Neer Dose Karnataka
Take a fresh look at your lifestyle.

ವಿಜಯಲಕ್ಷ್ಮಿ ಅವರ ತಾಯಿಯ ಕೊನೆಯ ಸಂಸ್ಕಾರವನ್ನು ಮಾಡಿದ್ದು ಯಾರು ಗೊತ್ತಾ?? ಕೊನೆಗಳಿಗೆಯಲ್ಲಿ ಕೈ ಹಿಡಿದ್ದು ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿಯವರ ಕುರಿತಂತ ನೀವು ಹಲವಾರು ವಿಚಾರಗಳನ್ನು ವಿಡಿಯೋ ಮೂಲಕ ನೋಡಿರುತ್ತೀರಿ. ಹೌದು ಸ್ನೇಹಿತರೆ ವಿಜಯಲಕ್ಷ್ಮಿ ಅವರು ತಮ್ಮ ತಾಯಿ ಹಾಗೂ ಅಕ್ಕನಿಗಾಗಿ ಪಡುತ್ತಿರುವ ಕಷ್ಟಗಳನ್ನು ನೀವೆಲ್ಲ ಅವರ ಮಾತುಗಳಿಂದ ಕೇಳಿರುತ್ತೀರಿ. ಹೌದು ಸ್ನೇಹಿತರೆ ಈ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಕೂಡ ವಿಜಯಲಕ್ಷ್ಮಿಯವರು ವೀಡಿಯೋ ಮೂಲಕ ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಕೇಳಿಕೊಂಡಿದ್ದರು ಸಹಾಯ ಮಾಡುವಂತೆ.

ಇನ್ನು ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆಯ ಬಿಲ್ ಭರಿಸಲು ಸಹಾಯ ಮಾಡಿದ್ದರು. ಇದಾದ ನಂತರ ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮಿಯವರು ತನಗೆ ಇರಲು ಮನೆ ಇಲ್ಲ ಮನೆ ಮಾಡಿಕೊಡಿ ಎನ್ನುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಇದಕ್ಕೆ ಸ್ಪಂದಿಸಿದ ವ್ಯಕ್ತಿಯೊಬ್ಬರು ಕಾರವಾರದ ಬಳಿಯ ಕರ್ಕಿ ಎಂಬಲ್ಲಿ ಮನೆ ಮಾಡಿಕೊಟ್ಟಿದ್ದರು ಆದರೆ ಅಲ್ಲಿ ಹಲವಾರು ಸಮಸ್ಯೆಗಳಿವೆ ಎಂಬ ಕಾರಣಕ್ಕಾಗಿ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇನ್ನು ವಿಜಯಲಕ್ಷ್ಮಿಯವರು ಕಷ್ಟಪಡುತ್ತಿದ್ದರು ಕೇವಲ ತಮ್ಮ ತಾಯಿ ಹಾಗೂ ಅಕ್ಕನಿಗಾಗಿ.

ಆದರೆ ವಿಜಯಲಕ್ಷ್ಮಿ ಅವರ ತಾಯಿ ನೆನ್ನೆಯಷ್ಟೇ ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದ್ದಲ್ಲೇ ಇಹ ಲೋಕವನ್ನು ತ್ಯಜಿಸಿದ್ದಾರೆ. ಹೌದು ಸ್ನೇಹಿತರೆ ತಾಯಿ ಆರೈಕೆಗಾಗಿ ಸಾಕಷ್ಟು ಕಷ್ಟ ಪಡುತ್ತಿದ್ದ ವಿಜಯಲಕ್ಷ್ಮಿಯವರು ತಾಯಿಯನ್ನು ಕೊನೆಗೂ ಕೂಡ ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಈ ಸಮಯದಲ್ಲಿ ಬಾಮಾ ಹರೀಶ್ ಸೇರಿದಂತೆ ಹಲವಾರು ಜನರು ಬಂದು ವಿಜಯಲಕ್ಷ್ಮಿಯವರಿಗೆ ಅಗತ್ಯ ನೆರವನ್ನೂ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರ ತಾಯಿಯ ಕೊನೆಯ ಕ್ರಿಯೆಗಳನ್ನು ಮಾಡಲು ಸಹಕರಿಸಿದ್ದು ಯಾರು ಗೊತ್ತಾ ಸ್ನೇಹಿತರೆ.

ಹೌದು ಸ್ನೇಹಿತರೆ ತಮ್ಮ ಆಶ್ರಮಕ್ಕೆ ವಿಜಯಲಕ್ಷ್ಮಿಯವರ ತಾಯಿಯ ದೇಹವನ್ನು ತಂದು ವಿಧಿವಿಧಾನ ವಾಗಿ ಸಂಸ್ಕಾರಗಳನ್ನು ಮುಗಿಸಿದವರು ಜನಸ್ನೇಹಿ ಯೋಗೇಶ್ ಎಂಬುವವರು. ಇವರನ್ನು ಮಾತ್ರವಲ್ಲದೆ ಹಲವಾರು ಬಾರಿ ಅಸಹಾಯಕ ಜನರ ಸೇವೆ ಮಾಡಿದ್ದಾರೆ. ಈಗ ವಿಜಯಲಕ್ಷ್ಮಿಯವರ ತಮ್ಮನಾಗಿ ವಿಜಯಲಕ್ಷ್ಮಿಯವರ ತಾಯಿಯ ಸಂಸ್ಕಾರವನ್ನು ಮುಗಿಸಿದ್ದಾರೆ. ಈ ಕುರಿತಂತೆ ನೀವು ಏನು ಹೇಳುತ್ತೀರ ಸ್ನೇಹಿತರೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.