ ಒಟ್ಟಾಗಿ ನಟಿಸಿದಂತಹ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗೆಲುವು ಸಾಧಿಸಲಿಲ್ಲ.

ಜಸ್ಟ್ ಮಾತ್ ಮಾತಲ್ಲಿ ಕಿಚ್ಚ ಸುದೀಪ್ ಹಾಗೂ ರಮ್ಯಾ ರವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಗೆಲುವನ್ನು ಕಾಣದಿದ್ದರೂ ಕೂಡ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಮಿಸ್ಟರ್ ತೀರ್ಥ ಸಾಧುಕೋಕಿಲ ನಿರ್ದೇಶನದಲ್ಲಿ ಹಾಗೂ ಸುದೀಪ್ ನಟನೆಯಲ್ಲಿ ಮೂಡಿ ಬಂದಂತಹ ಈ ಚಿತ್ರ 2010 ರಲ್ಲಿ ಬಿಡುಗಡೆಯಾಯಿತು. ಪ್ರಚಾರದ ಕೊರತೆಯಿಂದಾಗಿ ಈ ಚಿತ್ರ ಕೂಡ ಸೋತಿತು. ಕಿಚ್ಚ ಹುಚ್ಚ ಮತ್ತೊಮ್ಮೆ ಕಿಚ್ಚ ಸುದೀಪ್ ಹಾಗೂ ರಮ್ಯಾ ಕಾಂಬಿನೇಷನ್ ಈ ಚಿತ್ರದ ಮೂಲಕ ಕಾಣಿಸಿಕೊಂಡರು ಕೂಡ ಈ ಚಿತ್ರವು ಕೂಡ ಸೋತು ಮತ್ತೆ ನಿರಾಸೆಯನ್ನು ಅನುಭವಿಸುವಂತಾಯಿತು.

Comments are closed.