ಅಲ್ಲಿ ಇಲ್ಲಿ ಕೇಳಿ ಬರುತ್ತಿರುವ ಅಂದಾಜು ಬಿಡಿ, ಮೊದಲನೇ ದಿನವೇ ಕೋಟಿಗೊಬ್ಬ-3 ಕಲೆಕ್ಷನ್ ಎಷ್ಟು ಕೋಟಿ ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಕಳೆದ ಎರಡು ದಿನಗಳಿಂದ ಕನ್ನಡದ ಥಿಯೇಟರ್ಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ, ಅದರಲ್ಲಿಯೂ ಇಂದು ಅಭಿನಯ ಚಕ್ರವರ್ತಿಯ ಸಿನಿಮಾ ಬಿಡುಗಡೆಯಾದ ಕಾರಣ ನಿಜಕ್ಕೂ ಥಿಯೇಟರ್ಗಳಲ್ಲಿ ಯಾವುದೇ ಹಬ್ಬಕ್ಕೂ ಕಮ್ಮಿ ಇಲ್ಲದ ವಾತಾವರಣ ಸೃಷ್ಟಿಯಾಗಿತ್ತು ಎಂದರೆ ತಪ್ಪಾಗಲಾರದು. ಇಡೀ ಕರ್ನಾಟಕದಲ್ಲಿ ದಸರಾ ಹಬ್ಬ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವ ಸಮಯದಲ್ಲಿ ಕೋಟಿಗೊಬ್ಬ ಸಿನಿಮಾ ಬಿಡುಗಡೆ ಸಮಯ ಕೂಡ ನಿಜಕ್ಕೂ ಹಬ್ಬದಂತೆ ಭಾಸವಾಗಿತ್ತು. ನೆನ್ನೆ ಬಿಡುಗಡೆಯಾಗ ಬೇಕಾದ ಸಿನಿಮಾ ಇಂದು ಬಿಡುಗಡೆಯಾದರೂ ಕೂಡ ಪ್ರೇಕ್ಷಕರು ಎರಡನೆಯ ಆಲೋಚನೆಯ ಇಲ್ಲದೆ ಅಂದುಕೊಂಡಂತೆ ಥೇಟರ್ ಗಳತ್ತ ಧಾವಿಸಿದ್ದರು.

ನಿರೀಕ್ಷೆಗೂ ಹೆಚ್ಚಿನ ಮಟ್ಟದಲ್ಲಿ ಕೋಟಿಗೊಬ್ಬ ಸಿನಿಮಾ ಭರ್ಜರಿ ಆರಂಭ ಪಡೆದುಕೊಂಡು ಎರಡು ವರ್ಷಗಳಿಂದ ಸುದೀಪ್ ರವರ ಸಿನಿಮಾಗಾಗಿ ಕಾದು ಕುಳಿತಿದ್ದು ವ್ಯರ್ಥವಾಗಲಿಲ್ಲ. ಯಾಕೆಂದರೆ ತನ್ನನ್ನು ಯಾಕೆ ಇಡೀ ಕರ್ನಾಟಕದ ಜನರು ಅಭಿನಯ ಚಕ್ರವರ್ತಿಗೆ ಎಂದು ಕರೆಯುತ್ತಾರೆ ಎಂಬುದನ್ನು ಸುದೀಪ್ ರವರು ಮತ್ತೊಮ್ಮೆ ತಮ್ಮ ನಟನೆಯ ಮೂಲಕ ಈ ಸಿನಿಮಾದಲ್ಲಿ ತೋರಿಸಿ ಕೊಟ್ಟಿದ್ದಾರೆ. ಬಹಳ ಅದ್ಭುತವಾಗಿ ನಟನೆ ಮಾಡಿರುವ ಸುದೀಪ್ ರವರು ಮತ್ತೊಮ್ಮೆ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆಲ್ಲುವಲ್ಲಿ ಶೇಕಡ ನೂರರಷ್ಟು ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಎಲ್ಲಾ ಕಡೆಯಿಂದಲೂ, ಎಲ್ಲಾ ವರ್ಗದ ಪ್ರೇಕ್ಷಕರಿಂದಲೂ ಕೂಡ ಉತ್ತಮ ವಿಮರ್ಶೆ ಪಡೆದುಕೊಂಡು ಭರ್ಜರಿ ಆರಂಭವನ್ನು ಪಡೆದುಕೊಂಡಿರುವ ಕೋಟಿಗೊಬ್ಬ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ನ ಲೆಕ್ಕಾಚಾರಗಳು ಇಡೀ ಗಾಂಧಿ ನಗರದಲ್ಲಿ ಈಗಾಗಲೇ ಆರಂಭಗೊಂಡಿದೆ. ಮೊದಲನೇ ದಿನದ ಆನ್ಲೈನ್ ಬುಕ್ಕಿಂಗ್ ಗಳು ಹಾಗೂ ಆಫ್ ಲೈನಲ್ಲಿ ಈಗಾಗಲೇ ಮಾರಾಟ ಗೊಂಡಿರುವ ಟಿಕೆಟ್ ಗಳ ಲೆಕ್ಕಾಚಾರದ ಮೇರೆಗೆ ಕೋಟಿಗೊಬ್ಬ ಸಿನಿಮಾ ಎಷ್ಟು ಗಳಿಸಿದೆ ಎಂಬುದನ್ನು ಲೆಕ್ಕಹಾಕಲು ಸಿನಿಮಾ ಪಂಡಿತರು ಆರಂಭಿಸಿ ಲೆಕ್ಕ ಹಾಕಿದಾಗ ಮೊದಲ ದಿನವೇ ಹೆಸರಿನಲ್ಲಿ ಕೋಟಿ ಇರುವಂತೆ ಕೋಟಿಗೊಬ್ಬ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಪಡೆದು ಕೊಂಡಿದೆ. ಹೌದು ಸ್ನೇಹಿತರೆ ಗಾಂಧಿ ನಗರದ ಮೂಲಗಳ ಪ್ರಕಾರ ಮೊದಲ ದಿನವೇ ಕೋಟಿಗೊಬ್ಬ ಸಿನಿಮಾ ಹತ್ತರಿಂದ ಹನ್ನೆರಡು ಕೋಟಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದು ತಿಳಿದುಬಂದಿದೆ.

Leave a Reply

Your email address will not be published. Required fields are marked *