Neer Dose Karnataka
Take a fresh look at your lifestyle.

ಚಿರು ಸರ್ಜಾ ಜನ್ಮದಿನಕ್ಕೆ ಜೂನಿಯರ್ ಚಿರು ಸರ್ಜಾ ಹಾಗೂ ಮೇಘನರಾಜ್ ರವರಿಂದ ಸರ್ಪ್ರೈಸ್ ಗಿಫ್ಟ್. ಅಭಿಮಾನಿಗಳು ಫುಲ್ ಕುಶ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ನಿಮಗೆಲ್ಲ ತಿಳಿದಿರುವಂತೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟನಾಗಿ ಇದ್ದಂತಹ ಚಿರು ಸರ್ಜಾ ರವರ ಜನ್ಮ ದಿನದ ಸಂಭ್ರಮ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಚಿರುಸರ್ಜ ಅವರು ನಮ್ಮೊಂದಿಗೆ ಇದ್ದರೆ ಅವರ ಮನೆಯ ಮುಂದೆ ನೂರಾರು ಅಭಿಮಾನಿಗಳು ಬಂದು ಕೇಕ್ ನೀಡಿ ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದರು.

ಆದರೆ ಆ ವಿಧಿಯ ಕೈವಾಡ ದಿಂದಾಗಿ ಚಿರು ಸರ್ಜಾ ರವರು ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ. ಆದರೂ ಕೂಡ ಇಂದು ಅವರ ಜನ್ಮದಿನದ ವಿಶೇಷವಾಗಿ ಹಲವಾರು ವಿಶೇಷತೆಗಳು ಒಂದೊಂದಾಗಿ ಹೊರಬರುತ್ತಿವೆ. ಮೊದಲಿಗೆ ಚಿರು ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡ. ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು ಅರ್ಧಭಾಗದ ಡಬ್ಬಿಂಗ್ ಕೂಡ ಚಿರು ಸರ್ಜಾ ರವರು ಮಾಡಿದ್ದರು. ಆದರೆ ಇದಾದ ನಂತರ ಅವರು ಇಹಲೋಕವನ್ನು ತ್ಯಜಿಸಿದರು. ಈ ಕಾರಣದಿಂದಾಗಿ ಅವರ ಭಾಗದ ಡಬ್ಬಿಂಗನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಪೂರ್ಣಗೊಳಿಸಿದರು. ಇನ್ನು ಚಿರು ಸರ್ಜಾ ರವರ ಜನ್ಮ ದಿನದ ವಿಶೇಷವಾಗಿ ಜೂನಿಯರ್ ಚಿರುಸರ್ಜ ಹಾಗೂ ಮೇಘನಾ ರಾಜ್ ರವರು ಅಭಿಮಾನಿಗಳಿಗೆ ಸರ್ಪ್ರೈಸ್ ಅನ್ನು ನೀಡುತ್ತಿದ್ದಾರೆ.

ಅದೇನೆಂದರೆ ತಂದೆಯಾದ ಚಿರು ಸರ್ಜಾ ರವರ ರಾಜಮಾರ್ತಾಂಡ ಚಿತ್ರದ ಟೀಸರ್ ಅನ್ನು ಮಗ ಜೂನಿಯರ್ ಚಿರು ಸರ್ಜಾ ರವರು ಇಂದು ಬಿಡುಗಡೆ ಮಾಡಲಿದ್ದಾರೆ. ಇನ್ನು ಇತ್ತ ಮೇಘನರಾಜ ರವರು ಮತ್ತೆ ಸಿನಿಮಾದಲ್ಲಿ ನಟಿಸಬೇಕೆಂಬ ಅವರ ಅಭಿಮಾನಿಗಳ ಆಸೆಯ ಮೇರೆಗೆ ಇಂದು ಅವರ ತಮ್ಮ ಹೊಸ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ. ಚಿರು ಸರ್ಜಾ ರವರ ಜನ್ಮ ದಿನದ ವಿಶೇಷವಾಗಿ ಒಂದೇ ದಿನಕ್ಕೆ ಎರಡು ಸರ್ಪ್ರೈಸ್ ಗಳನ್ನು ನೀಡಿದ್ದಾರೆ ಅಮ್ಮ ಹಾಗೂ ಮಗ. ಇದೇ ರೀತಿ ಅವರ ಜೀವನದಲ್ಲಿ ಸಂತೋಷ ತುಂಬಿ ತುಳುಕಲಿ ಎಂದು ಹಾರೈಸೋಣ ಸ್ನೇಹಿತರೆ.

Comments are closed.